September 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಇದರ ಅಧ್ಯಕ್ಷರಾಗಿ ಜೀವನ್ ಲೊಯ್ಡ್ ಪಿಂಟೊ ಮತ್ತು ಉಪಾಧ್ಯಕ್ಷರಾಗಿ ವಲೇರಿಯನ್ ಬರೆಟ್ಟೊ ಪುನರಾಯ್ಕೆ

ಮುಂದಿನ ಐದು ವರ್ಷಗಳಿಗೆ ಸತತ 2ನೇ ಬಾರಿಗೆ ಅಧಿಕಾರ ಗಿಟ್ಟಿಸಿಕೊಂಡ  ಅಧ್ಯಕ್ಷ – ಉಪಾಧ್ಯಕ್ಷ

ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ., ಬಿ.ಸಿ. ರೋಡ್ ಇದರ ಮುಂದಿನ ಐದು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ 2ನೇ ಬಾರಿಗೆ ಅಧ್ಯಕ್ಷರಾಗಿ ಜೀವನ್ ಲೊಯ್ಡ್ ಪಿಂಟೊ ಮತ್ತು 2ನೇ ಬಾರಿಗೆ ಉಪಾಧ್ಯಕ್ಷರಾಗಿ ವಲೇರಿಯನ್ ಬರೆಟ್ಟೊ ಅವಿರೋಧವಾಗಿ ಸರ್ವಾನುಮತದಿಂದ ಪುನರಾಯ್ಕೆಗೊಂಡಿದ್ದಾರೆ. ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಡಾ. ಜ್ಯೋತಿ ಡಿ., ಸಹಕಾರ ಅಭಿವೃದ್ದಿ ಅಧಿಕಾರಿ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ.

ಜನವರಿ 18ರಂದು ಶನಿವಾರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 14 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು ನಿರ್ದೇಶಕರಾಗಿ ಚುನಾಯಿತರಾಗಿದ್ದು, 3 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಒಟ್ಟು 14 ಸ್ಥಾನಗಳನ್ನು ಹೊಂದಿರುವ ಸಹಕಾರಿ ಸಂಘದಲ್ಲಿ ಸಾಮಾನ್ಯ ಸ್ಥಾನದಿಂದ ಅಧ್ಯಕ್ಷರಾದ ಜೀವನ್ ಲೋಯ್ಡ್ ಪಿಂಟೊ, ಉಪಾಧ್ಯಕ್ಷರಾದ ವಲೇರಿಯನ್ ಬರೆಟ್ಟೊ, ನಿದೇಶಕರಾದ ಅನಿಲ್ ಹೆರಾಲ್ಡ್ ಫ್ರಾಂಕ್, ಲಾದ್ರು ಮಿನೇಜಸ್, ರೊನಾಲ್ದ್ ವಿಜಯ್ ಫೆರ್ನಾಂಡಿಸ್, ಗ್ಲೋರಿಯಾ ಪ್ರೀಮಾ ಕುಟಿನ್ಹೊ, ವಿನ್ಸೆಂಟ್ ಕ್ಲೋಡಿ ಕಾರ್ಲೊ, ಲೊರೆನ್ಸ್ ಕ್ಲಿಫೋರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೊನ್ಸ, ಹಿಲಾರಿ ಕ್ರಾಸ್ತಾ, ಹ್ಯೂಬರ್ಟ್ ಲೋಬೊ ಮಹಿಳಾ ಮೀಸಲಾತಿ ಸ್ಥಾನದಿಂದ ಅನಿತಾ ನೊರೊನ್ಹಾ, ಬೆನೆಡಿಕ್ಟಾ ಸಲ್ಡಾನ್ಹಾ ಹಾಗೂ ಹಿಂದುಳಿದ ವರ್ಗ ಪ್ರವರ್ಗ ‘ಬಿ’ ಸ್ಥಾನದಿಂದ ವಿಶಾಲ್ ಡಿಸೋಜ ನೂತನವಾಗಿ ಆಯ್ಕೆಗೊಂಡಿರುತ್ತಾರೆ.

You may also like

News

32 ವರ್ಷಗಳ ಜನಸೇವೆ ಸಾರ್ಥಕ – ಗ್ರೆಟ್ಟಾ ಮಸ್ಕರೇನಸ್ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಕಂದಾಯ ಇಲಾಖೆಯಲ್ಲಿ ಸುದೀರ್ಘ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗ್ರಾಮ ಆಡಳಿತಾಧಿಕಾರಿ ಗ್ರೆಟ್ಟಾ ಐರಿನ್ ಮಸ್ಕರೇನಸ್ ಅವರಿಗೆ ತಾಲೂಕು ಆಡಳಿತ ಸೌಧದಲ್ಲಿ ಆತ್ಮೀಯ
News

ಸೆಪ್ಟೆಂಬರ್ 8ರ ಮೊಂತಿ ಫೆಸ್ಟ್‌ಗೆ ಕರಾವಳಿ-ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲು ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಆಗ್ರಹ

MLC ಐವನ್ ಡಿಸೋಜ ಅವರಿಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಹುದ್ದೆ ನೀಡುವಂತೆಯೂ ಮೌರಿಸ್ ಮಸ್ಕರೇನ್ಹಸ್ ಒತ್ತಾಯ ಪುತ್ತೂರು: ಕರಾವಳಿ ಹಾಗೂ ಮಲೆನಾಡು ಭಾಗದ ಕ್ರೈಸ್ತ ಸಮುದಾಯದ

You cannot copy content of this page