September 12, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

KSRTC ಬಸ್–ಬೈಕ್ ಭೀಕರ ಅಪಘಾತ: ಎಲೆಕ್ಟ್ರಿಷಿಯನ್ ನೋಯೆಲ್ ಜೋಸೆಫ್ ಪಿಂಟೋ ಮೃತ್ಯು

KSRTC ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಪುಂಜಾಲಕಟ್ಟೆ–ಪುರಿಯ ರಸ್ತೆ ಮಾರ್ಗದಲ್ಲಿ ನಡೆದಿದೆ.

ಮಡಂತ್ಯಾರು ಸಮೀಪದ ಪುಂಜಾಲಕಟ್ಟೆ ಪುರಿಯ ರಸ್ತೆಯ ನಿವಾಸಿ, ಎಲೆಕ್ಟ್ರಿಷಿಯನ್ 38 ವರ್ಷ ಪ್ರಾಯದ ನೋಯೆಲ್ ಜೋಸೆಫ್ ಪಿಂಟೋ ಮೃತ ವ್ಯಕ್ತಿ. ಅವರು ಮನೆಯಲ್ಲಿ ಕೆಲಸದವರಿಗೆ ಕಾಫಿ–ತಿಂಡಿ ತರಲು ಮಡಂತ್ಯಾರು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, KSRTC ಬಸ್ ಆಟೋ ರಿಕ್ಷಾವನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ನೋಯೆಲ್ ಅವರ ಹೃದಯ ಭಾಗಕ್ಕೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನೋಯೆಲ್ ಜೋಸೆಫ್ ಪಿಂಟೋ ಅವರು ವೇಣೂರು ಮೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.

ಮೃತರು ತಾಯಿ ಫ್ಲೋರಿನ್ ಪಿಂಟೋ, ಇಬ್ಬರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಡಿಸೆಂಬರ್ 15ರಂದು ಸೋಮವಾರ ಸಂಜೆ 4 ಗಂಟೆಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ನಡೆಯಲಿದೆ.

You may also like

News

ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೈಂದೂರಿನ ಆಶಾ ವೀಣಾ ಡಯಾಸ್‌ ಅವರಿಗೆ ದ್ವಿತೀಯ ಸ್ಥಾನ

ಕಿರಣ್ ಬೇಡಿ ಅವರ ಕುರಿತು 5 ನಿಮಿಷಗಳ ಭಾಷಣ – ಪ್ರತಿಭೆಗೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ಕರ್ನಾಟಕ ರಾಜ್ಯದ ಸಮಾಜ ವಿಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ
News

ಸೆಪ್ಟೆಂಬರ್ 14ರಿಂದ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ 9 ದಿನಗಳ ನೊವೇನಾ – ಸೆಪ್ಟೆಂಬರ್ 23ರಂದು ವಾರ್ಷಿಕ ಮಹೋತ್ಸವ

ಸಿಟಿ ವಲಯದ ಶ್ರೇಷ್ಠಗುರು ಫಾದರ್ ರಿಚಾರ್ಡ್ ಕುವೆಲ್ಲೊ ಅವರಿಂದ ಧ್ವಜಾರೋಹಣ ಮಂಗಳೂರಿನ ಜೈಲ್ ರಸ್ತೆಯ ಕಪುಚಿನ್ ಧರ್ಮಗುರುಗಳ ಸೈಂಟ್ ಆನ್ಸ್ ಫ್ರೈರಿ ಆವರಣದಲ್ಲಿರುವ ಸೈಂಟ್ ಪಾದ್ರೆ ಪಿಯೊ

You cannot copy content of this page