ಧನಂಜಯ ವರ್ಮ ಧ್ವನಿಯಲ್ಲಿ ಗುರು ರಾಯರ ಭಕ್ತಿಯ ರಸದಾರೆ ‘ಗುರು ರಾಯರುಲ್ಲೆರ್’ ನೂತನ ಭಕ್ತಿಗೀತೆ ಬಿಡುಗಡೆ
ಮಂಗಳೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿ, ಶರಣಾಗತಿ ಹಾಗೂ ಅಚಲ ನಂಬಿಕೆಯನ್ನು ಸಾರುವ ‘ಗುರು ರಾಯರುಲ್ಲೆರ್’ ಎಂಬ ನೂತನ ಭಕ್ತಿಗೀತೆ ಧನಂಜಯ ವರ್ಮ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಯನ್ನು ಕೋರುವ ಭಕ್ತನ ಮನದಾಳದ ಭಾವನೆಗಳನ್ನು ಈ ಗೀತೆಯಲ್ಲಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಡಲಾಗಿದೆ. ತನ್ನ ತಪ್ಪುಗಳಿಗೆ ಕ್ಷಮೆ ಕೋರುವುದರೊಂದಿಗೆ ಗುರು ರಾಯರ ಮೇಲಿನ ಅಚಲ ವಿಶ್ವಾಸ, ಭಕ್ತಿ ಹಾಗೂ ಸಂಪೂರ್ಣ ಶರಣಾಗತಿಯ ಭಾವವನ್ನು ಗೀತೆಯ ಮೂಲಕ ಮನಮುಟ್ಟುವ ರೀತಿಯಲ್ಲಿ ಅಭಿವ್ಯಕ್ತಿಸಲಾಗಿದೆ.

‘ಮಲ್ತಿ ಪಾಪಗೇ ಮಾಫು ಕೊರ್ಲಯ್ಯಾ…’, ‘ನಿನನೇ ನಂಬುದೇ…’ ಮೊದಲಾದ ಭಾವಪೂರ್ಣ ಸಾಲುಗಳ ಮೂಲಕ ಗುರು ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತನ ಅಚಲ ನಂಬಿಕೆ ಹಾಗೂ ಗುರುಕೃಪೆಯ ನಿರೀಕ್ಷೆಯನ್ನು ಹೃದಯಸ್ಪರ್ಶಿಯಾಗಿ ಮೂಡಿಸಲಾಗಿದೆ.
ಮಂತ್ರಾಲಯದ ಗುರು ರಾಯರ ಸನ್ನಿಧಿಯೇ ತನ್ನ ಆಶ್ರಯ ಎಂಬ ಭಾವನೆ ಗೀತೆಯುದ್ದಕ್ಕೂ ವ್ಯಕ್ತವಾಗುತ್ತದೆ. ಭಕ್ತಿ, ಧರ್ಮ, ನ್ಯಾಯ, ನಂಬಿಕೆ ಹಾಗೂ ಗುರುಕೃಪೆಯ ಮಹತ್ವವನ್ನು ಸಾರುವ ಈ ಗೀತೆಯನ್ನು ಸಂಗೀತದ ಮೂಲಕ ರಾಯರ ಭಕ್ತಿಭಾವವನ್ನು ಜನಮನಕ್ಕೆ ತಲುಪಿಸುವ ಉದ್ದೇಶದಿಂದ ರೂಪಿಸಲಾಗಿದೆ.


ತಂಡದ ಶ್ರಮ:
ಈ ಭಕ್ತಿಗೀತೆಗೆ ಧನಂಜಯ ವರ್ಮ ಧ್ವನಿ ನೀಡಿದ್ದು, ಪ್ರಕಾಶ್ ಬಂಗೇರ ಬಾಗಂಬಿಲ ಗೀತರಚನೆ ಮಾಡಿದ್ದಾರೆ. ಸಂದೇಶ್ ಬಾಬಣ್ಣ ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್ ನಿರ್ವಹಿಸಿದ್ದು, ಪ್ರಣವ್ ಸಂಪಾದನೆಯ ಜವಾಬ್ದಾರಿ ವಹಿಸಿದ್ದಾರೆ.
ಕಿರಣ್ ಹಾಗೂ ಪ್ರಕಾಶ್ ಛಾಯಾಗ್ರಹಣ ನಿರ್ದೇಶಕರಾಗಿ (ಡಿಒಪಿ) ಕಾರ್ಯನಿರ್ವಹಿಸಿದ್ದಾರೆ. ಸಂತೋಷ್ ಶೆಟ್ಟಿ ಕುಂಬ್ಳೆ ಹಾಗೂ ಸುಚಿತ್ರಾ ಡಿ. ವರ್ಮ ನಿರ್ಮಾಪಕರಾಗಿ, ರಿಚರ್ಡ್ ಪಿಂಟೋ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಯೂಟ್ಯೂಬ್ನಲ್ಲಿ ವೀಕ್ಷಣೆಗೆ ಲಭ್ಯ:
‘ಗುರು ರಾಯರುಲ್ಲೆರ್’ ಭಕ್ತಿಗೀತೆಯನ್ನು ಧನಂಜಯ ವರ್ಮ ಅವರ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಿ ಹಾಗೂ ಆಲಿಸಬಹುದಾಗಿದೆ. ರಾಯರ ಭಕ್ತರು ಈ ಭಕ್ತಿಗೀತೆಯನ್ನು ವೀಕ್ಷಿಸಿ, ಆಲಿಸಿ ಹಾಗೂ ಹಂಚಿಕೊಳ್ಳುವ ಮೂಲಕ ಈ ಭಕ್ತಿಯ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಲಾಗಿದೆ.



