August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಿಡುವಾಳೆಗೆ ಹೆಮ್ಮೆಯ ತಂದ ‘ಚಿನ್ನದ ಹುಡುಗಿ’ – ಬಿ.ಟೆಕ್‌ನಲ್ಲಿ ರಿಷಲ್ ತಾವ್ರೊಗೆ ಪ್ರಥಮ ರ್‍ಯಾಂಕ್!

ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ರಿಷಲ್ ತಾವ್ರೊ, ಬಿ.ಟೆಕ್ ಪದವಿಯಲ್ಲಿ ಅತ್ಯುನ್ನತ ಸಾಧನೆಗೈದು ಪ್ರಥಮ ರ್‍ಯಾಂಕ್‌ನೊಂದಿಗೆ ಚಿಹ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ರಿಷಲ್, ಇತ್ತೀಚೆಗೆ ನಡೆದ ಕಾಲೇಜಿನ ಘಟಿಕೋತ್ಸವದಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಶೈಕ್ಷಣಿಕ ಜೀವನದ ಉದ್ದಕ್ಕೂ ಶಿಸ್ತು ಮತ್ತು ಪರಿಶ್ರಮವನ್ನು ಮೈಗೂಡಿಸಿಕೊಂಡಿದ್ದ ಇವರು, ಇದೀಗ ಇಡೀ ಜಿಲ್ಲೆ ಮೆಚ್ಚುವಂತಹ ಸಾಧನೆ ಮಾಡುವ ಮೂಲಕ ನಿಡುವಾಳೆ ಗ್ರಾಮದ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಪಸರಿಸಿದ್ದಾರೆ.

ಸಾಧನೆಯ ಹಿಂದೆ ಪೋಷಕರ ಬೆಂಬಲ:

ರಿಷಲ್ ತಾವ್ರೊ ಅವರು ನಿಡುವಾಳೆ ಜೆ.ಎಂ.ಜೆ. ಫ್ಯಾನ್ಸಿ ಸ್ಟೋರ್ಸ್ ಮಾಲೀಕರಾದ ಜೋಸೆಫ್ ಹಾಗೂ ರೋಸ್ಲಿನ್ ತಾವ್ರೊ ದಂಪತಿಯ ಪುತ್ರಿ. ಸಾಧಾರಣ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ, ಶಿಕ್ಷಣದಲ್ಲಿ ಅಪ್ರತಿಮ ಆಸಕ್ತಿ ಹೊಂದಿದ್ದ ರಿಷಲ್ ಅವರ ಈ ಗೆಲುವು ಇಂದು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

ಮಗಳ ಈ ಅಮೋಘ ಸಾಧನೆಯಿಂದಾಗಿ ಪೋಷಕರು ಮತ್ತು ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ರಿಷಲ್ ಅವರ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

“ಪರಿಶ್ರಮಕ್ಕೆ ಸಿಕ್ಕ ಫಲವಿದು. ನಮ್ಮ ಮಗಳ ಸಾಧನೆ ನಮ್ಮೂರಿನ ಹೆಮ್ಮೆ” ಎಂದು ನಿಡುವಾಳೆ ಗ್ರಾಮಸ್ಥರು ಹೇಳಿದ್ದಾರೆ.

You may also like

News

ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’
News

Father Muller College of Nursing Strengthens Academic Collaborations Through Two more Strategic MoUs on Palliative Care and Counselling

Reinforcing its commitment to holistic nursing education, interdisciplinary learning, and community-oriented healthcare, Father Muller School & College of Nursing (FMCON)

You cannot copy content of this page