October 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೊಲೆ ಆರೋಪದ ಸುಳ್ಳು ಪ್ರಕರಣ ದಾಖಲಿಸಿ ಹಣ ಮತ್ತು ಆಸ್ತಿ ಸುಲಿಗೆಗೆ ಸಂಚು – ನವೀನ್ ತೊರಾಸ್ ಬಂಧನ

ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ ಮತ್ತು ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಿ, ಸಾರ್ವಜನಿಕವಾಗಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ 42 ವರ್ಷ ಪ್ರಾಯದ ನವೀನ್ ತೊರಾಸ್ ಎಂಬಾತನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.

ಮಾಯ ಅನ್ನಾಮೇರಿ ರೇಗೋ ಅವರು ನೀಡಿದ ದೂರಿನಂತೆ, ತಮ್ಮ ಮೇಲೆ ಕೊಲೆಯಂತಹ ಗಂಭೀರ ಸುಳ್ಳು ಆರೋಪ ಹೊರಿಸಿ ಹಣ ಮತ್ತು ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ, 2026ರ ಆಗಸ್ಟ್ 10ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2026ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 61(a)(1) ಮತ್ತು 308(7) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಕ್ಟೋಬರ್ 23ರಂದು ಮಂಗಳೂರಿನ, ಗಾನಮಜಲ್, ಪದವು, ಶಕ್ತಿನಗರ ನಿವಾಸಿ ನವೀನ್ ತೊರಾಸ್ ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಅಕ್ಟೋಬರ್ 24ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಇದರಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಕುರಿತು ಕೂಲಂಕುಶ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

You may also like

News

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರ ಪತ್ನಿ ಉಷಾಕುಮಾರಿ ನಿಧನ

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರ ಪತ್ನಿ 56 ವರ್ಷ ಪ್ರಾಯದ ಉಷಾಕುಮಾರಿ ಅವರು ಅಸೌಖ್ಯದಿಂದ ಇಂದು ಅಕ್ಟೋಬರ್ 24ರಂದು ಶನಿವಾರ ನಗರದ
News

Bendoor Church Inaugurates Long-Awaited Adoration Chapel – Blessed Sacrament Installed

Marking a significant milestone in the spiritual journey of the Saint Sebastian Church Bendoor community, the long-awaited Adoration Chapel was

You cannot copy content of this page