September 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಜ್ಪೆ ಚರ್ಚ್ ನ ಯುವಕ ಜೋಶ್ವಾ ಪಿಂಟೊ ಅಪಘಾತದಲ್ಲಿ ಮೃತ್ಯು

ಏಪ್ರಿಲ್ 20ರಂದು ಈಸ್ಟರ್ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ, ಮಂಗಳೂರಿನಿಂದ ತನ್ನ ಮಿತ್ರರೊಡನೆ ಕಾರಲ್ಲಿ ವಾಪಸ್ ಪೆರ್ಮುದೆಗೆ ಬರುವಾಗ, ಆಕಸ್ಮಿಕ ಅವಘಡ ಸಂಭವಿಸಿ ಬಜ್ಪೆ ಚರ್ಚ್ ನ ಯುವಕ 27 ವರ್ಷ ಪ್ರಾಯದ ಜೋಶ್ವಾ ಪಿಂಟೊ ಮೃತಪಟ್ಟಿದ್ದಾರೆ. ತನ್ನ ಕಾರಲ್ಲಿ ಮಿತ್ರರೊಂದಿಗೆ ಬರುವಾಗ ರಸ್ತೆಯಲ್ಲಿನ ಹೊಂಡಕ್ಕೆ ಕಾರು ಬಡಿದು, ನಿಯಂತ್ರಣ ಕಳೆದುಕೊಂಡು ತಿರುವಿನಲ್ಲಿ ಕಾರು ತಲೆಕೆಳಗಾಗಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ತನ್ನ ಸಮುದಾಯದಲ್ಲಿ ನಿಸ್ವಾರ್ಥ ಸೇವೆ ಮಾಡುವ ಜೋಶ್ವಾ ಪಿಂಟೊ ಬಜ್ಪೆ ಚರ್ಚ್ ನ ಸದಸ್ಯರಾಗಿದ್ದರು. ಆತನ ನಾಯಕತ್ವ ಗುಣಗಳಿಗೆ ಹಾಗೂ ಎಲ್ಲರೊಂದಿಗೆ ಸ್ನೇಹದಿಂದ ಇದ್ದ ಇವರನ್ನು ಚರ್ಚಿನವರೆಲ್ಲರೂ ಗೌರವಿಸುತ್ತಿದ್ದರು. ಆತನ ಆಕಸ್ಮಿಕ ಸಾವಿಗೆ ಎಲ್ಲಾ ಕಡೆಯಿಂದಲೂ ಸಂತಾಪ ಸೂಚಕಗಳು ಕುಟುಂಬಕ್ಕೆ ಹರಿದು ಬರುತ್ತಿವೆ. ಅವರ ಅಂತ್ಯಕ್ರಿಯೆಯು ನಾಳೆ ಏಪ್ರಿಲ್ 22ರಂದು ಮಂಗಳವಾರ ಸಾಯಂಕಾಲ 4 ಗಂಟೆಗೆ ಸಂತ ಜೋಸೆಫರ ದೇವಾಲಯ ಬಜಪೆಯಲ್ಲಿ ನಡೆಯಲಿದೆ.

You may also like

News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು
News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್

You cannot copy content of this page