August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಹುನಿರೀಕ್ಷಿತ ಕೊಂಕಣಿ ಚಿತ್ರ ‘ಬಾಪಾಚೆ ಪುತಾಚೆ ನಾಂವಿಂ’ ನಾಳೆ ನವೆಂಬರ್ 28ರಂದು ಮಂಗಳೂರು ಭಾರತ್ ಸಿನೆಮಾಸ್‌ನಲ್ಲಿ ಬಿಡುಗಡೆ

ವಿಶನ್ ಕೊಂಕಣಿ ನಿರ್ಮಾಣದ ದಾಯ್ಜಿವರ್ಲ್ಡ್ ಫಿಲ್ಮ್ಸ್ ಬ್ಯಾನರಿನಡಿ ತಯಾರಾದ ಚಲನಚಿತ್ರ

ವಿಶನ್ ಕೊಂಕಣಿ ನಿರ್ಮಾಣದ ದಾಯ್ಜಿವರ್ಲ್ಡ್ ಫಿಲ್ಮ್ಸ್ ಬ್ಯಾನರಿನಡಿ ಮೂಡಿಬಂದಿರುವ ಬಹುನಿರೀಕ್ಷಿತ ಕೊಂಕಣಿ ಚಿತ್ರ ‘ಬಾಪಾಚೆ ಪುತಾಚೆ ನಾಂವಿಂ’ ನಾಳೆ ನವೆಂಬರ್ 28ರಂದು ಶುಕ್ರವಾರ ಮಂಗಳೂರಿನ ಭಾರತ್ ಸಿನೆಮಾಸ್‌ನಲ್ಲಿ ತೆರೆಕಾಣಲಿದೆ.

ಈ ಚಿತ್ರವು ಈಗಾಗಲೇ ಹಲವು ಪ್ರೀಮಿಯರ್ ಪ್ರದರ್ಶನಗಳಲ್ಲಿ ಭಾಗಿಯಾಗಿ ಪ್ರೇಕ್ಷಕರಿಂದ ಹಾಗೂ ಸಿನೆಮಾ ವಿಮರ್ಶಕರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಯುವ ಸಾಹಿತಿ ಹಾಗೂ ಪತ್ರಕರ್ತ ಸ್ಟ್ಯಾನಿ ಬೇಳ ಈ ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದು ದಿಗ್ದರ್ಶನ ವಹಿಸಿರುವುದು ವಿಶೇಷ.

ಚಿತ್ರಕ್ಕೆ ಸಂಜಯ್ ರೊಡ್ರಿಗಸ್ ಹಿನ್ನಲೆ ಸಂಗೀತ ನೀಡಿದ್ದು, ಯುವ ಛಾಯಾಗ್ರಾಹಕ ಜೋಯಲ್ ಶಮನ್ ಕ್ಯಾಮೆರಾ ಕಾರ್ಯ ನಿರ್ವಹಿಸಿದ್ದಾರೆ. ನಿರ್ಮಾಣ ಸಂಸ್ಥೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಚಿತ್ರವನ್ನು ಉಡುಪಿ, ಪುತ್ತೂರು ಹಾಗೂ ದೇರಳಕಟ್ಟೆಗಳಲ್ಲಿ ಡಿಸೆಂಬರ್ 5ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಚಿತ್ರ ಬಿಡುಗಡೆಯತ್ತ ಕೊಂಕಣಿ ಪ್ರೇಕ್ಷಕರಲ್ಲಿ ಹೆಚ್ಚಿದ ನಿರೀಕ್ಷೆ ಕಂಡುಬರುತ್ತಿದೆ.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page