August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜಿಲ್ಲೆಯಲ್ಲಿ ಅತೀ ದೊಡ್ಡ ಕ್ರಿಸ್ಮಸ್ ನಕ್ಷತ್ರ — ನೆಲ್ಯಾಡಿ ಸಂತ ಆಲ್ಫೋನ್ಸಾ ಚರ್ಚ್ SMYM ಯುವಕರಿಂದ ಅದ್ಭುತ ಸೃಜನಶೀಲತೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯ ಸಂತ ಅಲ್ಫೋನ್ಸಾ ಪುಣ್ಯ ಕ್ಷೇತ್ರಕ್ಕೆ ಸೇರಿದ SMYM ಯುವಕರು ವಿಶಿಷ್ಟ ಸಾಧನೆ ಮಾಡಿ ದಾಖಲೆ ಬರಹಕ್ಕೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಸುಮಾರು 42 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಮಹಾಕಾಯ ಕ್ರಿಸ್ಮಸ್ ನಕ್ಷತ್ರ ಈಗಾಗಲೇ ಜಿಲ್ಲೆಯ ಅತೀ ಎತ್ತರದ ಕ್ರಿಸ್ಮಸ್ ನಕ್ಷತ್ರ ಎಂಬ ಗೌರವವನ್ನು ಪಡೆದಿದೆ.

ಏಕತೆ, ಪರಿಸರ ಸ್ನೇಹಿ ಅಲಂಕಾರ ಮತ್ತು ಸೌಹಾರ್ದತೆಯ ಸಂಕೇತವಾಗಿ ನಿರ್ಮಿಸಲಾದ ಈ ನಕ್ಷತ್ರ ಯುವಕರ ಪ್ರತಿಭೆ, ಸಮಾಜ ಸೇವೆ ಮತ್ತು ಕ್ರಿಸ್ಮಸ್ ಭಾವನೆಯ ಅರಳಿದ ನೆರಳು. ಈ ಸಾಧನೆ ವಂದನೀಯ ಫಾದರ್ ಶಾಜಿ ಮ್ಯಾಥ್ಯು ಮತ್ತು ವಂದನೀಯ ಫಾದರ್ ಅಲೆಕ್ಸ್ ಜಾನ್ಸನ್ ಅವರ ಮಾರ್ಗದರ್ಶನ-ಸಹಕಾರ ಹಾಗೂ SMYM ಯುವಕರ ಕಠಿಣ ಪರಿಶ್ರಮದ ಫಲವಾಗಿದೆ.

ಪ್ರತಿ ಸಂಜೆ ಬೆಳಕು ಮಿಂಚುತ್ತಿದ್ದಂತೆ ಈ ವಿಶಿಷ್ಟ ನಕ್ಷತ್ರವನ್ನು ನೋಡುವುದಕ್ಕಾಗಿ ವಿವಿಧ ಕಡೆಗಳಿಂದ ಜನರು ನೆಲ್ಯಾಡಿಗೆ ಆಗಮಿಸುತ್ತಿದ್ದು, ಯುವಕರ ಪರಿಶ್ರಮಕ್ಕೆ ಪ್ರಶಂಸೆಯ ಮಳೆ ಸುರಿಯುತ್ತಿದೆ.

You may also like

News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ
News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ

You cannot copy content of this page