September 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪುಣಚ ಪರಿಯಾಲ್ತಡ್ಕದಲ್ಲಿ ಸೌಹಾರ್ದ ಇಫ್ತಾರ್ ಸಂಗಮ

ಪುಣಚ ಪಿರ್ಸತ್ತೆ ಚಂಗಾಯಿಮಾರ್ ಪುಣಚ ಪ್ರೀತಿಯ ಗೆಳೆಯರು ಇವರ ಆಶ್ರಯದಲ್ಲಿ ರಂಝಾನ್ ಪ್ರಯುಕ್ತ ಬೃಹತ್ ಸೌಹಾರ್ದ ಇಫ್ತಾ ಕೂಟ ಮಾರ್ಚ್ 29ರಂದು ಶನಿವಾರ ಪುಣಚ ಪರಿಯಾಲ್ತಡ್ಕ ಜಂಕ್ಷನ್ ನಲ್ಲಿ ನಡೆಯಿತು.

ಪ್ರಗತಿಪರ ಕೃಷಿಕ ಜಯಶ್ಯಾಂ ನೀರ್ಕಜೆ ಮಾತನಾಡಿ ಪುಣಚ ಗ್ರಾಮವು ಸೌಹಾರ್ದತೆಯ ಗ್ರಾಮವಾಗಿದೆ. ಇದೇ ಮಾದರಿಯಲ್ಲಿ ಶಾಂತಿ ಸೌಹಾರ್ದತೆ ಎಲ್ಲಡೆ ನೆಲೆಗೊಳ್ಳಲಿ ಎಂದು ಆಶಿಸಿದರು. ಪುಣಚ ಪರಿಯಾಲ್ತಡ್ಕ ಜಮ್ಮ ಮಸೀದಿ ಅಧ್ಯಕ್ಶ ಎಂ.ಎಸ್. ಮಹಮ್ಮದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸೌಹಾರ್ದ ಇಫ್ತಾರ್ ಕೂಟದ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಶ್ರೀಧರ್ ಶೆಟ್ಟಿ ದೇವಗುಂಡಿ, ಉದಯ ಕುಮಾರ್ ದಂಬೆ, ಶ್ರೀಧರ್ ಶೆಟ್ಟಿ ಬೈಲುಗುತ್ತು, ರವಿಕಿರಣ್ ಆಜೇರು, ರಾಜೇಂದ್ರ ರೈ ಬೈಲುಗುತ್ತು, ಮೌರೀಸ್ ಟೆಲ್ಲಿಸ್, ಜಗನ್ನಾಥ ಶೆಟ್ಟಿ ಕೋಡಂದ್ರು, ಯೂಸುಪ್ ಗೌಸಿಯಾ ಸಾಜ ಹಾಗೂ ಪುಣಚ ಮಸೀದಿ ಧರ್ಮಗುರುಗಳು ಉಪಸ್ಥಿತರಿದ್ದರು.

ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಪುಣಚ ಪರಿಸರದ ಹಾಗೂ ವಿವಿಧ ಕಡೆಗಳಿಂದ ಹಲವಾರು ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದ ಬಾಂಧವರು ಭಾಗವಹಿಸಿದ್ದರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page