July 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೌಹಾರ್ದಯುತ ಹಬ್ಬದ ಆಚರಣೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ – ಸಾರ್ವಜನಿಕರಿಗೆ ಮಹತ್ವದ ಸೂಚನೆ

ಪರಸ್ಪರ ಸಹಕಾರಕ್ಕೆ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ಕರೆ

ಮುಂಬರುವ ರಂಜಾನ್ ಮತ್ತು ಯುಗಾದಿ ಹಬ್ಬಗಳನ್ನು ಶಾಂತಿ, ಸೌಹಾರ್ದತೆ ಹಾಗೂ ಶಿಸ್ತಿನಿಂದ ಆಚರಿಸುವ ನಿಟ್ಟಿನಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಮುಖ ಶಾಂತಿ ಸಭೆಯನ್ನು ಇಂದು ಮಾರ್ಚ್ 15ರಂದು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಲವು ನಿರ್ಣಾಯಕ ಸೂಚನೆಗಳನ್ನು ನೀಡಲಾಯಿತು.

ಪರಸ್ಪರ ಸಹಕಾರಕ್ಕೆ ಸಬ್ ಇನ್ಸ್ಪೆಕ್ಟರ್ ಕರೆ:

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಟ್ಲ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಅವರು ಮಾತನಾಡಿ, “ಹಬ್ಬದ ಸಂಭ್ರಮವು ಸಮಾಜದಲ್ಲಿ ಒಡಕು ಮೂಡಿಸಬಾರದು. ಮಸೀದಿ ಹಾಗೂ ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಉಭಯ ಸಮುದಾಯದ ನಾಯಕರು ಸಹೋದರತ್ವ ಕಾಪಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.

ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆಗಳು:

ಸಭೆಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪ್ರಸ್ತಾಪಿಸಲಾಯಿತು:

* ಅಪ್ರಾಪ್ತರಿಗೆ ವಾಹನ ನೀಡಬೇಡಿ: ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

* ಮಾದಕ ದ್ರವ್ಯ ತಡೆ: ಗಾಂಜಾ ಜಾಲದ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದರೆ ಅವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು.

* ಸೈಬರ್ ಸುರಕ್ಷತೆ: ಗ್ಯಾಸ್ ಬುಕ್ಕಿಂಗ್ ವಂಚನೆ, APK ಫೈಲ್ ಕಳುಹಿಸಿ ಓಟಿಪಿ (OTP) ಪಡೆಯುವ ಸೈಬರ್ ಕ್ರಿಮಿನಲ್‌ಗಳ ಬಗ್ಗೆ ಜಾಗರೂಕರಾಗಿರಲು ಮತ್ತು ಇಂತಹ ಕರೆಗಳಿಗೆ ಸ್ಪಂದಿಸದಂತೆ ತಿಳಿಸಲಾಯಿತು.

ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ:

ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ವಿಟ್ಲ ಪಟ್ಟಣದ ಪ್ರಮುಖ ಸಮಸ್ಯೆಗಳತ್ತ ಪೊಲೀಸರ ಗಮನ ಸೆಳೆದರು:

* ಟ್ರಾಫಿಕ್ ಸಮಸ್ಯೆ: ವಿಟ್ಲ ಪಟ್ಟಣದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಬೇಕೆಂದು ಮನವಿ ಮಾಡಲಾಯಿತು.

* ಮಣ್ಣಿನ ಲಾರಿಗಳ ಕಾಟ: ಕನ್ಯಾನ ಮತ್ತು ಬೈರಿಕಟ್ಟೆ ಮಾರ್ಗವಾಗಿ ಸಂಚರಿಸುವ ಮಣ್ಣಿನ ಲಾರಿಗಳು ಟರ್ಪಲ್ ಹೊದಿಸದೆ ಚಲಿಸುತ್ತಿರುವುದರಿಂದ ಧೂಳಿನ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದರು.

ಸಭೆಯ ಕೊನೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಅವರು ಎಲ್ಲರಿಗೂ ಹಬ್ಬದ ಮುಂಗಡ ಶುಭಾಶಯಗಳನ್ನು ಕೋರಿ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

You may also like

News

Former CSST General Councillor Sr Josephette Passes Away

The Congregation of the Carmelite Sisters of Saint Teresa (CSST) is mourning the passing of Sr Josephette, former General Councillor
News

ಹಿರಿಯ ಕಲಾವಿದ ಎಲ್.ಕೆ. ಧರಣ್ ಮಾಣಿ ಅವರಿಗೆ ಪಿತೃ ವಿಯೋಗ

ಭಜನಾ ಗಾಯಕ ರುಕ್ಮಯ್ಯ ಲಾಡ್ರುಕೋಡಿ ನಿಧನ ಖ್ಯಾತ ಹಿನ್ನೆಲೆ ಗಾಯಕ, ಕಲಾವಿದ ಹಾಗೂ ಸಂಕೀರ್ತನಕಾರ ಎಲ್.ಕೆ. ಧರಣ್ ಮಾಣಿ ಅವರ ತಂದೆ, ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ

You cannot copy content of this page