October 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು ಯೂಸುಫ್ ಹಾಜಿ ಮನೆಗೆ ಹೋಗುವ ರಸ್ತೆಗೆ ‘ಬಾಳ್ತಿಲ’ ಸೂಚನಾ ಫಲಕ!

NHAI ಎಡವಟ್ಟು : ತಪ್ಪು ಸ್ಥಳದಲ್ಲಿ ಅಳವಡಿಸಿದ ದಾರಿ ಸೂಚಕ ಫಲಕದಿಂದ ಸಾರ್ವಜನಿಕರಲ್ಲಿ ಗೊಂದಲ

ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ಅಂತಿಮ ಹಂತದಲ್ಲಿರುವ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಳವಡಿಸಿರುವ ದಾರಿ ಸೂಚಕ ಫಲಕವೊಂದು ಇದೀಗ ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ. ಮಾಣಿ ಸಮೀಪದ ಸೂರಿಕುಮೇರು ಹೈವೇ ಚಿಕನ್ ಸ್ಟಾಲ್ ಬಳಿ ಅಳವಡಿಸಲಾಗಿರುವ ಸೂಚನಾ ಫಲಕದಲ್ಲಿ ‘ಬಾಳ್ತಿಲ’ ಎಂದು ನಮೂದಿಸಲಾಗಿದೆ. ಆದರೆ ಸ್ಥಳೀಯರ ಪ್ರಕಾರ, ಫಲಕ ತೋರಿಸುವ ರಸ್ತೆಯು ಬಾಳ್ತಿಲ ಗ್ರಾಮಕ್ಕೆ ತೆರಳುವ ಮುಖ್ಯ ಮಾರ್ಗವಲ್ಲ. ಅದು ಸ್ಥಳೀಯ ನಿವಾಸಿ ಯೂಸುಫ್ ಹಾಜಿ ಅವರ ಮನೆಗೆ ತೆರಳುವ ಖಾಸಗಿ ರಸ್ತೆಯಾಗಿದೆ.

ಇದರಿಂದ ಹೊರ ಊರುಗಳಿಂದ ಬರುವ ವಾಹನ ಸವಾರರು ಹಾಗೂ ಸಾರ್ವಜನಿಕರು ಬೋರ್ಡ್ ನಂಬಿ ಆ ರಸ್ತೆಗೆ ಪ್ರವೇಶಿಸಿ ಗೊಂದಲಕ್ಕೀಡಾಗುತ್ತಿದ್ದಾರೆ. ಬಾಳ್ತಿಲ ಗ್ರಾಮಕ್ಕೆ ತೆರಳುವ ಸರಿಯಾದ ಮಾರ್ಗವನ್ನು ಸೂಚಿಸುವ ಬದಲು, ಖಾಸಗಿ ರಸ್ತೆಯ ಬಳಿ ‘ಬಾಳ್ತಿಲ’ ಎಂಬ ಫಲಕ ಅಳವಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ಬಾಳ್ತಿಲ ಕಡೆಗೆ ಸಾಗುವ ರಸ್ತೆಯನ್ನು ಗುರುತಿಸುವ ಉದ್ದೇಶವಿದ್ದರೆ, ಫಲಕವನ್ನು ಅದರ ನೈಜ ಸ್ಥಳದಲ್ಲೇ ಅಳವಡಿಸಬೇಕಾಗಿತ್ತು. ತಪ್ಪು ಸ್ಥಳದಲ್ಲಿ ಅಳವಡಿಸಿರುವ ಪರಿಣಾಮ ದಾರಿ ತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಕ್ಷಣವೇ ಪರಿಶೀಲನೆ ನಡೆಸಿ, ತಪ್ಪು ಸ್ಥಳದಲ್ಲಿ ಅಳವಡಿಸಿರುವ ಸೂಚನಾ ಫಲಕವನ್ನು ತೆರವುಗೊಳಿಸಿ, ಸೂಕ್ತ ಸ್ಥಳದಲ್ಲಿ ಮರುಅಳವಡಿಸಬೇಕು ಎಂದು ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿದ್ದಾರೆ.

You may also like

News

ಆಲ್ಬರ್ಟ್ ರೇಗೊ ಸಾವು ನಿಗೂಢ – ಎರಡು ತಿಂಗಳ ಬಳಿಕ ಶವ ಹೊರತೆಗೆದು FSL ಪರೀಕ್ಷೆ!

ಮಂಗಳೂರಿನಲ್ಲಿ ಅಪರೂಪದ ಪ್ರಕರಣ – ಮಗಳ ವಿರುದ್ಧ ದೂರು, ದೆರೆಬೈಲ್ ಚರ್ಚ್ ಆವರಣದ ದಫನಭೂಮಿಯಲ್ಲಿ ಪೊಲೀಸ್ ತನಿಖೆ ಮಂಗಳೂರು : ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು,
News

ನೈನಾಡಿನಲ್ಲಿ ಪಾದುವಾ ಕಾಲೇಜಿನ 7 ದಿನಗಳ NSS ಶಿಬಿರಕ್ಕೆ ಚಾಲನೆ

“ಸೇವೆಯ ಮೂಲಕ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಲಿಯುತ್ತಾರೆ” –  ಫಾದರ್ ಅರುಣ್ ವಿಲ್ಸನ್ ಲೋಬೊ ಪಾದುವಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಏಳು

You cannot copy content of this page