September 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್.ಟಿ.ಪಿ. ಕೊಳಚೆ ನೀರು ಶುದ್ದೀಕರಣ ಘಟಕ ಎಂ.ಆರ್.ಪಿ.ಎಲ್.‌ಗೆ ಹಸ್ತಾಂತರಿಸುವ ಬಗ್ಗೆ ಎಂ.ಆರ್.ಪಿ.ಎಲ್.‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಜೊತೆ ಮಾತುಕತೆ

ಸರಕಾರದ ಮಟ್ಟದಲ್ಲಿ ಕ್ರಮವಹಿಸಲು ಮನವಿ – MLC ಐವನ್‌ ಡಿಸೋಜಾ

ಕಾವೂರು ಮಾದರಿಯಲ್ಲಿ ಪಚ್ಚನಾಡಿ ಮತ್ತು ಸುರತ್ಕಲ್‌ ಮದ್ಯ ಮತ್ತು ಬಜಾಲ್‌ ನಲ್ಲಿ ಎಸ್.ಟಿ.ಪಿ.ಗಳನ್ನು ಎಂ.ಆರ್.ಪಿ.ಎಲ್‌.ರವರ ಮುಖಾಂತರ ಕೊಳಚೆ ನೀರನ್ನು ಶುದೀಕರಿಸಿ ಕೈಗಾರಿಕಾ ಉದ್ದೇಶಕ್ಕಾಗಿ ಬಳಕೆ ಮಾಡುವ ಬಗ್ಗೆ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿದಿಗಳ ಮೂಲಕ ಚರ್ಚಿಸಿ MLC ಐವನ್‌ ಡಿಸೋಜಾ ಇವರ ಕಛೇರಿಯಲ್ಲಿ ನಗರ ಪಾಲಿಕೆ ಕಾರ್ಪೊರೇಟರ್‌ ಗಳ, ಎಂಆರ್.ಪಿ.ಎಲ್‌.  ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ಯಾಮ್‌ ಪ್ರಸಾದ್‌, ಎ.ಏಂ.ಡಿ. ಕೃಷ್ಣ ಪ್ರಸಾದ್‌ ಹೆಗ್ಡೆ, ಅಧಿಕಾರಿ ಸೂರ್ಯನಾರಾಯಣ ಇವರುಗಳ ಜೊತೆ ದೀರ್ಘವಾದ ಮಾತುಕತೆ ನಡೆಸಿ ಕೊಳಚೆ ನೀರು ಸಂಗ್ರಹಿಸಿ, ಸಾರ್ವಜನಿಕ ತೋಡುಗಳಲ್ಲಿ ಹರಿದು ಹೋಗುವ ನೀರನ್ನು ಶುದ್ದೀಕರಿಸಿ ಮತ್ತು ಬಳಕೆ ಮಾಡಲು ಕ್ರಮ ವಹಿಸುವ ಬಗ್ಗೆ ವಿಚಾರವನ್ನು ನಡೆಸಲಾಯಿತು.

ಪ್ರಸ್ತುತ ಜೆಪ್ಪಿನಮೊಗರು ಎಸ್.ಟಿ.ಪಿ., ಪಚ್ಚನಾಡಿ ಎಸ್.ಟಿ.ಪಿ. 8.75 ಸಾಮರ್ಥ್ಯ  ಸುರತ್ಕಲ್‌ ಮದ್ಯ 16.5 ಸಾಮರ್ಥ್ಯ ಈ ಎಲ್ಲಾ ಎಸ್.ಟಿ.ಪಿ.ಗಳನ್ನು ಮೇಲ್ದರ್ಜೆಗೇರಿಸಲು ನೀರು ಶುದ್ದಿಖರಿಸಿಸಲು ಸುಮಾರು ಇನ್ನೂರು ಕೋಟಿ ರೂಪಾಯಿಗಳ ವೆಚ್ಚ ತಗಲುವುದು ಎಂದು ಇದನ್ನು ಯಾವ ರೀತಿ ಹೊಂದಿಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು ಕಲುಷಿತ ನೀರು ಸಂಸ್ಕರಿಸಿ ಕೈಗಾರಿಕಾ ಗುಣಮಟ್ಟದಲ್ಲಿ ಪರಿಸರ ಮತ್ತು ತೋಡುಗಳಲ್ಲಿ ಹರಿದು ಕಲುಷಿತ ನೀರು ಶುದ್ದಿಕರಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಈ ವಿಚಾರ ವಿನಿಮಯದಲ್ಲಿ ಹಿರಿಯ ಕಾರ್ಪೊರೇಟರ್‌ ಶಶಿಧರ್‌ ಹೆಗ್ಡೆ, ಲ್ಯಾನ್ಸ್‌ ಲೋಟ್‌ ಪಿಂಟೋ, ಶಂಶುದೀನ್‌ ಕುದ್ರೋಳಿ, ಲತೀಫ್‌ ಕಂದಕ್‌, ಅಶ್ರಫ್‌ ಬಜಾಲ್‌, ಸತೀಶ್‌ ಪೆಂಗಲ್‌, ಹೇಮಂತ್‌ ಗರೋಡಿ, ತನ್ವೀರ್‌ ಷಾ, ಮುಂತಾದವರು ಉಪಸ್ಥಿತರಿದ್ದರು.

You may also like

News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು
News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್

You cannot copy content of this page