October 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮತ್ತು ಉಪವಾಸಕ್ಕೆ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಕರೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಶಾಂತಿಯ ಹಿನ್ನೆಲೆಯಲ್ಲಿ, ವಿಶ್ವ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಉಪವಾಸವನ್ನು ಆಚರಿಸುವಂತೆ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಇಂದು ಮಾರ್ಚ್ 5ರಂದು ಗುರುವಾರ ನೀಡಿದ ಪತ್ರಿಕಾ ಪ್ರಕಟನೆ ಮುಖಾಂತರ ಭಕ್ತಾದಿಗಳಿಗೆ ಕರೆ ನೀಡಿದ್ದಾರೆ.

ಭಾರತೀಯ ಕ್ಯಾಥೋಲಿಕ್ ಬಿಷಪ್‌ಗಳ ಒಕ್ಕೂಟದ (CCBI) ಅಧ್ಯಕ್ಷರಾದ ಕಾರ್ಡಿನಲ್ ಡಾ. ಫಿಲಿಪ್ ನೇರಿ ಫೆರಾವೊ ಅವರು ಹೊರಡಿಸಿದ ಸುತ್ತೋಲೆಯನ್ನು ಉಲ್ಲೇಖಿಸಿ ಬಿಷಪ್ ಅವರು ಈ ಮನವಿ ಮಾಡಿದ್ದಾರೆ. ಯುದ್ಧದಿಂದಾಗಿ ಉಂಟಾಗುತ್ತಿರುವ ಅಪಾರ ಜೀವಹಾನಿ ಮತ್ತು ಮೂಲಸೌಕರ್ಯಗಳ ನಾಶದ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಅಂಶಗಳು:

* ಮಾರ್ಚ್ 8, ಭಾನುವಾರ: ಮಧ್ಯಪ್ರಾಚ್ಯದ ಶಾಂತಿಗಾಗಿ ಮತ್ತು ಅಮಾಯಕರ ರಕ್ಷಣೆಗಾಗಿ ‘ವಿಶೇಷ ಪ್ರಾರ್ಥನಾ ದಿನ’ವಾಗಿ ಆಚರಿಸಲು ಸೂಚಿಸಲಾಗಿದೆ.

* ಮಾರ್ಚ್ 8 ರಿಂದ 14: ಈ ಅವಧಿಯಲ್ಲಿ ಪ್ರತಿದಿನ ಶಾಂತಿಗಾಗಿ ‘ಪವಿತ್ರ ರೋಜರಿ’ (ಜಪಸರ) ಪ್ರಾರ್ಥನೆ ಮಾಡಲು ತಿಳಿಸಲಾಗಿದೆ.

* ಮಾರ್ಚ್ 13, ಶುಕ್ರವಾರ: ಯುದ್ಧ ಪೀಡಿತರ ಸುರಕ್ಷತೆಗಾಗಿ ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸಲು ‘ಉಪವಾಸ ಮತ್ತು ಪ್ರಾರ್ಥನಾ ದಿನ’ವಾಗಿ ಆಚರಿಸಲು ಕರೆ ನೀಡಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಉದ್ಯೋಗಕ್ಕಾಗಿ ತೆರಳಿರುವ ನಮ್ಮ ದೇಶದ ಜನರು ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ. ಜಾಗತಿಕ ನಾಯಕರು ಮಾತುಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಲಿ ಎಂದು ಬಿಷಪ್ ಅವರು ಆಶಿಸಿದ್ದಾರೆ.

You may also like

News

ಕಳ್ಳತನ ಪ್ರಕರಣ – ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಟ್ಲ ಪೊಲೀಸರಿಂದ ಬಂಧನ

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
News

Father Muller Medical College Hospital Showcases Green Healthcare Initiatives at NABH National Patient Safety Conference in Delhi

Selected for a national-level presentation, FMMCH highlights sustainable environmental practices, responsible resource management and resilience in healthcare delivery Father Muller

You cannot copy content of this page