September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಡುಪಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭವ್ಯ ಬ್ರಹತ್ ರೋಡ್‌ಶೋ – ಐತಿಹಾಸಿಕ ಕ್ಷಣಕ್ಕೆ ನಗರ ಸಾಕ್ಷಿ

ಉಡುಪಿ ನಗರ ಇಂದು ಐತಿಹಾಸಿಕ ವಾತಾವರಣದಿಂದ ಕಂಗೊಳಿಸಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಉಡುಪಿಯಲ್ಲಿ ಭವ್ಯ ಬ್ರಹತ್ ರೋಡ್‌ಶೋ ನಡೆಸಿ ಜನಮನ ಗೆದ್ದರು. ಬೆಳಿಗ್ಗೆ ಬನ್ನಂಜೆ ನಾರಾಯಣ ಗುರು ವೃತ್ತದ ಬಳಿ ರೋಡ್‌ಶೋ ಆರಂಭವಾಗಿದ್ದು, ಹಲವು ಭಾಗಗಳಲ್ಲಿ ಮೋದಿ ಸ್ವತಃ ವಾಹನದಿಂದ ಇಳಿದು ಜನರತ್ತ ಕೈ ಬೀಸಿ ಅವರ ಆತ್ಮೀಯತೆಗೆ ಸ್ಪಂದಿಸಿದರು. ಉಳಿದ ಮಾರ್ಗವನ್ನು ಅವರು ತಮ್ಮ ವಾಹನದಲ್ಲೇ ಸಂಚಾರ ಮಾಡಿ ಜನರ ಉತ್ಸಾಹಭರಿತ ವಂದನೆಯನ್ನು ಸ್ವೀಕರಿಸಿದರು.

ನಗರದ ಪ್ರಮುಖ ಮೂರು ಸ್ಥಳಗಳಲ್ಲಿ – ಬನ್ನಂಜೆ ನಾರಾಯಣಗುರು ಮಂದಿರದ ಬಳಿಯಲ್ಲಿ, ಜಯಲಕ್ಷ್ಮೀ ಸಿಲ್ಕ್ ಪ್ರದೇಶದಲ್ಲಿ ಹಾಗೂ ಸಿಟಿ ಬಸ್ ನಿಲ್ದಾಣದ ಬಳಿ – ವಿಶೇಷ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಇಲ್ಲಿ ಯಕ್ಷಗಾನ, ಹುಲಿ ವೇಷ (ಪಿಲಿ ವೇಷ) ಮತ್ತು ಶ್ರೀಕೃಷ್ಣ ವೇಷಧಾರಿಗಳ ಸಾಂಸ್ಕೃತಿಕ ಪ್ರದರ್ಶನಗಳು ನಡೆದಿದ್ದು, ಜನರ ಮನಸೂರೆ ಗೊಳ್ಳುವಂತೆ ಸಾಂಸ್ಕೃತಿಕ ವೈಭವವನ್ನಿಟ್ಟು ಕೊಟ್ಟವು.

ರೋಡ್‌ಶೋ ಸಾಗಿದ ಸಂಪೂರ್ಣ ಮಾರ್ಗವನ್ನು ಕೇಸರಿ ಬಾವುಟಗಳು ಮತ್ತು ಪತಾಕೆಗಳಿಂದ ಅಲಂಕರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಹಾಜರಿದ್ದರು ಎಂದು ಜಿಲ್ಲಾ ಬಿಜೆಪಿ ಅಂದಾಜಿಸಿದೆ. ಜನಸಂದಣಿಯಿಂದ ಉಡುಪಿ, ರಸ್ತೆಮೇಳ ಉತ್ಸವದ ವಾತಾವರಣ ಪಡೆದುಕೊಂಡಿತ್ತು.

ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ‌ ಪ್ರಧಾನಮಂತ್ರಿಯ ಆಗಮನ

ಪ್ರಧಾನಮಂತ್ರಿ ಅವರು ಉಡುಪಿಯಲ್ಲಿ ಆಯೋಜಿಸಲಾಗಿದ್ದ ಇತಿಹಾಸ ಪ್ರಸಿದ್ಧ ಲಕ್ಷ ಕಂಠ ಗೀತಾ ಪಾರಾಯಣ ಎಂಬ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದಕ್ಕೆ ಮತ್ತಷ್ಟು ಗೌರವ ಮತ್ತು ಭವ್ಯತೆಯನ್ನು ನೀಡಿದರು. ಈ ಮೂಲಕ ಉಡುಪಿ ನಗರವು ರಾಷ್ಟ್ರೀಯ ಮಟ್ಟದ ಮಹತ್ವದ ಕ್ಷಣಕ್ಕೆ ಸಾಕ್ಷಿಯಾದದ್ದು, ಜನಮನದಲ್ಲಿ ಎಂದಿಗೂ ಅಚ್ಚಳಿಯದ ನೆನಪು ಮೂಡಿಸಿದೆ.

ಪ್ರಧಾನಿಯು ಕನ್ನಡದಲ್ಲೇ ಭಾಷಣ ಆರಂಭಿಸಿದ ಸಂವೇದನಾಶೀಲ ಕ್ಷಣ

ಪ್ರಧಾನಿಯವರು ತಮ್ಮ ಭಾಷಣವನ್ನು ಸುಂದರ ಕನ್ನಡದಲ್ಲೇ ಆರಂಭಿಸಿ, ನಂತರ ಹಿಂದಿಯಲ್ಲಿ ಮುಂದುವರೆಸಿದರು. ಈ ಮೂಲಕ ಅವರು ಕರ್ನಾಟಕದ ಸಂಸ್ಕೃತಿಗೆ ಸಲ್ಲಿಸಿದ ಗೌರವ ಜನಸ್ತೋಮದ ಮಧ್ಯೆ ವಿಶೇಷ ಚಪ್ಪಾಳೆಗೆ ಕಾರಣವಾಯಿತು.

ಜನಸ್ತೋಮದಲ್ಲಿ ಕಂಗೊಳಿಸುತ್ತಿದ್ದ ಚಿಣ್ಣರು, ಮಕ್ಕಳು ಮತ್ತು ಸಾರ್ವಜನಿಕರು ಪ್ರಧಾನಿಯವರ ಕಾರ್ಯಭಾರದ ವಿಶೇಷತೆಯನ್ನು ಚಿತ್ರಿಸುವ ನಾನಾ ಬಗೆಯ ಚಿತ್ರಗಳು—ರೇಖಾಚಿತ್ರ, ತೈಲಚಿತ್ರ, ವಿವಿಧ ಬಣ್ಣಗಳ ಪೇಂಟಿಂಗ್‌ಗಳನ್ನು ರಚಿಸಿ, ಅದನ್ನು ನೇರವಾಗಿ ನೀಡಲು ತಂದಿದ್ದರು. ಜನರಿಂದ ಬಂದ ಈ ಸೌಹಾರ್ದದ ಕಾಣಿಕೆಗಳನ್ನು ಸ್ಥಳದಲ್ಲಿದ್ದ ಪೊಲೀಸ್ ಆಯುಕ್ತರು ಸಂಗ್ರಹಿಸಿ, ಪ್ರತಿಯೊಂದು ಚಿತ್ರಕ್ಕೂ ಅದರ ಹಿಂದೆ ಬಿಡಿಸಿದವರ ಹೆಸರು ಮತ್ತು ವಿಳಾಸ ಬರೆದು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಬೇಕೆಂದು ಸೂಚಿಸಿದರು.

ಈ ಕುರಿತು ಪ್ರಧಾನಮಂತ್ರಿ ಅವರು, “ನನಗೆ ಬಂದಿರುವ ಪ್ರತಿಯೊಂದು ಚಿತ್ರಕ್ಕೂ ನಾನು ಸ್ವತಃ ಧನ್ಯವಾದ ಪತ್ರ ಬರೆಯುತ್ತೇನೆ” ಎಂದು ತಿಳಿಸಿರುವುದು ಜನಮನ ಗೆದ್ದ ಮತ್ತೊಂದು ಸ್ಫೂರ್ತಿದಾಯಕ ಕ್ಷಣವಾಯಿತು.

You may also like

News

ಶ್ರೀ ಕೃಷ್ಣನ ಆದರ್ಶ ಪಾಲಿಸಿದಾಗ ಧಾರ್ಮಿಕ ಆಚರಣೆಗೆ ಸಾರ್ಥಕತೆ – ಮಾಜಿ ಸಚಿವ ಬಿ. ರಮಾನಾಥ ರೈ

ಸೌಹಾರ್ದತೆಗೆ ಮಾದರಿಯಾದ ಮಾಣಿ ಯುವಕ ಮಂಡಲದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಭಾವೈಕ್ಯತೆ ಸಾರಿದ ವಿಶಿಷ್ಟ ಕಾರ್ಯಕ್ರಮ ಮಾಣಿ: ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ನಾವು
News

ಹನೂರು ಅರಣ್ಯ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಕ್ರೈಸ್ತ ಸಂಘಟನೆ ಒತ್ತಾಯ

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಡಿಜಿಪಿಗೆ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ

You cannot copy content of this page