August 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಡುಪಿಯಲ್ಲಿ ಎಕ್ಸ್‌ಫಿನೊ ಸೆಂಟರ್ ಆಫ್ ಎಕ್ಸಲೆನ್ಸ್ ವಿಸ್ತರಣೆ – ‘ಸಿಲಿಕಾನ್ ತೀರ’ ಕ್ಕೆ ಜಾಗತಿಕ ಮಾನ್ಯತೆ

ಕರ್ನಾಟಕದ ಕರಾವಳಿ ಪ್ರದೇಶವನ್ನು ಜಾಗತಿಕ ಪ್ರತಿಭಾ ಕೇಂದ್ರವಾಗಿ ರೂಪಿಸುವ ಉದ್ದೇಶದೊಂದಿಗೆ ಪ್ರಮುಖ ಸ್ಪೆಷಲಿಸ್ಟ್ ಸ್ಟಾಫಿಂಗ್ ಸಂಸ್ಥೆ ಎಕ್ಸ್‌ಫಿನೊ (Xpheno) ಉಡುಪಿಯಲ್ಲಿನ ತನ್ನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಅನ್ನು ವಿಸ್ತರಿಸಿರುವುದಾಗಿ ಘೋಷಿಸಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಸಂಸ್ಥೆಯು ತನ್ನ ಕಾರ್ಯಾಚರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿ, ಇದೀಗ 250 ಆಸನಗಳ ಆಧುನಿಕ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಫ್ರಾನ್ಸಿಸ್ ಪದ್ಮದನ್, ಸಹ-ಸಂಸ್ಥಾಪಕರಾದ ಅನಿಲ್ ಎತನೂರ್ ಹಾಗೂ ಕಮಲ್ ಕಾರಂತ್ ಉಪಸ್ಥಿತರಿದ್ದರು.

ಜಾಗತಿಕ ಸಾಮರ್ಥ್ಯ ಕೇಂದ್ರಗಳಿಂದ (GCC) ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಈ ವಿಸ್ತರಣೆ ಕೈಗೊಳ್ಳಲಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ಆರಂಭಗೊಂಡ ಈ ಕೇಂದ್ರವು ಇದುವರೆಗೆ ಐಟಿ ಮತ್ತು ಐಟಿಯೇತರ ಕ್ಷೇತ್ರಗಳಲ್ಲಿ 1,050ಕ್ಕೂ ಹೆಚ್ಚು ಯಶಸ್ವಿ ನೇಮಕಾತಿಗಳನ್ನು ಪೂರ್ಣಗೊಳಿಸಿದೆ. ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲದೆ ದುಬೈ ಮಾರುಕಟ್ಟೆಗೂ ಈ ಕೇಂದ್ರವು ಸೇವೆ ನೀಡುತ್ತಿದೆ.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಸಹಯೋಗದಲ್ಲಿ ಬಿಡುಗಡೆಗೊಂಡ ವರದಿಯಂತೆ, ಉಡುಪಿ–ಮಂಗಳೂರು ಪ್ರದೇಶದಲ್ಲಿ 3.10 ಲಕ್ಷಕ್ಕೂ ಹೆಚ್ಚು ಪ್ರತಿಭಾವಂತ ವೃತ್ತಿಪರರು ಲಭ್ಯವಿದ್ದಾರೆ. ಈ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಕ್ಸ್‌ಫಿನೊ ಸಂಸ್ಥೆ ಈ ಕರಾವಳಿ ಪ್ರದೇಶವನ್ನು ‘ಸಿಲಿಕಾನ್ ಬೀಚ್’ ಆಗಿ ರೂಪಿಸುವ ಗುರಿ ಹೊಂದಿದೆ.

ಸಂಸ್ಥೆಯ ಸಹ-ಸಂಸ್ಥಾಪಕ ಕಮಲ್ ಕಾರಂತ್ ಐರೋಡಿ ಮಾತನಾಡಿ, “ನಮ್ಮ ತಂಡದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ, ಇಲ್ಲಿ ಕೆಲಸ ಮಾಡುವ ಶೇಕಡಾ 80ರಷ್ಟು ಸಿಬ್ಬಂದಿ ನೇಮಕಾತಿ ಹಿನ್ನೆಲೆ ಇಲ್ಲದವರಾಗಿದ್ದು, ಅವರಿಗೆ ಸಮರ್ಪಕ ತರಬೇತಿ ನೀಡಿ ತಜ್ಞರನ್ನಾಗಿ ರೂಪಿಸಲಾಗಿದೆ” ಎಂದು ತಿಳಿಸಿದರು. ಮತ್ತೊಬ್ಬ ಸಹ-ಸಂಸ್ಥಾಪಕ ಅನಿಲ್ ಕುಮಾರ್ ಎತನೂರ್ ಅವರು ಸ್ಥಳೀಯ ನಾಯಕತ್ವ ಮತ್ತು ಮೂಲಸೌಕರ್ಯದ ಶ್ರೇಷ್ಠತೆಯನ್ನು ಶ್ಲಾಘಿಸಿದರು.

ಮಹಾನಗರಗಳನ್ನು ಮೀರಿ ವೇಗವಾಗಿ ಬೆಳೆಯುತ್ತಿರುವ ಈ ಕೇಂದ್ರವು ಸ್ಥಳೀಯ ಯುವಜನತೆಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವುದರೊಂದಿಗೆ, ಕರ್ನಾಟಕದ ಡಿಜಿಟಲ್ ಆರ್ಥಿಕತೆಗೆ ಮಹತ್ವದ ಬಲ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.

You may also like

News

ಕಾನ್ಪುರ ವಿಮಾನ ದುರಂತ – ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಜಿಲ್ಲೆಯ ಮೂಲದ ಯುವ ತರಬೇತಿ ಪೈಲಟ್ 22 ವರ್ಷ ಪ್ರಾಯದ ಅಭಿಷೇಕ್ ಪೂಜಾರಿ ಮೃತಪಟ್ಟಿರುವುದು ದೃಢಪಟ್ಟಿದೆ.
News

“ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ – ಸಮಿತಿ ರಚನೆಗೆ ಸಿಜೆ ಭರವಸೆ”

ಬೆಂಗಳೂರು: ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು

You cannot copy content of this page