October 18, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಒಕ್ಕುಪೆನ್ಸಿ ಸರ್ಟಿಫಿಕೇಟ್ ಇಲ್ಲದ ಮನೆಗಳಿಗೆ ಬೆಸ್ಕಾಂ ಶಾಕ್ – ವಿದ್ಯುತ್ ಸಂಪರ್ಕ ಸ್ಥಗಿತ, ಅಕ್ರಮ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಒಕ್ಕುಪೆನ್ಸಿ ಸರ್ಟಿಫಿಕೇಟ್ (OC) ಪಡೆಯದೇ ಮನೆ ನಿರ್ಮಿಸಿ ವಾಸಕ್ಕೆ ಪ್ರವೇಶಿಸಿದವರಿಗೆ ಬೆಸ್ಕಾಂ ಬಿಗ್ ಶಾಕ್ ನೀಡಿದೆ. OC ಇಲ್ಲದ ಮನೆಗಳಿಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಸ್ಥಗಿತಗೊಳಿಸಿದ್ದು, ಅಕ್ರಮ ವಿದ್ಯುತ್ ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ OC ಇಲ್ಲದೆ ವಿದ್ಯುತ್ ಬಳಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್‌ನಿಂದ OC ಕಡ್ಡಾಯವಾಗಿದ್ದರೂ, ನಿರ್ಮಾಣ ಹಂತದಲ್ಲಿದ್ದ ಅನೇಕ ಮನೆಗಳು ನಂತರ ವಾಸಕ್ಕೆ ಪ್ರವೇಶಿಸಿದ್ದರಿಂದ ಅಕ್ರಮ ವಿದ್ಯುತ್ ಬಳಕೆಯ ಪ್ರಕರಣಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಮಾತ್ರವೇ ಬೆಸ್ಕಾಂ ವಿಜಿಲೆನ್ಸ್ ವಿಭಾಗ 419 ಅಕ್ರಮ ವಿದ್ಯುತ್ ಬಳಕೆಯ ಪ್ರಕರಣಗಳನ್ನು ದಾಖಲಿಸಿದ್ದು, ಇದು 2024ರ ಡಿಸೆಂಬರ್‌ಗೆ ಹೋಲಿಸಿದರೆ 190 ಪ್ರಕರಣಗಳ ಹೆಚ್ಚಳವಾಗಿದೆ. ಜುಲೈ ನಂತರ ಬೆಸ್ಕಾಂ ಸಹಾಯವಾಣಿಗೆ ಬರುತ್ತಿರುವ ದೂರುಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ.

ಮುಖ್ಯವಾಗಿ ನೆರೆಹೊರೆಯವರಿಂದ ಬಂದ ದೂರುಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಪ್ರತಿ ಎರಡು ದಿನಗಳಿಗೊಮ್ಮೆ ತಪಾಸಣೆ ನಡೆಸಲಾಗುತ್ತಿದೆ. ಕೆಲ ಹೊಸ ಮನೆ ಮಾಲೀಕರು ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಲೈನ್‌ಗಳನ್ನು ಎಳೆಯುತ್ತಿರುವುದು ಪತ್ತೆಯಾಗಿದೆ.

OC ಇಲ್ಲದೆ ವಿದ್ಯುತ್ ಬಳಸುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಮುಂದುವರೆಯಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

You may also like

News

ಪುತ್ತೂರು ರಸ್ತೆ ಅಪಘಾತದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಮಮತಾ ದುರ್ಮರಣ

ಪುತ್ತೂರು ಮುಕ್ರಂಪಾಡಿಯಲ್ಲಿ ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪುತ್ತೂರು ಅಂಚೆ ಇಲಾಖೆಯ ಪೋಸ್ಟಲ್ ಅಸಿಸ್ಟೆಂಟ್ ಮಮತಾ ಅವರು ಚಿಕಿತ್ಸೆ
News

Inauguration of RGUHS Mangaluru Zone Throwball (M&W) Tournament 2026-27 at Father Muller Homoeopathic Medical College Deralakatte

RGUHS Mangaluru Zone Throwball (M&W) Tournament 2026-27 was hosted by Father Muller Homoeopathic Medical College, Deralakatte on 17th October 2026.

You cannot copy content of this page