September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು ಬದ್ರಿಯಾ ಜುಮಾ ಮಸೀದಿ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ  

ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ

ಮಾಣಿ :   ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜನವರಿ 31ರಂದು ಶುಕ್ರವಾರ ಮದ್ರಸಾ ಹಾಲ್ ನಲ್ಲಿ ನಡೆಯಿತು. ಖತೀಬ್ ಹಸೈನಾರ್ ಸ‌ಅದಿ ದುಆ ನೆರವೇರಿಸಿದರು.

ಹಾಜಿ ಅಬ್ದುಲ್ ಹಮೀದ್ ಸೂರಿಕುಮೇರುರವರ ಅಧ್ಯಕ್ಷತೆಯಲ್ಲಿ ಮುಹಮ್ಮದ್ ಅಲೀ ಮುಸ್ಲಿಯಾರ್ ಸೂರಿಕುಮೇರು ಸ್ವಾಗತಿಸಿದರು. ಕಾರ್ಯದರ್ಶಿ ಅಮೀರುದ್ದೀನ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಬಳಿಕ ಸಭೆಯ ಅನುಮೋದನೆ ಪಡೆದು ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚಿಸಲಾಯಿತು.

ಅದರಂತೆ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು, ಉಪಾಧ್ಯಕ್ಷರಾಗಿ ಹಂಝ ಸೂರಿಕುಮೇರು, ಪ್ರಧಾನ ಕಾರ್ಯದರ್ಶಿಯಾಗಿ ಅಮೀರುದ್ದೀನ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಸೂರಿಕುಮೇರು, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಸೂರಿಕುಮೇರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಜಿ ಅಬ್ದುಲ್‌ ಹಮೀದ್, ಮುಹಮ್ಮದ್ ಅಲಿ ಮುಸ್ಲಿಯಾರ್, ಅಝೀಂ ಸೂರಿಕುಮೇರು, ಅಬ್ದುಲ್ ರಹ್ಮಾನ್ ಪುತ್ತು, ಮೂಸಾ ಕರೀಂ ಮಾಣಿ, ಅಶ್ರಫ್ ಮಾಣಿ, ಅಬ್ದುಲ್ ಖಾದರ್ ಮಾಣಿ, ಬಶೀರ್ ಮಾಣಿ, ಸಲೀಂ ಮಾಣಿ, ಯಾಸಿರ್ ಯಾಚಿ, ಅಶ್ರಫ್ ಸಖಾಫಿ, ಹಫೀಲ್ ಬರಿಮಾರು ಆಯ್ಕೆಯಾದರು. ಲೆಕ್ಕಪರಿಶೋಧಕರು ಮತ್ತು ಚುನಾವಣಾ ವೀಕ್ಷಕರಾಗಿ ಹಾಜಿ ಮುಹಮ್ಮದ್ ಬಂಡಾಡಿ ಹಾಗೂ ಹಾಜಿ ಎಸ್.ಎ. ಉಮ್ಮರ್ ಸೂರಿಕುಮೇರು ಕಾರ್ಯ ನಿರ್ವಹಿಸಿದರು.

You may also like

News

ಮಂಗಳೂರಿನಲ್ಲಿ ರಾಗಗಳ ರಸದೌತಣ: ಸೆಪ್ಟೆಂಬರ್ 6ರಂದು ‘ರಾಗ ಸುಧಾ’ ಸಂಗೀತ ಸಂಭ್ರಮ

ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಸೇರಿದಂತೆ ರಾಷ್ಟ್ರೀಯ ಖ್ಯಾತಿಯ ಮೂವರು ಕಲಾವಿದರಿಂದ ಅಪರೂಪದ ಸಂಗೀತ ಪ್ರಸ್ತುತಿ; ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಮಧುರ
News

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ ಶಿಕ್ಷಣ ಮಂಡಳಿಯಿಂದ ಅದ್ದೂರಿ 37ನೇ ಶಿಕ್ಷಕರ ದಿನಾಚರಣೆ

“ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿ ಜೀವನಕ್ಕೆ ದಾರಿದೀಪ” – ಬಿಷಪ್ ಡಾ. ಪೀಟರ್ ಪಾವ್ಲ್ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ

You cannot copy content of this page