May 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಗಂಡಿಬಾಗಿಲು ಸಿಯೋನ್ ಆಶ್ರಮದ 27ನೇ ವಾರ್ಷಿಕೋತ್ಸವ – ಸೇವಾ ಕಾರ್ಯಕ್ಕೆ ಗಣ್ಯರ ಶ್ಲಾಘನೆ

ಗಂಡಿಬಾಗಿಲು ಇಲ್ಲಿನ ಪ್ರಸಿದ್ಧ ಸಮಾಜ ಸೇವಾ ಸಂಸ್ಥೆಯಾದ ಸಿಯೋನ್ ಆಶ್ರಮ ಟ್ರಸ್ಟ್ (ರಿ.) ತನ್ನ 27ನೇ ವರ್ಷದ ಸಂಭ್ರಮವನ್ನು ಸಡಗರದಿಂದ ಆಚರಿಸಿತು. ಮಾರ್ಚ್ 22ರಂದು ಭಾನುವಾರ ನಡೆದ ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶ್ರಮದ ನಿಸ್ವಾರ್ಥ ಸೇವೆಯನ್ನು ಗಣ್ಯರು ಮುಕ್ತಕಂಠದಿಂದ ಪ್ರಶಂಸಿಸಿದರು.

ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಮೇರಿ ಯು.ಪಿ. ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ನಿರ್ದೇಶಕ ಡಾ. ಯು.ಸಿ. ಪೌಲೋಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರಕಾಶ್ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಶ್ರಮದ ಕುರಿತು ತಾವು ರಚಿಸಿದ ಸ್ವರಚಿತ ಕವನವನ್ನು ಹಾಡುವ ಮೂಲಕ ಅವರು ಎಲ್ಲರ ಗಮನ ಸೆಳೆದರಲ್ಲದೆ, ಆಶ್ರಮದ ಮಾನವೀಯ ಕಾರ್ಯಗಳು ಮಾದರಿಯಾಗಿವೆ ಎಂದರು.

ಸಂಸ್ಥೆಯ ವೈದ್ಯಾಧಿಕಾರಿ ಡಾ. ಶಿವಾನಂದ ಸ್ವಾಮಿ ಆಶ್ರಮವು ಬೆಳೆದು ಬಂದ ಹಾದಿ ಹಾಗೂ ಸದ್ಯದ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಿದರು. ಲೆಕ್ಕಾಧಿಕಾರಿ ಸೌಮ್ಯ ಯು.ಪಿ. ವಾರ್ಷಿಕ ವರದಿ ಮಂಡಿಸಿದರು.

ವಿಶೇಷತೆಗಳು:

* ಆಶ್ರಮದ ನಿವಾಸಿಗಳು ಮತ್ತು ಸಿಬ್ಬಂದಿಗಾಗಿ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

* ಕಾರ್ಯಕ್ರಮದಲ್ಲಿ ಆಶ್ರಮದ ಹಿತೈಷಿಗಳು, ವೈದ್ಯಾಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

* ಆಡಳಿತಾಧಿಕಾರಿ ಶೋಭಾ ಯು.ಪಿ. ಸ್ವಾಗತಿಸಿ, ಆಶಾಸುಧಾಕರ್ ವಂದಿಸಿದರು. ದಿನಾವತಿಯವರು ಕಾರ್ಯಕ್ರಮ ನಿರೂಪಿಸಿದರು.

You may also like

News

ಜಮೀನು ಮತ್ತು ಮನೆಯ ಹಂಚಿಕೆ ತಕರಾರು – ಕಾರ್ಕಳದಲ್ಲಿ ಅಣ್ಣನ ಪ್ರಾಣ ತೆಗೆದ ತಮ್ಮ!

ಆರೋಪಿ ಹೆರಾಲ್ಡ್ ಡಿಸೋಜನ ಬಂಧನ ರಕ್ತ ಸಂಬಂಧಕ್ಕಿಂತ ಆಸ್ತಿಯೇ ದೊಡ್ಡದಾಯಿತೇ? ಹೌದು ಎನ್ನುತ್ತದೆ ಕಾರ್ಕಳದ ಹಿರಿಯಂಗಡಿಯಲ್ಲಿ ನಡೆದ ಈ ಘಟನೆ. ಜಮೀನು ಮತ್ತು ಮನೆಯ ಹಂಚಿಕೆ ವಿಚಾರವಾಗಿ
News

ಕಲ್ಲಾಪು–ತೊಕ್ಕೊಟ್ಟು ಪ್ರದೇಶದಲ್ಲಿ ಮ್ಯಾಂಗ್ರೋವ್ ನೆಡುವ ಅಭಿಯಾನ – ಯುವಕರಿಂದ 5000 ಗಿಡಗಳ ನೆಡುವಿಕೆ

ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಸಮಿತಿಯ ಮುಂದಾಳತ್ವ ಮಂಗಳೂರು ಧರ್ಮಕ್ಷೇತ್ರದ ಭಾರತೀಯ ಕಥೋಲಿಕ ಯುವ ಸಂಚಲನ, ಮಂಗಳೂರು ಅರಣ್ಯ ಇಲಾಖೆ ವಿಭಾಗ ಹಾಗೂ ಐಸಿವೈಎಮ್ ಇಸಿಡಿ, ಸಿಟಿ

You cannot copy content of this page