October 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಟ್ಲ ಪೊಲೀಸರ ಭರ್ಜರಿ ಕಾರ್ಯಾಚರಣೆ – ಲಕ್ಷಾಂತರ ಮೌಲ್ಯದ MDMA ಜಪ್ತಿ

ನಾಲ್ವರು ಆರೋಪಿಗಳ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಡ್ರಗ್ಸ್ ಮಾರಾಟ ಜಾಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆಯ ವಿವರ:

ಬಂಟ್ವಾಳ ತಾಲೂಕಿನ ನೇರಳಕಟ್ಟೆ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ 38 ವರ್ಷ ಪ್ರಾಯದ ಅಶ್ರಫ್ ಜಿ. ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತುವನ್ನು ಸಂಗ್ರಹಿಸಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಈ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ (ತನಿಖೆ-1) ರತ್ನಕುಮಾರ್ ಎಂ. ಮತ್ತು ತಂಡವು ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಎಂಬಲ್ಲಿರುವ ಅಶ್ರಫ್‌ನ ನಿವಾಸದ ಮೇಲೆ ದಾಳಿ ನಡೆಸಿದರು.

ವಶಪಡಿಸಿಕೊಂಡ ಸೊತ್ತುಗಳು:

ದಾಳಿಯ ಸಮಯದಲ್ಲಿ ಮನೆಯಲ್ಲಿದ್ದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಕೆಳಗಿನ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ:

* ಮಾದಕ ವಸ್ತು: ಒಟ್ಟು 17.97 ಗ್ರಾಂ ತೂಕದ MDMA

* ಅಂದಾಜು ಮೌಲ್ಯ: ಸುಮಾರು ರೂಪಾಯಿ 1,79,700/-.

* ಇತರೆ: ಮಾರಕ ಆಯುಧ (ಚೂರಿ) ಹಾಗೂ ಕೃತ್ಯಕ್ಕೆ ಬಳಸಲಾದ ಇತರೆ ಸೊತ್ತುಗಳು.

ಬಂಧಿತ ಆರೋಪಿಗಳು:  ಅಶ್ರಫ್ ಜಿ., ಹಫೀಝ್ ಅಲಿಯಾಸ್ ಅಪ್ಪಿ, ಅಫ್ವಾನ್, ಅಶ್ರಫ್ ಎನ್.ಎ.

ಕಾನೂನು ಕ್ರಮ:

ಬಂಧಿತರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 61/2026 ರಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಮೇಲೆ ಮಾದಕ ದ್ರವ್ಯ ವಿರೋಧಿ ಕಾಯ್ದೆ (NDPS Act 1985 ರ ಕಲಂ 8(C), 22(C)) ಮತ್ತು ಆಯುಧ ಕಾಯ್ದೆ (Arms Act ಕಲಂ 27) ಅಡಿಯಲ್ಲಿ ಮೊಕದ್ದಮೆ ಹೂಡಿ ತನಿಖೆ ಮುಂದುವರಿಸಲಾಗಿದೆ.

You may also like

News

ಕೋಮುದ್ವೇಷದ ಭಾಷಣ ಆರೋಪ – ಜಗದೀಶ್ ಕಾರಂತ್ ಹಾಗೂ ಶ್ರೀಕಾಂತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

ಪುತ್ತೂರಿನ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಕೋಮುದ್ವೇಷದ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಿಂದೂ ಸಂಘಟನೆಗಳ ಮುಖಂಡರಾದ ಜಗದೀಶ್ ಕಾರಂತ್
News

MBA ಬಳಿಕ ಕೃಷಿಯತ್ತ ಮುಖ ಮಾಡಿದ ಯುವತಿ – 25 ಎಕರೆ ಹೈಟೆಕ್ ಕೃಷಿಯಿಂದ ₹4 ಕೋಟಿ ವಹಿವಾಟು

ಎಂಬಿಎ ಪದವಿ, ಕಾರ್ಪೊರೇಟ್ ಉದ್ಯೋಗದ ಅವಕಾಶಗಳನ್ನು ಬದಿಗಿಟ್ಟು ಕೃಷಿಯನ್ನೇ ಉದ್ಯಮವಾಗಿಸಿಕೊಂಡ 27 ವರ್ಷದ ಯುವತಿ ಪ್ರಣೀತಾ ವಾಮನ್ ಇಂದು ಯಶಸ್ವಿ ಕೃಷಿಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆ

You cannot copy content of this page