June 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫೆಬ್ರವರಿ 26ರಿಂದ ನಾಲ್ಕು ದಿನಗಳ ‘ಬೃಹತ್ ಬೈಬಲ್ ಅಧಿವೇಶನ 2026’

ಮಂಗಳೂರು ಧರ್ಮಕ್ಷೇತ್ರದ ಕುಲಶೇಖರದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ಬಯಲು ಮೈದಾನದಲ್ಲಿ ಆಯೋಜನೆ

ಮಂಗಳೂರು ಧರ್ಮಕ್ಷೇತ್ರದ ಕ್ಯಾರಿಸ್ಮ್ಯಾಟಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಬೈಬಲ್ ಆಯೋಗದ ಜಂಟಿ ಆಶ್ರಯದಲ್ಲಿ ಫೆಬ್ರವರಿ 26ರಿಂದ ಮಾರ್ಚ್ 01ರ ತನಕ ನಾಲ್ಕು ದಿನಗಳ ಕಾಲ ‘ಬೃಹತ್ ಬೈಬಲ್ ಅಧಿವೇಶನ’ವನ್ನು ಆಯೋಜಿಸಲಾಗಿದೆ.

 

ಕುಲಶೇಖರದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ನ ಬಯಲು ಮೈದಾನದಲ್ಲಿ ಪ್ರತಿದಿನ ಸಂಜೆ 4:00 ರಿಂದ ರಾತ್ರಿ 8:30 ರ ತನಕ ಈ ಆಧ್ಯಾತ್ಮಿಕ ಸಮ್ಮೇಳನ ನಡೆಯಲಿದೆ ಎಂದು ಇಂದು ಫೆಬ್ರವರಿ 23ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರು ಹೇಳಿದರು.

ಕಾರ್ಯಕ್ರಮದ ಪ್ರಮುಖಾಂಶಗಳು:

* ಧ್ಯೇಯವಾಕ್ಯ: ಈ ವರ್ಷದ ಅಧಿವೇಶನಕ್ಕೆ “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲೆಸಲಿ” (ಸಂತ ಪೌಲರು ಕೊಲೊಸ್ಸೆಯರಿಗೆ ಬರೆದ ಪತ್ರ, ಅಧ್ಯಾಯ 3, ವಾಕ್ಯ 16) ಎಂಬ ಧ್ಯೇಯವಾಕ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

* ಧಾರ್ಮಿಕ ವಿಧಿವಿಧಾನಗಳು: ಪ್ರತಿದಿನ ಪವಿತ್ರ ಬಲಿಪೂಜೆ, ಪವಿತ್ರ ಜಪಮಾಲೆಯ ಧ್ಯಾನ, ದಿವ್ಯಸಂಸ್ಕಾರದ ಆರಾಧನೆ, ಸ್ತುತಿ-ಆರಾಧನೆ ಹಾಗೂ ಜನರಿಗಾಗಿ ಗುಣಪಡಿಸುವ ಪ್ರಾರ್ಥನೆಗಳು ನಡೆಯಲಿವೆ.

* ಪ್ರವಚನಕಾರರು: ಎಂಟು ಮಂದಿ ಧರ್ಮಗುರುಗಳು ದೇವರ ವಾಕ್ಯವನ್ನು ಬೋಧಿಸಲಿದ್ದಾರೆ ಮತ್ತು ನಾಲ್ವರು ಧರ್ಮಗುರುಗಳು ಆರಾಧನೆಯ ನೇತೃತ್ವ ವಹಿಸಲಿದ್ದಾರೆ.

* ಭಾಷೆ: ಬೈಬಲ್‌ನ ಹಳೆಯ ಮತ್ತು ಹೊಸ ಒಡಂಬಡಿಕೆಯ ವಿಷಯಗಳ ಕುರಿತು ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆಳವಾದ ಪ್ರವಚನಗಳು ನಡೆಯಲಿವೆ.

ಅಧಿವೇಶನದ ಉದ್ದೇಶ:

ನಮ್ಮ ನಡುವೆ ನೆಲೆಸಿರುವ ದೇವರ ವಾಕ್ಯವನ್ನು ಆಚರಿಸುವುದು ಮತ್ತು ಸಂಭ್ರಮಿಸುವುದು ಈ ಅಧಿವೇಶನದ ಪ್ರಮುಖ ಉದ್ದೇಶವಾಗಿದೆ. ಬೈಬಲ್ ವಾಕ್ಯದ ಮೂಲಕ ಜನರ ಜೀವನದ ಸಂಕಷ್ಟಗಳಲ್ಲಿ ದೇವರ ಉಪಸ್ಥಿತಿಯನ್ನು ಅರಿಯಲು ಮತ್ತು ದೇವರ ವಾಕ್ಯದ ಬೆಳಕಿನಲ್ಲಿ ಜೀವನವನ್ನು ರೂಪಿಸಿಕೊಳ್ಳಲು ಈ ಸಮಾವೇಶವು ಪೂರಕವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪತ್ರಿಕಾ ಗೋಷ್ಠಿಯಲ್ಲಿ ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರುಗಳಾದ ಅತೀ ವಂದನೀಯ ಮ್ಯಾಕ್ಸಿಂ ಎಲ್. ನೊರೊನ್ಹಾ, ಆಧ್ಯಾತ್ಮಿಕ ನಿರ್ದೇಶಕರು, ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಹಾಗೂ ಕುಲಶೇಖರ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್, ಮಂಗಳೂರು ಧರ್ಮಕ್ಷೇತ್ರದ ಬೈಬಲ್ ಆಯೋಗದ ಕಾರ್ಯದರ್ಶಿಗಳಾದ ವಂದನೀಯ ಡಾ. ವಿನ್ಸೆಂಟ್ ಸಿಕ್ವೇರಾ, ಮಂಗಳಜ್ಯೋತಿ ನಿರ್ದೇಶಕರಾದ ವಂದನೀಯ ಫಾದರ್ ರೋಹಿತ್ ಡಿಕೋಸ್ಟಾ, ಕೆನರಾ ಕಮ್ಯುನಿಕೇಶನ್ ನಿರ್ದೇಶಕರಾದ ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್, ಸಾರ್ವಜನಿಕ ಸಂಪರ್ಕಾಧಿಕಾರಿ ರೊಯ್ ಕಾಸ್ತೆಲಿನೊ, ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಸಂಚಾಲಕ ಡೊಲ್ಫಿ ಲೋಬೊ ಮತ್ತು ಪತ್ರಿಕಾ ಸಂಚಾಲಕ ಎಲಿಯಾಸ್ ಫೆರ್ನಾಂಡಿಸ್ ಅವರು ಉಪಸ್ಥಿತರಿದ್ದರು.

ಕಳೆದ ವರ್ಷಗಳಂತೆಯೇ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಆಯೋಜಕರು ಸರ್ವರನ್ನೂ ಪ್ರೀತಿಯಿಂದ ಆಹ್ವಾನಿಸಿದ್ದಾರೆ.

You may also like

News

ಮಂಗಳೂರಿನ ಕುವರಿಗೆ ಒಲಿದ ದೂರದರ್ಶನ ಮನ್ನಣೆ : ಬಿ-ಗ್ರೇಡ್ ಭರತನಾಟ್ಯ ಕಲಾವಿದೆಯಾಗಿ ರೆಮೋನಾ ಎವೆಟ್ ಪೆರೇರಾ ಆಯ್ಕೆ

ಕರಾವಳಿಯ ಸಾಂಸ್ಕೃತಿಕ ನಗರಿ ಮಂಗಳೂರಿನ ಪ್ರತಿಭಾನ್ವಿತ ಯುವತಿ, ಕುಮಾರಿ ರೆಮೋನಾ ಎವೆಟ್ ಪೆರೇರಾ ಅವರು ಪ್ರಸಾರ ಭಾರತಿಯ ದೂರದರ್ಶನ ಚಂದನ ವಾಹಿನಿ ನಡೆಸಿದ ಕಠಿಣ ಆಡಿಷನ್‌ನಲ್ಲಿ ಯಶಸ್ವಿಯಾಗಿ
News

ಕಂಬಳ ಕೋಣಗಳ ಮಾಲೀಕನಿಗೆ ಹಲ್ಲೆ, ಸುಲಿಗೆ ಯತ್ನ ಪ್ರಕರಣ – ಮೂವರು KCOCA ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು

ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಕಂಬಳದಲ್ಲಿ ಗೆದ್ದ ಕೋಣಗಳ ಮಾಲೀಕನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ

You cannot copy content of this page