June 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೊಗರ್ನಾಡ್ ಚರ್ಚ್ ಇದರ 250ನೇ ಜುಬಿಲಿ ಅಂಗವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ‘ಡಿವೈನ್ ಮರ್ಸಿ’ ನೂತನ ಗೃಹ ಹಸ್ತಾಂತರ

ಮಂಗಳೂರು ಧರ್ಮಕ್ಷೇತ್ರದ ಮೊಗರ್ನಾಡ್ ಧರ್ಮಕೇಂದ್ರದ 250ನೇ ವರ್ಷದ ಜುಬಿಲಿ ಸಂಭ್ರಮಾಚರಣೆಯ ಅಂಗವಾಗಿ ಸಂಕಷ್ಟದಲ್ಲಿರುವವರಿಗೆ ಮನೆ ನಿರ್ಮಾಣ ಯೋಜನೆಯನ್ನು ಲಯನ್ಸ್ ಕ್ಲಬ್ ಕೊಲ್ನಾಡು–ಸಾಲೆತ್ತೂರು, ಪತ್ತುಗುಡ್ಡೆ ಬೊಳ್ಳಾಯಿ, ಸಂತ ವಿಶೆಂತ್ ಪಾವ್ಲ್ ಸಭಾ ಮೊಗರ್ನಾಡ್ ಘಟಕ ಹಾಗೂ ಜುಬಿಲಿ ಸಮಿತಿ ಮೊಗರ್ನಾಡ್ ಸಂಯುಕ್ತವಾಗಿ ಕೈಗೆತ್ತಿಕೊಂಡಿದ್ದರು. ಈ ಯೋಜನೆಯಡಿ ಬೊಳ್ಳಾಯಿ ಗ್ರಾಮದ ದಿವಗಂತ ಲಿಯೊ ಡಿಕುನ್ಹಾ ಮತ್ತು ಫೆಲ್ಸಿ ಡಿಕುನ್ಹಾ ಕುಟುಂಬಕ್ಕೆ ನಿರ್ಮಿಸಲಾದ ‘ಡಿವೈನ್ ಮರ್ಸಿ’ ಎಂಬ ನೂತನ ಗೃಹವನ್ನು ಡಿಸೆಂಬರ್ 20ರಂದು ಶನಿವಾರ ಸಂಪೂರ್ಣ ಕಾಮಗಾರಿ ಮುಗಿದ ಬಳಿಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮೊಗರ್ನಾಡ್ ಚರ್ಚ್ ನಲ್ಲಿ ಸೇವೆ ನೀಡುತ್ತಿರುವ ಡೀಕನ್ ಅವಿಲ್ ಸಾಂತುಮಾಯೊರ್ ಅವರು ನೂತನ ಮನೆಯ ಆಶೀರ್ವಚನ ನೆರವೇರಿಸಿದರು. ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಅವರು ನೂತನ ಮನೆಯ ಉದ್ಘಾಟನೆ ನಡೆಸಿದರು. ಕುಟುಂಬದವರು ಈ ಯೋಜನೆಗೆ ಉದಾರ ಮನಸ್ಸಿನಿಂದ ದಾನ ನೀಡಿ ಸಹಕಾರ ನೀಡಿದ ಎಲ್ಲರ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ನೂತನ ಗೃಹ ಪ್ರವೇಶದ ಉದ್ಘಾಟನಾ ಸಮಾರಂಭದಲ್ಲಿ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವ ಮಾತಾ ಕಾನ್ವೆಂಟಿನ ಧರ್ಮ ಭಗಿನಿಯರು, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೋ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾನಾ ಡಿಕುನ್ಹಾ, ಜುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್, ಪ್ರೊಜೆಕ್ಟ್ ಸಮಿತಿಯ ಸಂಚಾಲಕ ಎಲಿಯಾಸ್ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಸದಸ್ಯರು, ಆರ್ಥಿಕ ಸಮಿತಿಯ ಸದಸ್ಯರು, ಜುಬಿಲಿ ಸಮಿತಿಯ ಸದಸ್ಯರು, ಸಂತ ವಿಶೆಂತ್ ಪಾವ್ಲ್ ಸಭೆಯ ಸದಸ್ಯರು ಹಾಗೂ ದೇವ ಮಾತಾ ಧರ್ಮಕೇಂದ್ರದ ಭಕ್ತಾಧಿಗಳು ಉಪಸ್ಥಿತರಿದ್ದರು.

You may also like

News

ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಿಗೆ ಭಾವಪೂರ್ಣ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.)ಇದರ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡಿರುವ ವಂದನೀಯ ಫಾದರ್
News

ಲಘು ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ಸಿಪಿಆರ್ ನೀಡಿ ಜೀವ ಉಳಿಸಿದ ಬಂಟ್ವಾಳ ನಗರ ಠಾಣೆಯ ‘ನೈಟ್ ಬೀಟ್’ ಸಿಬ್ಬಂದಿಗಳು

ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾದ ಸಿಬ್ಬಂದಿಗಳಾದ ವಿನೋದ್ ಹಾಗೂ ಜಯಗಣೇಶ್ ರಾತ್ರಿ ಇಡೀ ಜಗತ್ತು ಮಲಗಿರುವಾಗ ಸಾರ್ವಜನಿಕರ ರಕ್ಷಣೆಗಾಗಿ ಗಸ್ತು ತಿರುಗುವ ಪೊಲೀಸರು, ಕೇವಲ ಕಾನೂನು

You cannot copy content of this page