August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶಿಖಾ ಸುಶೀಲ್‌ಗೆ ‘ಹಿಸ್ನಾ ಮಿಸ್ ದಾಯ್ಜಿವರ್ಲ್ಡ್–2026’ ಕಿರೀಟ

ಮಿಲಾಗ್ರಿಸ್ ಸಭಾಭವನದಲ್ಲಿ ನಡೆದ ಭವ್ಯ ಅಂತಿಮ ಸುತ್ತಿನಲ್ಲಿ ಮಂಗಳೂರು ಯುವತಿಯ ಸಾಧನೆ

ಮಂಗಳೂರಿನ ಪ್ರತಿಭಾವಂತ ಯುವತಿ ಶಿಖಾ ಸುಶೀಲ್ ಅವರುಹಿಸ್ನಾ ಮಿಸ್ ದಾಯ್ಜಿವರ್ಲ್ಡ್–2026’ ಕಿರೀಟವನ್ನು ಮುಡಿಗೇರಿಸಿಕೊಂಡು ನಗರಕ್ಕೆ ಹೆಮ್ಮೆ ತಂದಿದ್ದಾರೆ. ಫೆಬ್ರವರಿ 14ರಂದು ಶನಿವಾರ ರಾತ್ರಿ ನಗರದ ಮಿಲಾಗ್ರಿಸ್ ಸಭಾಭವನದಲ್ಲಿ ನಡೆದ ಭವ್ಯ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಶಿಖಾ ಸುಶೀಲ್ ಅವರನ್ನು ವಿಜೇತೆಯಾಗಿ ಘೋಷಿಸಲಾಯಿತು.

 

ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ದೇಶವಿದೇಶಗಳಿಂದ ಭಾಗವಹಿಸಿದ್ದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ದ್ವಿತೀಯ ಹಂತಕ್ಕೆ 25 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಆತ್ಮಸ್ಥೈರ್ಯ, ಸ್ವಪರಿಚಯ, ರ್‍ಯಾಂಪ್ ವಾಕ್, ಪ್ರಶ್ನೋತ್ತರ ಹಾಗೂಎಕ್ಸ್ ಫ್ಯಾಕ್ಟರ್ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಶಿಖಾ ಸುಶೀಲ್ ಅವರು ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಕಿರೀಟಕ್ಕೆ ಭಾಜನರಾದರು.

ಸೆರೆನಾ ಎವ್ಜಿನ್ ಪ್ರಥಮ ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡರೆ, ಫೇ ಮಾರ್ಟಿಸ್ ದ್ವಿತೀಯ ರನ್ನರ್ಅಪ್ ಸ್ಥಾನಕ್ಕೆ ಆಯ್ಕೆಯಾದರು. ಹಿಸ್ನಾ ಇಂಟರ್ ನ್ಯಾಷನಲ್ ಸಂಸ್ಥೆಯ ನಿರ್ದೇಶಕರಾದ ರೊನಾಲ್ಡ್ ಪಿಂಟೊ ಹಾಗೂ ಅವರ ಪತ್ನಿ ಡೊರೊತಿ ಪಿಂಟೊ ವಿಜೇತರನ್ನು ಕಿರೀಟದೊಂದಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು. ಪ್ರಥಮ ವಿಜೇತಿಗೆ ₹3 ಲಕ್ಷ, ಪ್ರಥಮ ರನ್ನರ್ಅಪ್ಗೆ ₹2 ಲಕ್ಷ ಮತ್ತು ದ್ವಿತೀಯ ರನ್ನರ್ಅಪ್ಗೆ ₹1 ಲಕ್ಷ ನಗದು ಬಹುಮಾನ ನೀಡಲಾಯಿತು.

ಇದಲ್ಲದೆ, ಅಂತಿಮ ಸುತ್ತಿಗೆ ಪ್ರವೇಶಿಸಿದ ಇತರ ಒಂಭತ್ತು ಸ್ಪರ್ಧಿಗಳು ವೈಯಕ್ತಿಕ ಬಿರುದುಗಳೊಂದಿಗೆ ತಲಾ ₹25 ಸಾವಿರ ನಗದು ಬಹುಮಾನ ಪಡೆದುಕೊಂಡರು.

 ಭಾರೀ ಸ್ಪರ್ಧೆ ನಡುವೆಯೂ ಶಿಖಾ ಸುಶೀಲ್ ಅವರ ಆತ್ಮವಿಶ್ವಾಸ ಮತ್ತು ಪ್ರತಿಭೆ ಮೆರೆಯಿತು. ಅವರ ಸಾಧನೆ ಮಂಗಳೂರಿನ ಯುವಜನತೆಗೆ ಪ್ರೇರಣೆಯಾಗಿದ್ದು, ನಗರದ ಹೆಸರನ್ನು ರಾಷ್ಟ್ರಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಎತ್ತಿಹಿಡಿದಿದೆ.

You may also like

News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
News

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಭಜನಾ ಕಮ್ಮಟದ

You cannot copy content of this page