June 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳೊಂದಿಗೆ ಕ್ರಿಸ್ಮಸ್ ಆಚರಣೆ – ಬಾಂಧವ್ಯ ವೃದ್ಧಿಗೆ ಕರೆ

ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಇಂದು ಡಿಸೆಂಬರ್ 25ರಂದು ಗುರುವಾರ ಬೆಳಿಗ್ಗೆ ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಆಶ್ರಮದಲ್ಲಿ ನಡೆದ ದಿವ್ಯ ಬಲಿದಾನವನ್ನು ಅರ್ಪಿಸಿ, ಆಶ್ರಮದ ನಿವಾಸಿಗಳು, ದಾನಿಗಳು, ಹಿತೈಷಿಗಳು ಹಾಗೂ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿಗಳಿಗಾಗಿ ವಿಶೇಷವಾಗಿ ಪ್ರಾರ್ಥಿಸಿದರು.

ತಮ್ಮ ಪ್ರಬೋಧನೆಯಲ್ಲಿ ಬಿಷಪ್ ಅವರು ದೇವರ ಅವತಾರದ ಮಹತ್ವವನ್ನು ವಿವರಿಸುತ್ತಾ, ಯೇಸುವಿನ ಜನನದ ಮೂಲಕ ದೇವರು ಮನುಕುಲಕ್ಕೆ ತನ್ನನ್ನು ತಾನು ಸ್ಪಷ್ಟವಾಗಿ ಪ್ರಕಟಪಡಿಸಿಕೊಂಡಿದ್ದಾರೆ ಎಂದು ಹೇಳಿದರು. ದೇವರು ಮಗುವಿನ ರೂಪದಲ್ಲಿ ಸೌಮ್ಯ, ಸರಳ, ಕರುಣಾಮಯಿಯಾಗಿ ನಮಗೆ ತಿಳಿದಿರುವುದು ಕ್ರಿಸ್ಮಸ್‌ನ ಮಹಾ ಸಂದೇಶ ಎಂದು ಅವರು ತಿಳಿಸಿದರು. ಕ್ರಿಸ್ಮಸ್ ಕೇವಲ ಬಾಹ್ಯ ಆಚರಣೆಯಾಗಿ ಉಳಿಯದೆ, ಅರ್ಥಪೂರ್ಣ ಸಂಬಂಧಗಳಾಗಿ ರೂಪಾಂತರಗೊಳ್ಳಬೇಕು ಎಂದು ಕರೆ ನೀಡಿದ ಬಿಷಪ್, “ಆಚರಣೆಗಳಿಂದ ಸಂಬಂಧಗಳೆಡೆಗೆ ಸಾಗೋಣ” ಎಂದು ಸಂದೇಶ ನೀಡಿದರು. ದಯೆ, ಸೇವೆ ಮತ್ತು ಪ್ರೀತಿಯ ಮೂಲಕ ಸಹೋದರ ಸಹೋದರಿಯರೊಂದಿಗೆ ಬಾಂಧವ್ಯ ವೃದ್ಧಿಯಾದಾಗಲೇ ಕ್ರಿಸ್ಮಸ್ ನಿಜವಾದ ಅರ್ಥ ಪಡೆಯುತ್ತದೆ ಎಂದು ಅವರು ಒತ್ತಿ ಹೇಳಿದರು.

ದಿವ್ಯ ಬಲಿದಾನದ ನಂತರ ಬಿಷಪ್ ಅವರು ಆಶ್ರಮದ ನಿವಾಸಿಗಳೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿ, ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಜೆ. ಬಿ. ಕ್ರಾಸ್ತಾ, ಆಡಳಿತಾಧಿಕಾರಿಯಾದ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್, ಸಹ ಆಡಳಿತಾಧಿಕಾರಿಯಾದ ವಂದನೀಯ ಫಾದರ್ ನಿಶಾಂತ್ ವಿವಿಯನ್ ರೊಡ್ರಿಗಸ್ ಹಾಗೂ ಕೆನರಾ ಕಮ್ಯುನಿಕೇಶನ್ ಸೆಂಟರ್ ನಿರ್ದೇಶಕರಾದ ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಇದಲ್ಲದೆ, ಡಿಸೆಂಬರ್ 24ರ ರಾತ್ರಿ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಕ್ರಿಸ್ಮಸ್ ಜಾಗರಣೆ ಬಲಿದಾನವನ್ನು ನೆರವೇರಿಸಿದರು. ನೂರಾರು ಭಕ್ತರು ಪಾಲ್ಗೊಂಡ ಈ ಸಂದರ್ಭದಲ್ಲಿ, ಯೇಸುವಿನ ಜನನದ ಮಹತ್ವ ಹಾಗೂ ದೈವವಾಕ್ಯವು ನರರೂಪ ತಾಳಿದ ಅರ್ಥದ ಬಗ್ಗೆ ಅವರು ಸಂದೇಶ ನೀಡಿದರು.

You may also like

News

EVIDENCIA 2026 -Strengthens Evidence-Based Homoeopathic Research

Father Muller Homoeopathic Medical College and Hospital, in association with the Indian Homoeopathic Medical Association (IHMA), Mangaluru Chapter, and the
News

ಕೋಳಿ ಅಂಕದ ಜೂಜಾಟದ ಅಡ್ಡೆಗೆ ವಿಟ್ಲ ಪೊಲೀಸರ ದಿಢೀರ್ ದಾಳಿ – ಮೂವರ ಬಂಧನ, ಸೊತ್ತುಗಳ ವಶ

ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದ ಜಾಗಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿರುವ

You cannot copy content of this page