August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ “ಅಂತರಾಷ್ಟ್ರೀಯ ನಾಟಕೋತ್ಸವ” – ಉಚಿತ ಪ್ರವೇಶ  

ನಾಟಕದ ಪ್ರಿಯರು ಮತ್ತು ಸಾಂಸ್ಕೃತಿಕ ಆಸಕ್ತರಿಗೆ ಸೂಕ್ತ ಅವಕಾಶ

 

ಅಸ್ತಿತ್ವ (ರಿ.) ಮಂಗಳೂರು, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಆಯೋಜನೆ

ಮಂಗಳೂರಿನಲ್ಲಿ “ಅಂತರಾಷ್ಟ್ರೀಯ ನಾಟಕೋತ್ಸವ”ಸಾಂಸ್ಕೃತಿಕ ಉತ್ಸವದ ರೂಪದಲ್ಲಿ ಕರಾವಳಿಯ ರಂಗಜ್ಞರಿಗೆ ಹಾಗೂ ನಾಟಕಪ್ರೇಮಿಗಳಿಗೆ ಹೊಸ ಅನುಭವವನ್ನು ನೀಡಲು ಸಜ್ಜಾಗಿದೆ. ಈ ನಾಟಕೋತ್ಸವವನ್ನು ಅಸ್ತಿತ್ವ (ರಿ.) ಮಂಗಳೂರು, ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಹಾಗೂ ಅರೆಹೊಳೆ ಪ್ರತಿಷ್ಠಾನವು ಸಹಯೋಗದಲ್ಲಿ ಆಯೋಜಿಸುತ್ತಿವೆ.

ನಾಟಕೋತ್ಸವದ ವೈಶಿಷ್ಟ್ಯಗಳು :

ದಿನಾಂಕ 27-11-2025; ನಾಟಕ: ಸೈರನ್….; ಭಾಷೆ: ಕನ್ನಡ; ನಿರ್ದೇಶನ: ರೋಹಿತ್ ಬೈಕಾಡಿ; ತಂಡ: ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)

ದಿನಾಂಕ 28-11-2025; ನಾಟಕ: ಪೋಲಿಟಿಕಲ್ ಪ್ರಿಸನರ್ಸ್; ಭಾಷೆ: ಕನ್ನಡ; ರಚನೆ: ಅನುಷ್ ಶೆಟ್ಟಿ ಮತ್ತು ಪ್ರಗಾಥ ಮೋಹನ್; ನಿರ್ದೇಶನ: ಅನುಷ್ ಶೆಟ್ಟಿ; ತಂಡ: ನಿರ್ದಿಗಂತ ಮೈಸೂರು

ದಿನಾಂಕ 29-11-2025; ನಾಟಕ: ಯೇನಾ ಜಾಲ್ಯಾರ್ ವಚಾನಾ; ಭಾಷೆ: ಕೊಂಕಣಿ; ರಚನೆ ಮತ್ತು ನಿರ್ದೇಶನ: ಪ್ರದೀಪ್ ಬರ್ಬೋಜಾ ಪಾಲಡ್ಕ; ತಂಡ: ಸಾಂಗೊನ್ ಮುಗ್ದಾನಾ ಕಲಾಕಾರ್, ದುಬೈ

ದಿನಾಂಕ 30-11-2025; ನಾಟಕ: ಚಿರಿ……. (ತೀಸ್ ನಾಣ್ಯಾಂಚಿ); ಭಾಷೆ: ಕೊಂಕಣಿ; ಪ್ರಸ್ತುತಿ: ಅಸ್ತಿತ್ವ (ರಿ.) ಮಂಗಳೂರು; ರಚನೆ: ಡಾ. ಆಲ್ವಿನ್ ಸೆರಾವೊ; ಸ್ಥಳ: LCRI, Auditorium, St Aloysius (Deemed to be University) Mangalore

ಸಮಯ: ಸಂಜೆ 6.30 ಘಂಟೆಗೆ ಸರಿಯಾಗಿ

ಈ ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳಲ್ಲಿ ಸುಂದರವಾದ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು, ಎಲ್ಲಾ ನಾಟಕಗಳಿಗೆ ಪ್ರವೇಶ ಉಚಿತವಾಗಿದೆ. ನಾಟಕದ ಪ್ರಿಯರು ಮತ್ತು ಸಾಂಸ್ಕೃತಿಕ ಆಸಕ್ತರಿಗೆ ಇದು ಒಂದು ಅಪರೂಪದ ಅವಕಾಶ.

ವಿಶೇಷ ಸಹಕಾರ: ಕನ್ನಡ ವಿಭಾಗ, ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯ, ಮಂಗಳೂರು. ನಾಟಕೋತ್ಸವದಲ್ಲಿ ನಿಮ್ಮ ಉಪಸ್ಥಿತಿಗೆ ನಿಮ್ಮನ್ನು ಆಮಂತ್ರಿಸುತ್ತೇವೆ!

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page