September 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಳ್ಳಾಲ ಠಾಣೆಯ ಎನ್‌ಡಿಪಿಎಸ್ ಪ್ರಕರಣ

14 ವರ್ಷಗಳ ಬಳಿಕ ತಲೆಮಾರಿಕೊಂಡಿದ್ದ ಆರೋಪಿ ದಸ್ತಗಿರಿ

ಉಳ್ಳಾಲ ಪೊಲೀಸ್ ಠಾಣೆಯ ಮೊ.ನಂ. 312/2011, ಕಲಂ 8(c)(ii) ಓದುಗ 20(b) ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಹಾಗೂ ಮಾನ್ಯ ಜೆಎಂಎಫ್‌ಸಿII ನ್ಯಾಯಾಲಯದ ಸಿಸಿ ನಂ. 1757/2013 ಪ್ರಕರಣದಲ್ಲಿ ತಲೆಮಾರಿಕೊಂಡಿದ್ದ ಆರೋಪಿ ಮಂಗಳೂರಿನ ಉಳ್ಳಾಲದ ಮುಕ್ಕಚೇರಿ, ತೋಯಿಬ್ ಮಸೀದಿ ಎದುರುಗಡೆಯ ಶಾಜ್ಮೀನ್ ಅಪಾರ್ಟ್ಮೆಂಟ್ ರೂಂ ನಂ. 07, ರ ನಿವಾಸಿ  ಮೊಹಮ್ಮದ್ ಸಂಶೀರ್ ನನ್ನು ಪೊಲೀಸರು ಪತ್ತೆಹಚ್ಚಿ ಈ ದಿನ ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿತನು ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಾನ್ಯ ಜೆಎಂಎಫ್‌ಸಿII ನ್ಯಾಯಾಲಯವು ಆರೋಪಿತನ ವಿರುದ್ಧ ಎಲ್‌ಪಿಸಿ ವಾರಂಟ್ ಹೊರಡಿಸಿತ್ತು. ಅದನ್ವಯ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು 14 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

You may also like

News

ಮಿಲಾಗ್ರಿಸ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ‘PALLINEXUS 2026’ – 113 ಭವಿಷ್ಯದ ಶುಶ್ರೂಷಕಿಯರಿಗೆ ಕರುಣಾಮಯ ಆರೈಕೆಯ ತರಬೇತಿ

ಕರುಣೆಯೊಂದಿಗೆ ಕೌಶಲ್ಯಪೂರ್ಣ ಶುಶ್ರೂಷಕಿಯರ ರೂಪಿಸುವುದು ಅಗತ್ಯ – ಫಾದರ್ ಐವನ್ ಮೈಕಲ್ ರೊಡ್ರಿಗಸ್ ಮಂಗಳೂರು: ಪ್ಯಾಲಿಯೇಟಿವ್ ಕೇರ್ ಕ್ಷೇತ್ರದಲ್ಲಿ ಭವಿಷ್ಯದ ಶುಶ್ರೂಷಕಿಯರಿಗೆ ಅಗತ್ಯವಾದ ಜ್ಞಾನ, ಕೌಶಲ್ಯ ಹಾಗೂ
News

ವಿವಾಹ ವೇದಿಕೆಯಲ್ಲಿ ಸಮಾಜಮುಖಿ ಹೆಜ್ಜೆ – ‘ಗೋ ಸಮ್ಮಾನ್’ ಜಾಗೃತಿಗೆ ಬೆಂಬಲಿಸಿ ಅತಿಥಿಗಳ ಸಹಿ ಸಂಗ್ರಹ

ಬಂಟ್ವಾಳ: ವಿವಾಹ ಸಮಾರಂಭವೊಂದರಲ್ಲಿ ಕೇವಲ ಸಂಭ್ರಮಾಚರಣೆಗೆಷ್ಟೇ ಸೀಮಿತವಾಗದೆ, ಸಮಾಜಮುಖಿ ಹಾಗೂ ಗೋ ರಕ್ಷಣೆಯ ಜಾಗೃತಿ ಮೂಡಿಸುವ ವಿನೂತನ ಅಭಿಯಾನವೊಂದು ನಡೆಯುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದೆ. ಬಂಟ್ವಾಳ

You cannot copy content of this page