September 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಳದಂಗಡಿ ಸತ್ಯದೇವತೆ ದೈವದ ಕಾರ್ಣಿಕ – ಕಳೆದುಹೋದ ಚಿನ್ನದ ಬ್ರೆಸ್ ಲೆಟ್ ಪತ್ತೆ

ಬೆಳ್ತಂಗಡಿ : ಅಳದಂಗಡಿಯ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಫೆಬ್ರವರಿ 7ರಂದು ಮುಂಡೂರು ನಿವಾಸಿ ರಮಣಿ ಯವರ ಚಿನ್ನದ ಬ್ರೆಸ್ ಲೆಟ್ ಕಳೆದು ಹೋಗಿದ್ದು ಫೆ.9 ರಂದು  ಅಳದಂಗಡಿ ಸತ್ಯದೇವತೆ ದೈವದ ಕಾರ್ಣಿಕದಿಂದ ಮೇಲಂತಬೆಟ್ಟು ಬಳಿ ಪತ್ತೆಯಾಗಿದೆ.

ರಮಣಿಯವರು ಅಳದಂಗಡಿ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ತನ್ನ ಚಿನ್ನವನ್ನು ಕಳೆದುಕೊಂಡಿದ್ದರು. ಅದು ಎಷ್ಟು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ವೇಳೆ ಚಿನ್ನದ ಬ್ರೆಸ್ ಲೆಟ್ ಸಿಕ್ಕಿದರೆ ಅಳದಂಗಡಿ ಸತ್ಯದೇವತೆ ದೈವಸ್ಥಾನಕ್ಕೆ ಹೋಗಿ ಅಗೇಲು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದರು. ಹರಕೆ ಹೊತ್ತ ಫಲದಿಂದ ಫೆಬ್ರವರಿ 9ರಂದು ಚಿನ್ನದ ಬ್ರೆಸ್ ಲೆಟ್ ಪತ್ತೆಯಾಗಿವೆ ಎಂದು ರಮಣಿಯವರು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರವರಿಗೆ ತಿಳಿಸಿದ್ದಾರೆ.

You may also like

News

ಪುತ್ತೂರು ಪ್ರೆಸ್ ಕ್ಲಬ್ ಎದುರು ಸಾರ್ವಜನಿಕ ಶಾಂತಿಗೆ ಭಂಗ – ಮೂವರ ವಿರುದ್ಧ ಎಫ್‌ಐಆರ್ ದಾಖಲು

ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿ ಗಲಾಟೆ ನಡೆಸಿ, ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಘಟನೆಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳು ಸೇರಿದಂತೆ ಇತರರ ವಿರುದ್ಧ ಪುತ್ತೂರು ನಗರ
News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು

You cannot copy content of this page