July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶಂಭೂರು ಸರ್ಕಾರಿ ಶಾಲೆಯಲ್ಲಿ ನೂತನ ತರಗತಿ ಕೊಠಡಿಗಳ ಉದ್ಘಾಟನೆ, ಶಿಲನ್ಯಾಸ ಹಾಗೂ ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ

ಗ್ರಾಮಕ್ಕೊಂದು ಮಾದರಿ ಶಾಲೆ ರೂಪಿಸಿ, ಕಡಿಮೆ ಮಕ್ಕಳಿರುವ ಶಾಲೆಗಳ ವಿದ್ಯಾರ್ಥಿಗಳನ್ನು ಒಂದೇ ಕೇಂದ್ರದಲ್ಲಿ ಸೇರಿಸಿ ಅಗತ್ಯ ವಾಹನ ಹಾಗೂ ಶಿಕ್ಷಕರ ಸೌಲಭ್ಯ ಒದಗಿಸುವ ಮೂಲಕ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲೆಗಳು ಪ್ರಗತಿ ಹೊಂದಿದಾಗ ಪ್ರತಿಯೊಬ್ಬ ನಾಗರಿಕನಿಗೂ ಶಿಕ್ಷಣ ಲಭಿಸುವುದು ಸಾಧ್ಯ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಅವರು ಹೇಳಿದರು.  ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಶಂಭೂರಿನಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಅನುದಾನದಿಂದ ನಿರ್ಮಿಸಲಾದ ಎರಡು ನೂತನ ತರಗತಿ ಕೊಠಡಿಗಳ ಉದ್ಘಾಟನೆ, ಎನ್‌ಎಂಪಿಟಿ ಸಂಸ್ಥೆಯ ಅನುದಾನದಿಂದ ನಿರ್ಮಾಣಗೊಳ್ಳಲಿರುವ ಇನ್ನೆರಡು ತರಗತಿ ಕೊಠಡಿಗಳಿಗೆ ಶಿಲನ್ಯಾಸ ಹಾಗೂ ಶಾಲಾ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಎಂಆರ್‌ಪಿಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜಿಂಗ್ ಮುಖ್ಯಸ್ಥರಾದ ದಯಾನಂದ ಪ್ರಭು ನೂತನ ತರಗತಿ ಕೊಠಡಿಗಳನ್ನು ಉದ್ಘಾಟಿಸಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ್ ಬಡಾಜೆ ಗುತ್ತು ಅವರು ನಿರ್ಮಾಣಗೊಳ್ಳಲಿರುವ ಎರಡು ತರಗತಿ ಕೊಠಡಿಗಳಿಗೆ ಶಿಲನ್ಯಾಸ ನೆರವೇರಿಸಿದರು. ಕಾರ್ಯಕ್ರಮಕ್ಕೆ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ವಿವಿಧ ಕವಾಯತು ಪ್ರದರ್ಶನಗಳು ನಡೆದವು. ಉದ್ಘಾಟನಾ ಸಭೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಂಜೆ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ “ಹಿರಣ್ಯಾಕ್ಷ ವಧೆ” ಯಕ್ಷಗಾನ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ದಯಾನಂದ ಬಿ.ಎಸ್. ಬಂಡ ಸಾಲೆ, ನರಿಕೊಂಬು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ನೇಮೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ್ ಬಂಗೇರ ನಿರ್ಮಲ್, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಸಂಜೀವ ಪೂಜಾರಿ ಕುರ್ಚಿಗುಡ್ಡೆ, ಶ್ರೀ ಅರಸು ವೈದ್ಯನಾಥ ಜುಮಾದಿಬಂಟ ಆರಾಧನಾ ಸಮಿತಿ ಜೋಡುಸ್ತಾನ ಗೌರವಾಧ್ಯಕ್ಷ ಸೀತಾರಾಮ ಪೂಜಾರಿ, ಬಂಟ್ವಾಳ ತಾಲೂಕು ನಾರಾಯಣಗುರು ವಿಚಾರಣ ವೇದಿಕೆ ಅಧ್ಯಕ್ಷ ನವೀನ್ ಕೋಟಿಯಾನ್, ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಪುಲಿಂಚ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಲಿಂಚ, ಬಜಾರ್ ಗ್ರೂಪ್ ಮಾರ್ನಬೈಲ್ ಆಡಳಿತ ನಿರ್ದೇಶಕ ಲಯನ್ ಸುಧಾಕರ್ ಆಚಾರ್ಯ, ಗುತ್ತಿಗೆದಾರ ಸುದರ್ಶನ್ ಬಜ, ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ನಾಟಿ, ಜಿ.ಎಸ್. ಬಿಲ್ಡರ್ಸ್ ಮಾಲಕ ಗಣೇಶ್ ಜೆ.ಪಿ. ಕಲ್ಲಡ್ಕ, ನವೀನ್ ಶೆಟ್ಟಿ ಪಂಜಿಪಾಲ್, ನಿವೃತ್ತ ಶಿಕ್ಷಕಿ ನೀಲಮ್ಮ, ಲಕ್ಷ್ಮಣ ಪೂಜಾರಿ ಶಾಂತಿಲಾ, ಆನಂದ ಅಡ್ಡದಪಾದೆ, ಶಿಕ್ಷಕ ಶಂಕರ್ ನಾರಾಯಣ್, ಮಾಜಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗ್ರೆಗರಿ ರೊಡ್ರಿಗಸ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ವಾಮನ, ಸದಸ್ಯರುಗಳಾದ ಪ್ರಕಾಶ್ ಮಡಿಮುಗೇರು, ಯೋಗೀಶ್ ಶಾಂತಿಲಾ, ಸವಿತಾ ರಾಮಚಂದ್ರ, ಹೇಮಲತಾ ಕೆ., ಸುಜಾತ ಮಡಿಮುಗೇರು ಹಾಗೂ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಮಲಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹೇಮಚಂದ್ರ ಶಂಭೂರು ಭಂಡಾರ ಮನೆ ಸ್ವಾಗತಿಸಿದರು. ಶಿಕ್ಷಕಿ ಚಿತ್ರ ಅವರು ಶಾಲಾ ವರದಿ ವಾಚಿಸಿದರು. ಶಿಕ್ಷಕಿಯರಾದ ಇಂದಿರಾ, ಮೀನಾಕ್ಷಿ, ಅನಿತಾ, ಉಷಾ, ಚಿತ್ರಾಕ್ಷಿ, ಮಂಜುಳಾ, ಮಾಲಾಶ್ರೀ ಹಾಗೂ ದಯಾವತಿ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕ ಪವನ್ ಮತ್ತು ಶಿಕ್ಷಕಿ ಜಯಂತಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯಶಿಕ್ಷಕ ಜಯರಾಮ ಪಡ್ರೆ ವಂದಿಸಿದರು. ಯತೀಶ್ ಪೂಜಾರಿ ಶಂಭೂರು ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page