September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಟೋಲ್ ಹಗಲು ದರೋಡೆಗೆ ಬ್ರೇಕ್ ಹಾಕಲು ‘ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿ’ ಅಸ್ತಿತ್ವಕ್ಕೆ

ಕಳೆದ 13 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ ಇದೀಗ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಒಂದಾಗಿವೆ. ಅವೈಜ್ಞಾನಿಕ ಟೋಲ್ ಸಂಗ್ರಹದ ವಿರುದ್ಧ ಸಮರ ಸಾರಲು ‘ದಕ್ಷಿಣ ಕನ್ನಡ ಜಿಲ್ಲಾ ಟೋಲ್ ವಿರೋಧಿ ಹೋರಾಟ ಸಮಿತಿ’ ಯನ್ನು ಗುರುವಾರ ಅಧಿಕೃತವಾಗಿ ರಚಿಸಲಾಯಿತು. ಬಿ.ಸಿ. ರೋಡಿನ ರಿಕ್ಷಾ ಭವನದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್, ಎಸ್ಡಿಪಿಐ, ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಪ್ರಮುಖ ನಿರ್ಧಾರಗಳು ಮತ್ತು ನೇಮಕಾತಿ:

ಸಭೆಯಲ್ಲಿ ಟೋಲ್ ತೆರವುಗೊಳಿಸಲು ನಿರಂತರ ಮತ್ತು ಸಕ್ರಿಯ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಸಮಿತಿಯ ನೂತನ ಪದಾಧಿಕಾರಿಗಳ ವಿವರ ಇಲ್ಲಿದೆ:

* ಸಂಚಾಲಕರು: ಸುಹೇಲ್ ಕಂದಕ್, ಅನ್ವರ್ ಸಾದತ್ ಬಜತ್ತೂರು, ಎಂ.ಎಸ್. ಮಹಮ್ಮದ್.

* ಸಮಿತಿ ಸದಸ್ಯರು: ಹನೀಫ್ ಖಾನ್ ಕೊಡಾಜೆ, ಧನುರಾಜ್ ಪೂಜಾರಿ, ಅಶ್ರಫ್ ಕಲ್ಲೇಗ, ಲತೀಫ್ ಅರಫಾ, ಮೂನಿಶ್ ಅಲಿ, ಇಕ್ಬಾಲ್ ಐಎಂಆರ್, ಶಾಹುಲ್ ಎಸ್. ಎಚ್., ಇಮ್ರಾನ್ ಪಿ. ಜೆ., ನಾಸಿರ್, ವಿನಯ ಕುಮಾರ್, ಹಿಸ್ರರ್, ಸತ್ತಾರ್, ಸವಾಝ್ ಬಂಟ್ವಾಳ ಮತ್ತು ಶಾಕಿರ್.

ಹೋರಾಟದ ಹಿನ್ನೆಲೆ:

ಬ್ರಹ್ಮರಕೊಟ್ಲು ಟೋಲ್ ಪ್ಲಾಜಾವು ಹೆದ್ದಾರಿ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದೆ. ಇದು ಜಿಲ್ಲೆಯ ಜನತೆಗೆ ಮಾಡುವ “ಹಗಲು ದರೋಡೆ” ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗುತ್ತಿರುವ ಟೋಲ್ ಗೇಟ್‌ಗಳ ವಿರುದ್ಧವೂ ಈ ಸಮಿತಿಯು ಸಮರೋಪಾದಿಯಲ್ಲಿ ಹೋರಾಟ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಆರಂಭದಲ್ಲಿ ಐಎಂಆರ್ ಇಕ್ಬಾಲ್ ಸ್ವಾಗತಿಸಿದರೆ, ಸವಾಝ್ ಬಂಟ್ವಾಳ ಧನ್ಯವಾದ ಅರ್ಪಿಸಿದರು.

You may also like

News

ಶ್ರೀ ಕೃಷ್ಣನ ಆದರ್ಶ ಪಾಲಿಸಿದಾಗ ಧಾರ್ಮಿಕ ಆಚರಣೆಗೆ ಸಾರ್ಥಕತೆ – ಮಾಜಿ ಸಚಿವ ಬಿ. ರಮಾನಾಥ ರೈ

ಸೌಹಾರ್ದತೆಗೆ ಮಾದರಿಯಾದ ಮಾಣಿ ಯುವಕ ಮಂಡಲದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಭಾವೈಕ್ಯತೆ ಸಾರಿದ ವಿಶಿಷ್ಟ ಕಾರ್ಯಕ್ರಮ ಮಾಣಿ: ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ನಾವು
News

ಹನೂರು ಅರಣ್ಯ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಕ್ರೈಸ್ತ ಸಂಘಟನೆ ಒತ್ತಾಯ

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಡಿಜಿಪಿಗೆ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ

You cannot copy content of this page