July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಧರ್ಮ ಒಂದೇ—ಅದುವೇ ವಿಶ್ವಮಾನವ ಧರ್ಮ” – ಡಾ. ಸುರೇಶ್ ನೆಗಳಗುಳಿ

ಕುವೆಂಪು ಜನ್ಮದಿನದ ನೆನಪಿನಲ್ಲಿ “ಓ ನನ್ನ ಚೇತನಾ” ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ ಕಾರ್ಯಕ್ರಮವು ಜನವರಿ 4ರಂದು ಭಾನುವಾರ ಪಡುಬಿದ್ರಿಯ ಸುಜ್ಲನ್ ಕಾಲೋನಿಯ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕರ್ನಾಟಕ ಸಾಮಾಜಿಕ–ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (KSSAP)ದ ಅಧ್ಯಕ್ಷೆ ರಾಣಿ ಪುಷ್ಪಲತಾ ಅವರ ಸಾರಥ್ಯದಲ್ಲಿ ಆಯೋಜಿಸಲಾದ ಈ ಸಮಾರಂಭವನ್ನು ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಪ್ರಧಾನ ಸಲಹೆಗಾರರಾದ ಡಾ. ಸುರೇಶ್ ನೆಗಳಗುಳಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕುವೆಂಪು ಅವರ ವಿಚಾರಧಾರೆ ಕುರಿತು ಮಾತನಾಡಿದ ಅವರು, “ವಿಶ್ವಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೆ ಇಲ್ಲ” ಎಂದು ಹೇಳಿ, ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರಾಣಿ ಪುಷ್ಪಲತಾ ದೇವಿಯವರು ಕುವೆಂಪು ಅವರ ಜೀವನ, ಸಾಹಿತ್ಯ ಹಾಗೂ ಮಾನವತಾವಾದದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಸಾಮಾಜಿಕ ಚಿಂತಕ ರಂಜನ್ ಕುಮಾರ್, ಶಿಕ್ಷಕಿ–ಕವಯಿತ್ರಿ ಶರಣ್ಯ ಬೆಳುವಾಯಿ, NSCDF ಅಧ್ಯಕ್ಷ ಗಂಗಾಧರ ಗಾಂಧಿ ಹಾಗೂ NSCDF ಅಂತಾರಾಷ್ಟ್ರೀಯ ವಕ್ತಾರ ಕೆ.ಎಂ. ಇಲಿಯಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಣಿಪಾಲದ ಹಿಪ್ನೋಥೆರಪಿಸ್ಟ್ ಹಾಗೂ ಕವಯಿತ್ರಿ ಜ್ಯೋತಿ ಮಹದೇವ್ ವಹಿಸಿಕೊಂಡು, ಕುವೆಂಪು ಮತ್ತು ಅವರ ಕಾವ್ಯಗಳ ಮಹತ್ವವನ್ನು ವಿವರಿಸಿದರು. ಈ ಸಂದರ್ಭ ರಾಣಿ ಪುಷ್ಪಲತಾ ದೇವಿಯವರು ಡಾ. ಸುರೇಶ್ ನೆಗಳಗುಳಿ ಹಾಗೂ ಜ್ಯೋತಿ ಮಹದೇವ್ ಅವರನ್ನು ಶಾಲು, ಹಾರ, ಪೇಟ ಹಾಗೂ ನೆನಪಿನ ಕಾಣಿಕೆಯೊಂದಿಗೆ ಗೌರವಿಸಿದರು.

ಕವಿಗೋಷ್ಠಿಯಲ್ಲಿ ಅಶ್ವಿನಿ ಕೊಂಜಾಡಿ, ವಾಣಿಶ್ರೀ ಅಶೋಕ್ ಐತಾಳ್, ಕೆ. ಮಂಜುನಾಥ್ ಗುಂಡ್ಮಿ, ಶಾಲಿನಿ ಕೆಮ್ಮಣ್ಣು, ಗಿರೀಶ್ ಪೆರಿಯಡ್ಕ, ಆಂಟೋನಿ ಲೂಯಿಸ್ (ಮಣಿಪಾಲ), ಮಾರುತಿ ಕೆ.ಪಿ., ಮಾಲತಿ ರಮೇಶ್ (ಕೆಮ್ಮಣ್ಣು), ಅವನೀಶ್ ಐತಾಳ್, ಪಿ. ಆಯಿಷಾ ಪೆರ್ನೆ, ವಿನೋದಾ ಪ್ರಕಾಶ್ (ಪಡುಬಿದ್ರಿ), ಸುಮಾ ಕಿರಣ್, ಜಯಂತಿ ಎಸ್. ನಂದಳಿಕೆ, ಸುಲೋಚನ ನವೀನ್, ತನೀರಾ, ಆತೂರ್ ಸುಮಯ್ಯಾ, ಎಂ. ಪಾಟೀಲ್ (ದೇರ್‌ಳಕಟ್ಟೆ), ಆಕೃತಿ ಐ.ಎಸ್. ಭಟ್, ಮೂಗಪ್ಪ ಗಾಳೇರ, ಪೂರ್ಣಿಮಾ ಅನಿಲ್ (ಮಣಿಪಾಲ), ಸ್ಮಿತಾ ಅಶೋಕ್ (ಪರ್ಕಳ), ಮಂಡ್ಯ ಅನಾರ್ಕಲಿ ಸಲೀಂ (ಮಂಗಳೂರು), ಗಂಗಾಧರ ಗಾಂಧಿ ಸೇರಿದಂತೆ ಅನೇಕ ಕವಿಗಳು ಕಾವ್ಯವಾಚನ ಮಾಡಿದರು.

ಭಾಗವಹಿಸಿದ ಎಲ್ಲಾ ಕವಿಗಳಿಗೆ ಪ್ರಶಂಸನಾ ಪತ್ರ ಹಾಗೂ ಕೃತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ರಶ್ಮಿ ಸನಿಲ್ ಸುಂದರವಾಗಿ ನಿರೂಪಿಸಿದರು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page