October 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೈಂಟ್ ಅಲೋಶಿಯಸ್ ವಿವಿಯಲ್ಲಿ ‘ಸ್ವರಾಂಜಲಿ’ ಸಂಗೀತ ಕಚೇರಿ

ಫೆಬ್ರವರಿ 1ರಂದು ಆಧ್ಯಾತ್ಮಿಕ–ಸಮಕಾಲೀನ ಸಂಗೀತ ಸಂಭ್ರಮ

ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 1ರಂದು ಭಾನುವಾರ ಸಂಜೆ 5 ಗಂಟೆಗೆ ವಿಶ್ವವಿದ್ಯಾಲಯದ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ‘ಸ್ವರಾಂಜಲಿ’ — ಆಧ್ಯಾತ್ಮಿಕ ಮತ್ತು ಸಮಕಾಲೀನ ಸಂಗೀತದ ಗಾಯನ ಹಾಗೂ ವಾದ್ಯವೃಂದದ ಭವ್ಯ ಸಂಗೀತ ಕಚೇರಿ ಆಯೋಜಿಸಲಾಗುತ್ತಿದೆ.

ಕಾರ್ಯಕ್ರಮದ ಪೋಷಕರಾಗಿ ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ, ಎಸ್.ಜೆ. ಹಾಗೂ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಉಪಸ್ಥಿತಲಿರುವರು. ವಿವಿಧ ಬ್ಲಾಕ್‌ಗಳ ನಿರ್ದೇಶಕರು, ಡೀನ್‌ಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಂಗೀತಾಸಕ್ತ ಸಾರ್ವಜನಿಕರು ಈ ಸಂಗೀತ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಪ್ರಮುಖ ಗಾಯಕವೃಂದಗಳು ಹಾಗೂ ಆರ್ಕೆಸ್ಟ್ರಾಗಳಾದ ಬಲ್ಮಟ ಮ್ಯೂಸಿಕಲ್ ಅಸೋಸಿಯೇಷನ್, ಸೈಂಟ್ ಜೋಸೆಫ್ಸ್ ಸೆಮಿನರಿ, ಸಿಎಸ್‌ಐ ಯಂಗ್ ವಾಯ್ಸಸ್, ಆಶಾ ಕಿರಣ್, NEPAM, ಸೈಂಟ್ ಅಲೋಶಿಯಸ್ ಪಿಯು ಕಾಲೇಜು ತಂಡ ಹಾಗೂ ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯ ತಂಡಗಳು ಭಾಗವಹಿಸಲಿವೆ. ಜೊತೆಗೆ ರಾಚೆಲ್ ಪ್ರಿಯಾಂಕಾ ಫುರ್ಟಾಡೊ ಮತ್ತು ಅನನ್ಯಾ ಅಭಿಗೈಲ್ ಡಿಸಿಲ್ವಾ ಅವರ ವಿಶೇಷ ಗಾಯನ ಪ್ರಸ್ತುತಿ ಸಂಗೀತಾಸಕ್ತರನ್ನು ಮನಸೂರೆಗೊಳಿಸಲಿದೆ.

You may also like

News

NITK ಆವರಣದಲ್ಲಿ ಆಕಾಶದ ‘ಯೋಧ’ನಿಗೆ ಶಾಶ್ವತ ನೆಲೆ; ಮಿಗ್-21 ಹೊಸ ಹೆಗ್ಗುರುತು

ರಾಷ್ಟ್ರೀಯ ಹೆದ್ದಾರಿ 66ರಿಂದಲೂ ಗೋಚರಿಸುವ ಯುದ್ಧ ವಿಮಾನ; ವಿದ್ಯಾರ್ಥಿಗಳಲ್ಲಿ ದೇಶಸೇವೆ, ಶಿಸ್ತು–ಶ್ರೇಷ್ಠತೆಯ ಪ್ರೇರಣೆಗೆ ಹೊಸ ಸಂಕೇತ ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿರುವ ಮಿಗ್-21 ಯುದ್ಧ
News

ಐದು ದಶಕಗಳ ಯಕ್ಷಕಲಾ ಸೇವೆಗೆ ಸುವರ್ಣ ಸಂಭ್ರಮ – ಕಾಳಿಕಾಂಬಾ ಪ್ರತಿಷ್ಠಾನಕ್ಕೆ ಗಣ್ಯರ ಮೆಚ್ಚುಗೆ

ಪ್ರಭಾಕರ ಜೋಶಿಗೆ ‘ಸ್ವರ್ಣ ಸ್ಮೃತಿ ಗೌರವ’; ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ‘ಯಕ್ಷಕಲಾ ವಿದ್ವನ್ಮಣಿ’ ಪ್ರಶಸ್ತಿ ಐದು ದಶಕಗಳಿಂದ ಯಕ್ಷಗಾನ ಹಾಗೂ ತಾಳಮದ್ದಳೆ ಕಲೆಯ ಉಳಿವು, ಬೆಳವಣಿಗೆ ಮತ್ತು

You cannot copy content of this page