August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಂಚನೆ ತಪ್ಪಿಸಿದ ಬ್ಯಾಂಕ್ ಮ್ಯಾನೇಜರ್ ರಾಯ್ ಸ್ಟನ್‌ರವರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ರವರಿಂದ ಅಭಿನಂದನೆ  

ಕರ್ತವ್ಯನಿಷ್ಠೆಯ ಮೆರಗು – ವೃದ್ಧ ದಂಪತಿಗಳ ಹಣ ಉಳಿಸಿದ ಮ್ಯಾನೇಜರ್‌ಗೆ ಗೌರವ

ಕಿನ್ನಿಗೋಳಿ ಬಳಿಯ ದಾಮಸ್ ಕಟ್ಟೆಯ ವೃದ್ಧ ದಂಪತಿಗಳಿಂದ ವಂಚಕರು ಕಬಳಿಸಲು ಯತ್ನಿಸಿದ್ದ ರೂಪಾಯಿ 84 ಲಕ್ಷ ಮೊತ್ತವನ್ನು, ತನ್ನ ಕರ್ತವ್ಯ ನಿಷ್ಠೆ, ಸೂಕ್ಷ್ಮ ಗಮನ ಹಾಗೂ ಸಮಯೋಚಿತ ಕ್ರಮಗಳಿಂದ ಉಳಿಸಿದ್ದಕ್ಕಾಗಿ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯ್ ಸ್ಟನ್ ಅವರನ್ನು ಶಾಸಕ ಉಮಾನಾಥ್ ಕೋಟ್ಯಾನ್ ಅವರು ಭೇಟಿಯಾಗಿ ಅಭಿನಂದಿಸಿದರು.

ಶಾಸಕ ಉಮಾನಾಥ್ ಕೋಟ್ಯಾನ್ ಅವರು ಮಾತನಾಡಿ, “ಸಮಾಜದ ಸಾಮಾನ್ಯ ಜನರು ಮೋಸದ ಜಾಲಕ್ಕೆ ಸಿಲುಕದಂತೆ ಬ್ಯಾಂಕ್ ಸಿಬ್ಬಂದಿ ನೀಡಬೇಕಾದ ಸೇವೆಗೆ ರಾಯ್ ಸ್ಟನ್ ಮಾದರಿಯಾಗಿದ್ದಾರೆ. ಅವರ ಜಾಗ್ರತೆ ಹಲವರಿಗೆ ಪ್ರೇರಣೆಯಾಗಿದೆ. ಇಂತಹ ಸತ್ಯ, ನಿಷ್ಠ ಮತ್ತು ಜವಾಬ್ದಾರಿಯುತ ಅಧಿಕಾರಿಗಳು ನಮ್ಮ ಸಮಾಜದ ಹೆಮ್ಮೆ” ಎಂದು ಶ್ಲಾಘಿಸಿದರು.

ಬ್ಯಾಂಕ್ ಮ್ಯಾನೇಜರ್ ರಾಯ್ ಸ್ಟನ್ ಅವರ ಸಮಯೋಚಿತ ಕೃತ್ಯದಿಂದ ವೃದ್ಧ ದಂಪತಿಗಳು ಭಾರೀ ಆರ್ಥಿಕ ನಷ್ಟದಿಂದ ಪಾರಾಗಿದ್ದು, ಸ್ಥಳೀಯ ವಲಯದಲ್ಲಿ ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

You may also like

News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ
News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ

You cannot copy content of this page