July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮ, ಜಾತಿಗಳಿಗಿಂತ ಮೊದಲು ಜೀವ ಉಳಿಸುವ ಬೆಲೆಯನ್ನು ತಿಳಿಯಬೇಕು – ರೇಮಂಡ್ ಡಿಕೂನಾ ತಾಕೊಡೆ

ನಮ್ಮ ಮನೆಯನ್ನು ಸ್ವಚ್ಛ ಇಡಲು ಸುತ್ತಲೂ ಆವರಣದ ಗೋಡೆ ಕಟ್ಟುವ ನಾವು ನೀರು, ಗಾಳಿ, ಮಣ್ಣು ಎಲ್ಲಾ ಜನರು ಹಂಚಿಕೊಂಡು ಬದುಕುವ ಸತ್ಯವನ್ನು ನೆನಪಿಡಬೇಕು. ನನ್ನ ಧರ್ಮ, ನಮ್ಮ ಜಾತಿಗಳು ಶ್ರೇಷ್ಠ ಮಾಡುವಾಗ ಇತರ ಜಾತಿಧರ್ಮವನ್ನು ಗೌರವದಿಂದ ನೋಡಲು ಕಲಿಯಬೇಕು. ಜಾತಿಧರ್ಮಗಳಿಗಿಂತ ಜೀವ ಒಂದು ಬದುಕಿಸುವುದು ಶ್ರೇಷ್ಠ ಕಾರ್ಯ ಎಂದು ಝೋನ್ ಹದಿನೈದರ ಹಿರಿಯ ತರಭೇತುದಾರ ಜೇಸಿ ರೇಮಂಡ್ ಡಿಕೂನಾ ತಾಕೊಡೆ ನುಡಿದರು. ಅವರು ಮೂಡುಬಿದಿರೆ ಜೈನ ಪ್ರೌಢಶಾಲಾ 125 ವಿಧ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ತರಭೇತಿಯನ್ನು ನೀಡಿ ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಶಾಮ್‌ಪ್ರಸಾದ್ ಕೆ. ತರಭೇತಿಯನ್ನು ಚಾಲನೆ ಮಾಡಿ ನಮ್ಮ ಸಂಸ್ಥೆಯ ನಲ್ವತ್ತು ವರ್ಷಗಳ ಹಳೆಯ ವಿದ್ಯಾರ್ಥಿ ಹಿರಿಯ ಪತ್ರಕರ್ತ, ಸಾಹಿತಿ ಆಗಿ ಸಾಧನೆ ಮಾಡಿ ಇಂದಿನ ವಿದ್ಯಾರ್ಥಿಗಳು ಅನುಸರಿಸುವ ರೀತಿಯಲ್ಲಿ ಬೆಳೆದ ಬಗ್ಗೆ ಹೆಮ್ಮೆ ಇದೆ ಎಂದರು.

ವಲಯ ತರಭೇತುದಾರರಾದ ಜೇಸಿ ನಿತೇಶ್ ಬಳ್ಳಾಳ್, ಜೇಸಿ ಅಜಿತ್ ಪ್ರಸಾದ್, ಜೇಸಿ ವಿನಯ ಚಂದ್ರ ತರಭೇತಿಯನ್ನು ಮುಂದುವರೆಸಿದರು. ಹಿರಿಯ ಶಿಕ್ಷಕ ವಿನಯಚಂದ್ರ ಸ್ವಾಗತಿಸಿದರು. ಶಿಕ್ಷಕಿ ವಿಜಯ ಪದ್ಮ ಸಹಕರಿದರು ಹಾಗೂ ಶಿಕ್ಷಕಿ ಮಾಧುರಿ ವಂದಿಸಿದರು.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page