September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

SSLC ಮರುಮೌಲ್ಯಮಾಪನದಲ್ಲಿ ಮಿಂಚಿದ ಬಂಟ್ವಾಳದ SVS ಟೆಂಪಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಧ್ರುವಿ

620 ಅಂಕದೊಂದಿಗೆ ತಾಲೂಕು ಟಾಪರ್ ಪಟ್ಟಿಗೆ ಸೇರ್ಪಡೆ

ಬಂಟ್ವಾಳ ತಾಲೂಕಿನ SVS ಟೆಂಪಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಧ್ರುವಿ ಮರುಮೌಲ್ಯಮಾಪನದ ಬಳಿಕ ಎರಡು ಅಂಕಗಳ ಹೆಚ್ಚಳ ಪಡೆದು ತಾಲೂಕಿನ ಪ್ರಥಮ ಸ್ಥಾನಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾಳೆ.

2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ಆರಂಭದಲ್ಲಿ 618 ಅಂಕಗಳನ್ನು ಪಡೆದಿದ್ದ ಧ್ರುವಿ, ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ ಪಡೆದಿದ್ದರು. ಆದರೆ ಕನ್ನಡ ವಿಷಯದಲ್ಲಿ ನಿರೀಕ್ಷಿತ ಅಂಕ ಸಿಗದ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರುಮೌಲ್ಯಮಾಪನದ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಕನ್ನಡ ವಿಷಯದಲ್ಲಿ ಹೆಚ್ಚುವರಿ ಎರಡು ಅಂಕಗಳನ್ನು ಪಡೆದು ಧ್ರುವಿ ಒಟ್ಟು 620 ಅಂಕಗಳನ್ನು ಗಳಿಸಿದ್ದಾರೆ. ಈ ಮೂಲಕ ನೂರಕ್ಕೆ ನೂರು ಅಂಕ ಪಡೆಯಬೇಕೆಂಬ ಅವರ ಕನಸು ನನಸಾಗಿದೆ.

620 ಅಂಕಗಳೊಂದಿಗೆ ಧ್ರುವಿ ಇದೀಗ ತಾಲೂಕಿನ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಈಗಾಗಲೇ 620 ಅಂಕ ಗಳಿಸಿದ್ದ ಮಾಣಿ ಪೆರಾಜೆಯ ಬಾಲವಿಕಾಸ ಶಾಲೆ ವಿದ್ಯಾರ್ಥಿನಿ ಪೂರ್ವಿ ಭಾರದ್ವಾಜ್ ಹಾಗೂ ಮೊಂಟೆಪದವು ಶಾಲಾ ವಿದ್ಯಾರ್ಥಿನಿ ಸಿಂಚನಾ ಅವರೊಂದಿಗೆ ಧ್ರುವಿಯೂ ಇದೀಗ ತಾಲೂಕು ಟಾಪರ್‌ಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.

ಮೂವರು ವಿದ್ಯಾರ್ಥಿನಿಯರು 620 ಅಂಕಗಳನ್ನು ಗಳಿಸುವ ಮೂಲಕ ಬಂಟ್ವಾಳ ತಾಲೂಕಿನ ಶೈಕ್ಷಣಿಕ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ಧ್ರುವಿ ಅವರು ಬಂಟ್ವಾಳ ಭಂಡಾರಿಬೆಟ್ಟು ನಿವಾಸಿಗಳಾದ ಸುನಿಲ್ ಹಾಗೂ ಹೇಮಲತಾ ದಂಪತಿಯ ಪುತ್ರಿಯಾಗಿದ್ದಾರೆ.

You may also like

News

ಕ್ರೈಸ್ತ ಸಮುದಾಯದ ಕಲ್ಯಾಣಕ್ಕೆ ₹250 ಕೋಟಿ ಬಜೆಟ್ ಅನುದಾನ ಸಂಪೂರ್ಣ ಬಿಡುಗಡೆಗೆ ಆಗ್ರಹ

ಮುಖ್ಯಮಂತ್ರಿ ಅವರಿಗೆ MLC ಐವನ್ ಡಿಸೋಜ ಮುಖಾಂತರ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕ್ರೈಸ್ತ ಸಮುದಾಯದ ಕಲ್ಯಾಣ ಮತ್ತು
News

ರಾಜೇಶ್ ನಾಯಕ್ ಕರೋಪಾಡಿ ಗಡಿಪಾರು ಆದೇಶ ಖಂಡನೀಯ – ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸುವ ಪ್ರಯತ್ನ ಎಂದ ಬಂಟ್ವಾಳ ಬಿಜೆಪಿ

ಹಿಂದೂ ಸಂಘಟನೆಯ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ರಾಜೇಶ್ ನಾಯಕ್ ಕರೋಪಾಡಿ ಅವರ ವಿರುದ್ಧ ಪೊಲೀಸ್ ಇಲಾಖೆ ಕೈಗೊಂಡಿರುವ ಗಡಿಪಾರು ಆದೇಶವನ್ನು ಬಂಟ್ವಾಳ ಬಿಜೆಪಿ ಮಂಡಲ ತೀವ್ರವಾಗಿ

You cannot copy content of this page