July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಾಹನ ಸವಾರರಿಗೆ ಬಂಪರ್ ಆಫರ್ – ಬಾಕಿ ಟ್ರಾಫಿಕ್ ದಂಡ ಪಾವತಿಗೆ 50% ರಿಯಾಯಿತಿ ಘೋಷಣೆ!

ನಿಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ (E-Challan) ಬಾಕಿ ಇದೆಯೇ? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರದ ವಿಶೇಷ ವಿನಾಯಿತಿಯಡಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಬಾಕಿ ಇರುವ ಟ್ರಾಫಿಕ್ ದಂಡದ ಮೊತ್ತದಲ್ಲಿ ಭರ್ಜರಿ 50% ರಿಯಾಯಿತಿಯನ್ನು ಪ್ರಕಟಿಸಿದೆ. ಲೋಕ ಅದಾಲತ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ರಿಯಾಯಿತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸವಾರರು ತಮ್ಮ ಬಾಕಿ ಪ್ರಕರಣಗಳನ್ನು ಅರ್ಧ ಬೆಲೆಗೆ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

ರಿಯಾಯಿತಿಯ ಅವಧಿ ಮತ್ತು ನಿಯಮಗಳು:

* ಅವಧಿ: ಈ ವಿಶೇಷ ರಿಯಾಯಿತಿ ಸೌಲಭ್ಯವು 21 ಜೂನ್ 2026 ರಿಂದ 10 ಜುಲೈ 2026 ರವರೆಗೆ ಮಾತ್ರ ಲಭ್ಯವಿರುತ್ತದೆ.

* ಯಾರಿಗೆ ಅನ್ವಯ?: ಮೇ 2026 ರ ಮೊದಲು ನೋಂದಾಯಿಸಲಾದ ಎಲ್ಲಾ ಬಾಕಿ ಸಂಚಾರ ಇ-ಚಲನ್ ಪ್ರಕರಣಗಳಿಗೆ ಮಾತ್ರ ಈ 50% ರಿಯಾಯಿತಿ ಅನ್ವಯಿಸುತ್ತದೆ.

ಸಾರ್ವಜನಿಕರಲ್ಲಿ ಮಂಗಳೂರು ಪೊಲೀಸರ ಮನವಿ:

“ದಂಡ ರಹಿತವಾಗಿ, ಸುರಕ್ಷಿತ ಸಂಚಾರಕ್ಕೆ ನೀವು ಮುಂದಾಗಿ. ಜವಾಬ್ದಾರಿಯುತ ನಾಗರಿಕರಾಗಿ ನಿಯಮ ಪಾಲಿಸಿ, ದಂಡ ಪಾವತಿಸಿ ಕಾನೂನಿಗೆ ಗೌರವ ನೀಡಿ.”

ವಾಹನ ಸವಾರರು ತಡಮಾಡದೇ ಈ ಸೀಮಿತ ಅವಧಿಯ ಅವಕಾಶವನ್ನು ಬಳಸಿಕೊಂಡು, ತಮ್ಮ ವಾಹನಗಳ ಮೇಲಿರುವ ಬಾಕಿ ಇ-ಚಲನ್ ದಂಡವನ್ನು ಇಂದೇ ಪಾವತಿಸಿ ನಿಶ್ಚಿಂತರಾಗಲು ಕೋರಲಾಗಿದೆ.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page