May 6, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಐಕ್ಯ ವೇದಿಕೆ ಕೊಡಾಜೆ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಭಾರತ್ ಕಾರ್ಸ್ ಆಯ್ಕೆ

ಮಾಣಿ ಸಮೀಪದ ಕೊಡಾಜೆ ಐಕ್ಯ ವೇದಿಕೆ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಭಾರತ್ ಕಾರ್ಸ್ ಆಯ್ಕೆಯಾದರು. ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ಅಧ್ಯಕ್ಷತೆಯಲ್ಲಿ ನವೆಂಬರ್ 23ರಂದು  ಭಾನುವಾರ ನಡೆದ ವೇದಿಕೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಶುಭ ಹಾರೈಸಿದರು.

ಐಕ್ಯ ವೇದಿಕೆಯ ನೂತನ ಅಧ್ಯಕ್ಷರಾಗಿ ಭಾರತ್ ವೆಹಿಕಲ್ ಬಜಾರ್ ಮಾಲಕ ಅಶ್ರಫ್ ತಿಂಗಳಾಡಿ, ಉಪಾಧ್ಯಕ್ಷರಾಗಿ ರಝಾಕ್ ಅನಂತಾಡಿ, ಆದಂ ಎಸ್.ಎಂ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಅನಂತಾಡಿ, ಜೊತೆ ಕಾರ್ಯದರ್ಶಿಯಾಗಿ ಎಸ್.ಎಸ್. ಮಸೂದ್ ಕೊಡಾಜೆ, ಕೋಶಾಧಿಕಾರಿಯಾಗಿ ಎಸ್.ಎಸ್. ರಫೀಕ್ ಕೊಡಾಜೆ ಆಯ್ಕೆಯಾದವರು.

ಗೌರವ ಸಲಹೆಗಾರರಾಗಿ ನಿಕಟಪೂರ್ವ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸೋಡ್ತಿ ಉಸ್ತುವಾರಿಯಾಗಿ ನಿಕಟಪೂರ್ವ ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನ್ಸೂರ್ ನೇರಳಕಟ್ಟೆ, ಪತ್ರಿಕಾ ಕಾರ್ಯದರ್ಶಿ ಗಳಾಗಿ ನೌಫಲ್ ಕೊಡಾಜೆ ಹಾಗೂ ಮಜೀದ್ ಅನಂತಾಡಿ, ಕ್ರೀಡಾ ಕಾರ್ಯದರ್ಶಿಗಳಾಗಿ ರಫೀಕ್ ಪಂಥಡ್ಕ ಹಾಗೂ ಫಾರೂಕ್ ಕೊಡಾಜೆ, ಆರೋಗ್ಯ ಕಾರ್ಯದರ್ಶಿಯಾಗಿ ಸಲೀಂ ಪರ್ಲೋಟ್, ಶೈಕ್ಷಣಿಕ ಕಾರ್ಯದರ್ಶಿಯಾಗಿ ಹಫೀಝ್ ನೇರಳಕಟ್ಟೆ, ಸಾಮಾಜಿಕ ಕಾರ್ಯದರ್ಶಿಯಾಗಿ ಫಾರೂಕ್ ಪಂಥಡ್ಕ ಅವರನ್ನು ಆರಿಸಲಾಯಿತು.

ಕಾರ್ಯದರ್ಶಿ ಶರೀಫ್ ಅನಂತಾಡಿ ಸ್ವಾಗತಿಸಿ, ವರದಿ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ ವಂದಿಸಿದರು.

You may also like

News

ಮುಕ್ಕ ಚೇಳ್ಯಾರು ಸಂತ ಜೋಸೆಫ್ ಪ್ರಾರ್ಥನಾ ಮಂದಿರದ ದಶಮಾನೋತ್ಸವ ಹಾಗೂ ವಾರ್ಷಿಕೋತ್ಸವ ಸಂಭ್ರಮ

“ಪ್ರಾರ್ಥನಾ ಮಂದಿರಗಳು ಮನುಷ್ಯರಲ್ಲಿ ಪ್ರೀತಿಯನ್ನು ಬಿತ್ತಬೇಕು” – ಡಾ| ಗಣೇಶ್ ಅಮಿನ್ ಸಂಕಮಾರ್ ಕಥೋಲಿಕ ತೈಲಾಗಾರ ನಿರ್ವಸಿತರ ಅಭಿವೃದ್ಧಿ ಸಮಿತಿ (ರಿ.) ಮುಕ್ಕ ಚೇಳ್ಯಾರು ಇದರ ಆಶ್ರಯದಲ್ಲಿ,
News

ಡಿಜಿಟಲ್ ಒತ್ತಡದ ನಡುವೆ ಮಾನಸಿಕ ಸಮತೋಲನ ಅಗತ್ಯ – ಆಡ್ಯಾರ್‌ನ ಸೈಂಟ್ ಲೂರ್ಡ್ಸ್ ಸಂಸ್ಥೆಯಲ್ಲಿ ಸಮ್ಮೇಳನ

ಇಂದಿನ ವೇಗದ ಡಿಜಿಟಲ್ ಜಗತ್ತಿನಲ್ಲಿ ಯುವಜನತೆ ಎದುರಿಸುತ್ತಿರುವ ಮಾನಸಿಕ ಸವಾಲುಗಳು ಮತ್ತು ಒತ್ತಡ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಡ್ಯಾರ್‌ನ  ಸೈಂಟ್ ಲೂರ್ಡ್ಸ್ ಇನ್ಸ್ಟಿಟ್ಯೂಶನ್ಸ್ ವತಿಯಿಂದ

You cannot copy content of this page