May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬೆನಕ ಆಸ್ಪತ್ರೆಯ ರಜತ ಸಂಭ್ರಮ – ಆಧುನಿಕ ತಂತ್ರಜ್ಞಾನದ ವಿಸ್ತ್ರತ ನೂತನ ಕಟ್ಟಡದ ಉದ್ಘಾಟನೆ

ಉಜಿರೆ : “ರೋಗಿಗಳ ಸೇವೆಗೆ ಕೇಂದ್ರೀಕೃತವಾಗಿ ಅತ್ಯುತ್ತಮ ದರ್ಜೆಯ ಅರೋಗ್ಯ ಸುಶ್ರೂಷೆಯನ್ನು ಎಲ್ಲರಿಗೂ ಕೈಗೆಟಕುವ ದರದಲ್ಲಿ ಹಾಗೂ ಸಮುದಾಯದ ಆಶಯಗಳಿಗೆ ಅನುಗುಣವಾಗಿ ಒದಗಿಸುವ ಆಸ್ಪತ್ರೆಯಾಗಿ ಬೆಳೆಯಬೇಕು ಎಂಬುವುದು ನಮ್ಮ ಸಂಕಲ್ಪ” ಎಂದು ಬೆನಕ ಆಸ್ಪತ್ರೆಯ ಡಾ. ಗೋಪಾಲಕೃಷ್ಣ ಕೆ. ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬೆನಕ ಆಸ್ಪತ್ರೆಯು ರಜತ ಮಹೋತ್ಸವದ ಸಂಭ್ರಮದಲ್ಲಿದೆ, ವಿಸ್ತ್ರತ ನೂತನ ಕಟ್ಟಡ ಕಾಮಗಾರಿ ಕೂಡ ಮುಗಿದಿದ್ದು ಉದ್ಘಾಟನೆಯು ಜನವರಿ 18ರಂದು ನಡೆಯಲಿದೆ. ಈ ಪ್ರಯುಕ್ತ ಪತ್ರಿಕಾಗೋಷ್ಠಿ ನಡೆಸಿದ ಡಾ. ಗೋಪಾಲಕೃಷ್ಣ ಕೆ. “ಕೇವಲ 7 ಹಾಸಿಗೆಗಳ 2 ವೈದ್ಯರು ಹಾಗೂ 2 ದಾದಿಯರಿಂದ 2 ಸಾವಿರದಲ್ಲಿ ಆರಂಭವಾದ ಬೆನಕ ಆಸ್ಪತ್ರೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಬಂದಿದೆ. ಸ್ಥಳೀಯ ಅಗತ್ಯಗಳನ್ನು ಮನಗಂಡು ಸಣ್ಣ ಮಟ್ಟದಲ್ಲಿ ಆರಂಭವಾದ ಆಸ್ಪತ್ರೆ ಇದೀಗ 130 ಹಾಸಿಗೆಗಳ ಮಲ್ಟಿ – ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನು ಒಳಗೊಂಡ ಖ್ಯಾತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ.  ಗುಣಮಟ್ಟದ ಸಮಕಾಲೀನ ಆರೋಗ್ಯ ಸೇವೆಯನ್ನು ನೀಡುವ ಹಾಗೂ ಜನರ ಆಯ್ಕೆಯ ಆಸ್ಪತ್ರೆಯಾಗಿ ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಪ್ರತಿ ವರ್ಷವೂ ಯಾವುದಾದರೊಂದು ಹೊಸದಾದ ಸೇವೆಯನ್ನು ಆರಂಭಿಸುತ್ತಾ ಬಂದಿದ್ದೇವೆ” ಎಂದು ಹೇಳಿದರು. ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ. ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಬೆನಕ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ರವರು ಉದ್ಘಾಟಿಸಲಿದ್ದು, ನೂತನ ಕಟ್ಟಡದ ಉದ್ಘಾಟನೆ ಆರೋಗ್ಯ ಸಚಿವ ಮಾನ್ಯ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ. ಇದೇ ರೀತಿ ಬೇರೆ ಬೇರೆ ವಿಭಾಗಗಳನ್ನು ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಡಾ. ಯು.ಟಿ. ಇಫ್ತಿಕರ್ ಅಲಿ ಉದ್ಘಾಟಿಸಲಿದ್ದಾರೆ.

 

ಪತ್ರಿಕಾ ಗೋಷ್ಟಿಯಲ್ಲಿ ಡಾ. ಭಾರತಿ ಜಿ.ಕೆ., ಡಾ. ಆದಿತ್ಯರಾವ್, ಡಾ. ಅಂಕಿತಾ ಜಿ. ಭಟ್ ಹಾಗೂ ಡಾ. ರೋಹಿತ್ ಜಿ. ಭಟ್ ಉಪಸ್ಥಿತರಿದ್ದರು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page