October 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳದಲ್ಲಿ ವೈವಾಹಿಕ ಕಲಹ ದುರಂತದಲ್ಲಿ ಅಂತ್ಯ – ಪತ್ನಿ ಕೊಲೆ ಆರೋಪದಲ್ಲಿ ಪತಿ ಪೊಲೀಸ್ ವಶಕ್ಕೆ 

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪತಿ 36 ವರ್ಷ ಪ್ರಾಯದ ಸಂಜೀವಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ 26 ವರ್ಷ ಪ್ರಾಯದ ಅರುಣ್ ಮಹಾದೇವ್ ದೇಸಂಗಿ ನೀಡಿದ ದೂರಿನ ಪ್ರಕಾರ, ಅವರ ಸಹೋದರಿ 34 ವರ್ಷ ಪ್ರಾಯದ ಸುನೀತಾ ಮಹಾದೇವ್ ದೇಸಂಗಿ ಅವರನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್‌ಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗಳು ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವಾಸವಾಗಿದ್ದರು. ಇವರ ನಡುವೆ ವೈವಾಹಿಕ ಕಲಹ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಮಧ್ಯಪ್ರವೇಶಿಸಿ ರಾಜಿ ಸಂಧಾನ ನಡೆಸಿದ್ದರು ಎನ್ನಲಾಗಿದೆ.

ಹೆರಿಗೆಯ ಬಳಿಕ ತವರು ಮನೆಯಲ್ಲಿದ್ದ ಸುನೀತಾ ಅವರನ್ನು ಅಕ್ಟೋಬರ್ 4ರಂದು ಸಂಜೀವಕುಮಾರ್ ತನ್ನ ಮನೆಗೆ ಕರೆತಂದಿದ್ದನು. ಈ ನಡುವೆ, ಅಕ್ಟೋಬರ್ 22ರಂದು ಸುನೀತಾ ಅವರು ಸಹೋದರ ಅರುಣ್‌ಗೆ ದೂರವಾಣಿ ಕರೆ ಮಾಡಿ, ಪತಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಮರುದಿನ ಅಂದರೆ ಅಕ್ಟೋಬರ್ 23ರಂದು ಮುಂಜಾನೆ ಸಂಜೀವಕುಮಾರ್ ಅರುಣ್‌ಗೆ ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದನು. ಕೂಡಲೇ ಸ್ಥಳಕ್ಕೆ ಬಂದ ಅರುಣ್ ಅವರು ಸುನೀತಾ ಮೃತಪಟ್ಟಿರುವುದನ್ನು ಕಂಡಿದ್ದಾರೆ. ಮೃತದೇಹವನ್ನು ಪರಿಶೀಲಿಸಿದಾಗ ಹಲ್ಲೆಯಿಂದಾದ ಗಾಯಗಳು ಹಾಗೂ ರಕ್ತದ ಗುರುತುಗಳು ಕಂಡುಬಂದಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 22ರ ರಾತ್ರಿ ಮತ್ತು ಅಕ್ಟೋಬರ್ 23ರ ಮುಂಜಾನೆಯ ನಡುವಿನ ಅವಧಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜೀವಕುಮಾರ್ ಸುನೀತಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಅರುಣ್ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 103ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಆರೋಪಿ ಸಂಜೀವಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

You may also like

News

ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್ ಬಸ್‌ಗೆ ಪ್ರವಾಸಿ ಮಿನಿ ಬಸ್ ಡಿಕ್ಕಿ – ಚಾಲಕ ಸೇರಿ 13 ವಿದ್ಯಾರ್ಥಿಗಳಿಗೆ ಗಾಯ

ಗಾಯಾಳುಗಳಿಗೆ ಮುಕ್ಕದ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಲ್ಕಿಯ ಕೊಲ್ನಾಡು ಬಳಿ ಪ್ರವಾಸಿ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಶಾಲಾ ಬಸ್ ಚರಂಡಿಗೆ
News

1 ವರ್ಷ 1 ತಿಂಗಳ ಪುಟಾಣಿ ಚಾರ್ವಿಕ್‌ ವಿಶ್ವದಾಖಲೆ – 2 ನಿಮಿಷ 40 ಸೆಕೆಂಡುಗಳಲ್ಲಿ 40 ಮೆಟ್ಟಿಲು ಹತ್ತಿ ಅಂತಾರಾಷ್ಟ್ರೀಯ ಮನ್ನಣೆ!

ಮಂಗಳೂರಿನ ದೀಪಕ್ ಶೆಟ್ಟಿ ಹಾಗೂ ವಿನುತಾ ಶೆಟ್ಟಿ ದಂಪತಿಯ ಪುತ್ರನಿಗೆ ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ ಗೌರವ – ‘ಸೂಪರ್ ಟ್ಯಾಲೆಂಟೆಡ್ ಕಿಡ್’ ಪ್ರಶಸ್ತಿಗೆ ಪಾತ್ರ ಅಂಬೆಗಾಲಿಡುವ

You cannot copy content of this page