September 18, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಜೆಪ್ಪುವಿನ ಸಂತ ಆಂಥೋನಿ ಆಶ್ರಮದ 350 ಆಶ್ರಿತರಿಗೆ ಹಣ್ಣುಹಂಪಲು ವಿತರಣೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ‘ಸೇವಾಸಂಕಲ್ಪ ಅಭಿಯಾನ’ದ ಭಾಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಜೆಪ್ಪುವಿನ ಸಂತ ಆಂಥೋನಿ ಅನಾಥಾಶ್ರಮದ 350 ಆಶ್ರಿತರಿಗೆ ಹಣ್ಣುಹಂಪಲು ವಿತರಿಸಲಾಯಿತು.

ಮಂಡಲದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದೀಪಕ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮಂಡಲ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು ಉಪಸ್ಥಿತರಿದ್ದರು.

ಅನಾಥಾಶ್ರಮದ ನಿರ್ದೇಶಕ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಅರ್ಷದ್ ಪೋಪಿ, ಶಾಕೀರ್ ಕಣ್ಣೂರು, ನೆಲ್ಸನ್ ಕ್ಯಾಸ್ಟಲಿನೋ, ಸುಶೀಲ್ ಪಾಲನ್ನ, ಎ.ಆರ್. ಬೋಳಾರ್, ಗಿಲ್‌ಕ್ರಿಸ್ಟ್ ಡಿಸೋಜ, ರೋಹನ್ ಡಿಸೋಜ, ಜೋಶ್ವನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೇವಾ ಮನೋಭಾವದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಆಶ್ರಿತರೊಂದಿಗೆ ಸಮಯ ಕಳೆಯುವ ಮೂಲಕ ಜನ್ಮದಿನಾಚರಣೆಯನ್ನು ಸಮಾಜಮುಖಿ ಕಾರ್ಯದೊಂದಿಗೆ ಆಚರಿಸಲಾಯಿತು.

You may also like

News

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿಗೆ A+ ಮಾನ್ಯತೆ

ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಹಾಗೂ ಗುಣಮಟ್ಟದ ಹೋಮಿಯೋಪಥಿಕ್ ಶಿಕ್ಷಣಕ್ಕೆ ಪ್ರತಿಷ್ಠಿತ ಗೌರವ ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು 2025–26ನೇ ಶೈಕ್ಷಣಿಕ ಸಾಲಿನಲ್ಲಿ ಹೋಮಿಯೋಪಥಿ ರಾಷ್ಟ್ರೀಯ
News

ದೇರಳಕಟ್ಟೆಯ ಫಾದರ್ ಮುಲ್ಲರ್ ಫಾರ್ಮಸಿ ಕಾಲೇಜಿನಲ್ಲಿ ಬಿ.ಫಾರ್ಮ್ ಮೂರನೇ ಬ್ಯಾಚ್‌ಗೆ ಚಾಲನೆ

ದೇರಳಕಟ್ಟೆಯ ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಬಿ.ಫಾರ್ಮ್ ಮೂರನೇ ಬ್ಯಾಚ್‌ನ ಕೋರ್ಸ್ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 16ರಂದು ಬುಧವಾರ ಕಾಲೇಜಿನ

You cannot copy content of this page