August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಡಿಜಿಟಲ್ ಅರೆಸ್ಟ್ ವಂಚನೆ ತಪ್ಪಿಸಿದ ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸರ ಜಾಗೃತಿಗೆ AICU ಕರ್ನಾಟಕ ರಾಜ್ಯಾಧ್ಯಕ್ಶ ಆಲ್ವಿನ್ ಡಿಸೋಜ ಪಾನೀರ್ ಅಭಿನಂದನೆ

“ಡಿಜಿಟಲ್ ಅರೆಸ್ಟ್” ವಂಚನೆಯಲ್ಲಿ ವೃದ್ಧ ದಂಪತಿಯನ್ನು ರಕ್ಷಿಸಿದ ಬ್ಯಾಂಕ್ ಮ್ಯಾನೇಜರ್ ಹಾಗೂ ಪೊಲೀಸರು ತೋರಿದ ಜಾಗೃತಿ ಮತ್ತು ಸೇವಾಭಾವವನ್ನು ಅಖಿಲ ಭಾರತ ಕ್ಯಾಥೋಲಿಕ್ ಯೂನಿಯನ್  ಕರ್ನಾಟಕ ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್‍ ಅವರು ತುಂಬು ಹೃದಯದಿಂದ ಪ್ರಶಂಸಿಸಿದ್ದಾರೆ.

ಮ್ಯಾನೇಜರ್ ರಾಯ್ ಸ್ಟನ್ ಅವರ ಸಮಯಪ್ರಜ್ಞೆ, ಸಂಶಯಶಕ್ತಿ ಹಾಗೂ ಮಾನವೀಯತೆ ಇಂದು ಅನೇಕ ಅಧಿಕಾರಿಸಿಬ್ಬಂದಿ ವರ್ಗಕ್ಕೆ ಆದರ್ಶ:

ಕಿನ್ನಿಗೋಳಿ ಕೆನರಾ ಬ್ಯಾಂಕ್‌ನ ಮ್ಯಾನೇಜರ್ ರಾಯ್ ಸ್ಟನ್ ಅವರ ಸಮಯಪ್ರಜ್ಞೆ, ಸಂಶಯಶಕ್ತಿ ಹಾಗೂ ಮಾನವೀಯತೆ ಇಂದು ಅನೇಕ ಅಧಿಕಾರಿ–ಸಿಬ್ಬಂದಿ ವರ್ಗಕ್ಕೆ ಆದರ್ಶವಾಗಿದೆ ಎಂದು ಅಖಿಲ ಭಾರತ ಕ್ಯಾಥೋಲಿಕ್ ಯೂನಿಯನ್ – ಕರ್ನಾಟಕ ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಪ್ರಶಂಸಿಸಿದ್ದಾರೆ. ವೃದ್ಧ ದಂಪತಿಗಳ ಅಸಹಜ ವಿನಂತಿಯನ್ನು ಗಮನಿಸಿ, ಯಾವುದೇ ಆತುರದ ನಿರ್ಧಾರ ಕೈಗೊಂಡಿಲ್ಲದೆ, ವ್ಯಾಪಕ ಜಾಗೃತಿಯಿಂದ ಹಣ ವರ್ಗಾವಣೆ ನಿಲ್ಲಿಸಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ 84 ಲಕ್ಷ ರೂಪಾಯಿ ನಂತಹ ದೊಡ್ಡ ಮೊತ್ತವನ್ನು ವಂಚಕರ ಕೈಗೆ ಸಿಲುಕದಂತೆ ತಡೆಯುವುದರಲ್ಲಿ ಅವರು ತೋರಿದ ಧೈರ್ಯ ಹಾಗೂ ಜವಾಬ್ದಾರಿತನ ಅತ್ಯಂತ ಶ್ಲಾಘನೀಯದು. ಜನರ ಆಸ್ತಿಪಾಸ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ರೀತಿಯ ಜಾಗೃತಿಬುದ್ಧಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಅವರು ಅಭಿನಂದಿಸಿದ್ದಾರೆ

ಕಿನ್ನಿಗೋಳಿ ಕೆನರಾ ಬ್ಯಾಂಕ್‌ನ ಮ್ಯಾನೇಜರ್ ರಾಯಿಸ್ಟನ್ ವೃದ್ಧ ದಂಪತಿಗಳು ಕೇಳಿದ ಅಸಹಜ ವಿನಂತಿಯನ್ನು ಗಮನಿಸಿದ ಕ್ಷಣದಿಂದಲೇ ಎಚ್ಚರಿಕೆಯಿಂದ ವರ್ತಿಸಿದ್ದು, ಅವರ ಸಮಯಪ್ರಜ್ಞೆ, ಸಂಶಯಶಕ್ತಿ ಮತ್ತು ಮಾನವೀಯ ನಡೆ ಮಹತ್ತರ ಅನಾಹುತವನ್ನು ತಪ್ಪಿಸಿತು. 84 ಲಕ್ಷ ರೂಪಾಯಿ ಮೊತ್ತವನ್ನು ವರ್ಗಾಯಿಸುವಂತೆ ವೃದ್ಧರ ಮೇಲೆ ವಂಚಕರು ಒತ್ತಡ ಹೇರುತ್ತಿದ್ದ ಸಂದರ್ಭದಲ್ಲಿ ಹಣ ವರ್ಗಾವಣೆ ತಕ್ಷಣ ನಿಲ್ಲಿಸಿದರು. ಪರಿಸ್ಥಿತಿಯನ್ನು ಪರಿಶೀಲಿಸಲು ಸಮಯ ತೆಗೆದುಕೊಂಡರು. ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. “ಇಂತಹ ಜಾಗೃತಿಯುತ ಬ್ಯಾಂಕಿಂಗ್ ಸೇವೆ ಇತರ ಅಧಿಕಾರಿಗಳಿಗೆ ಮಾದರಿಯಾಗಿದೆ” ಎಂದು ಡಿಸೋಜ ಸಂತೋಷ ವ್ಯಕ್ತಪಡಿಸಿದರು.

ತ್ವರಿತ ಕ್ರಮದ ಮೂಲಕ ದೊಡ್ಡ ನಷ್ಟ ತಪ್ಪಿಸಿದ ಪೊಲೀಸ್ ಸಿಬ್ಬಂದಿ ಯಶವಂತ ಮತ್ತು ಕಿಶೋರ್ ಅವರ ಕಾರ್ಯ ಮೆಚ್ಚುಗೆ:

ಬ್ಯಾಂಕ್ ನೀಡಿದ ಮಾಹಿತಿಗೆ ತಕ್ಷಣ ಪ್ರತಿಕ್ರಿಯಿಸಿದ ಪೊಲೀಸರಾದ ಯಶವಂತ ಮತ್ತು ಕಿಶೋರ್ ಅವರು, “ಡಿಜಿಟಲ್ ಅರೆಸ್ಟ್” ಎಂಬ ಸುಧಾರಿತ ವಂಚನೆ ವಿಧಾನವನ್ನು ಬಯಲುಮಾಡಲು ಕೂಡಲೇ ದಂಪತಿಯ ಮನೆಗೆ ಭೇಟಿ ನೀಡಿದರು. ವಂಚಕರು ಮಾಡಿದ ಒತ್ತಡ ಮತ್ತು ಸುಳ್ಳು ಹೇಳಿಕೆಗಳ ಸುಳಿವು ಪತ್ತೆ ಹಚ್ಚಿದರು. ಎಫ್‌.ಡಿ. ಹಣ ವಂಚಕರಿಗೆ ಹೋಗದಂತೆ ತಡೆಗಟ್ಟಿದರು. “ವೃದ್ಧ ದಂಪತಿಯ ಜೀವನಪೂರ್ತಿ ಸಂಗ್ರಹಿಸಿದ ಹಣವನ್ನು ರಕ್ಷಿಸಿದ ಇವರ ಸೇವಾ ಮನೋಭಾವ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸಿದೆ” ಎಂದು ಅಲ್ವಿನ್ ಡಿಸೋಜ ಅವರು ಪ್ರಶಂಸಿಸಿದರು.

ಜನರ ಜಾಗೃತಿಗೆ ರಾಜ್ಯಾಧ್ಯಕ್ಷ ಕರೆ:

ಡಿಜಿಟಲ್ ವಂಚನೆಗಳು ಹೆಚ್ಚುತ್ತಿರುವ ಕಾಲದಲ್ಲಿ, ಈ ಘಟನೆ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದ್ದು ಬ್ಯಾಂಕ್‌ಗಳು ಮತ್ತು ಪೊಲೀಸರು ತ್ವರಿತ ಕ್ರಮ ಕೈಗೊಂಡರೆ ಅನೇಕ ವಂಚನೆಗಳನ್ನು ತಪ್ಪಿಸಬಹುದು. ಸಾರ್ವಜನಿಕರೂ ಕೂಡ ಅಪರಿಚಿತರ ಕರೆ, ವಿಡಿಯೊ ಕಾಲ್ ಅಥವಾ ಒತ್ತಡಕ್ಕೆ ಒಳಗಾಗಬಾರದು. ಸಮಾಜದ ಎಲ್ಲರಿಗೂ ಜಾಗೃತಿಯಿಂದ ಇರಬೇಕೆಂದು ಆಲ್ವಿನ್ ಡಿಸೋಜ ಪಾನೀರ್ ಕರೆ ನೀಡಿದರು.

You may also like

News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ
News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ

You cannot copy content of this page