October 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ

ಬಸ್ ಪ್ರಯಾಣಿಕರ 20 ಲಕ್ಷ ಮೌಲ್ಯದ ಚಿನ್ನ ದೋಚಿದ್ದ ಅಂತರ್ ರಾಜ್ಯ ಕಳ್ಳ ಸೆರೆ

ಚಲಿಸುವ ಬಸ್‌ನಲ್ಲಿ ಪ್ರಯಾಣಿಕರ ಬ್ಯಾಗ್‌ನಿಂದ ಭಾರಿ ಪ್ರಮಾಣದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ದೊಡ್ಡ ಯಶಸ್ಸು ಕಂಡಿದ್ದಾರೆ. ಮಧ್ಯಪ್ರದೇಶ ಮೂಲದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ 20 ಲಕ್ಷ ರೂಪಾಯಿ ಮೌಲ್ಯದ 174 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ವಿವರ:

ದಿನಾಂಕ 19.11.2025 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿದ್ದ ಸುಮಾರು 170 ರಿಂದ 180 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 132/2025, ಕಲಂ: 303(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರು.

ದಸ್ತಗಿರಿ ಮತ್ತು ಜಪ್ತಿ:

ತನಿಖೆ ನಡೆಸಿದ ಪೊಲೀಸರು ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆಯ ನಿವಾಸಿ 37 ವರ್ಷ ಪ್ರಾಯದ ಸಮದ್ ಖಾನ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳ್ಳತನ ಮಾಡಲಾಗಿದ್ದ ಸುಮಾರು 174 ಗ್ರಾಂ ತೂಕದ, ಅಂದಾಜು 20 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾ ತಂಡದ ವಿವರ:

ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಯಶ್ ಕುಮಾರ್ ಶರ್ಮಾ (IPS) ರವರ ಮಾರ್ಗದರ್ಶನದಲ್ಲಿ, ಬಂಟ್ವಾಳ ನಗರ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಕೆ.ವಿ. ರವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡ:

* ಅಧಿಕಾರಿಗಳು: ಸಂದೀಪ್ ಕುಮಾರ್ ಶೆಟ್ಟಿ (ಪಿ.ಎಸ್.ಐ., ಬಂಟ್ವಾಳ ನಗರ).

* ಸಿಬ್ಬಂದಿಗಳು: ಹೆಚ್.ಸಿ. ವಿಜಯ್ ಕುಮಾರ್ (719), ರಾಜೇಶ್ (1023), ಇರ್ಷಾದ್ (1037), ಸುರೇಶ್ ಕುಮಾರ್ (310).

* ಪೊಲೀಸ್ ಕಾನ್ಸ್ಟೇಬಲ್ಸ್: ಬಸವರಾಜ (2294), ವಿಜಯ್ ಕುಮಾರ್ (2471), ರೇವತಿ (ಮಪಿಸಿ 2436).

* ತಾಂತ್ರಿಕ ನೆರವು: ಜಿಲ್ಲಾ ಪೊಲೀಸ್ ಘಟಕದ ಗಣಕ ಯಂತ್ರ ವಿಭಾಗದ ಸಂಪತ್ ಕುಮಾರ್ ಮತ್ತು ದಿವಾಕರ.

ಅಂತರ್ ರಾಜ್ಯ ಕಳ್ಳನನ್ನು ಪತ್ತೆಹಚ್ಚಿ, ಸಾರ್ವಜನಿಕರ ಬೆಲೆಬಾಳುವ ಸೊತ್ತನ್ನು ಮರಳಿ ಪಡೆಯುವಲ್ಲಿ ಶ್ರಮಿಸಿದ ಇಡೀ ಪೊಲೀಸ್ ತಂಡದ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

You may also like

News

ಕಳ್ಳತನ ಪ್ರಕರಣ – ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಟ್ಲ ಪೊಲೀಸರಿಂದ ಬಂಧನ

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
News

Father Muller Medical College Hospital Showcases Green Healthcare Initiatives at NABH National Patient Safety Conference in Delhi

Selected for a national-level presentation, FMMCH highlights sustainable environmental practices, responsible resource management and resilience in healthcare delivery Father Muller

You cannot copy content of this page