August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ವಿಜೃಂಭಣೆಯ ಸ್ವಲಾತ್ ವಾರ್ಷಿಕ ಕಾರ್ಯಕ್ರಮ

ಅಹ್ಲ್ ಸುನ್ನತ್ ವಲ್ ಜಮಾ‌ಅತ್ ಮಾತ್ರ ಅಲ್ಲಾಹನ ಬಳಿ ಸ್ವೀಕರಿಸಲ್ಪಡುತ್ತದೆ. ನೂತನ ವಾದದೊಂದಿಗೆ ಸೇರಿ ಈಮಾನ್ ಕಳೆದುಕೊಳ್ಳಬೇಡಿ – ಉಲಮಾಗಳಿಂದ ಎಚ್ಚರಿಕೆಯ ಸಂದೇಶ

ಮಾಣಿ ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿ ಸೂರಿಕುಮೇರು ಇದರ ಸ್ವಲಾತ್ ವಾರ್ಷಿಕ ಮತ್ತು ಮತ ಪ್ರಭಾಷಣ ಕಾರ್ಯಕ್ರಮವು ಎಪ್ರಿಲ್ 19ರಂದು ಶನಿವಾರ ಹಾಗೂ 20ರಂದು ಆದಿತ್ಯವಾರ ನಡೆಯಿತು. ಪ್ರಮುಖ ವಾಗ್ಮಿಗಳಾದ ರಫೀಕ್ ಸ‌ಅದಿ ದೇಲಂಪಾಡಿ ಮತ್ತು ಹನೀಫ್ ನಿಝಾಮಿ ಮೊಗ್ರಾಲ್ ರವರು ಇಸ್ಲಾಂ ಧರ್ಮದಲ್ಲಿ ನೂತನವಾದಿಗಳು ಮತ್ತು ಪರಂಪರಾಗತ ಇಸ್ಲಾಂ ಧರ್ಮ ಎಂಬ ವಿಷಯಗಳನ್ನು ಮುಂದಿಟ್ಟು ಮಾತನಾಡಿ ಹೊಸ ಹೊಸ ವಾದಗಳೊಂದಿಗೆ ಸಾಮಾನ್ಯ ಜನರ ಬ್ರೈನ್ ವಾಶ್ ಮಾಡಿ ಈಮಾನ್ ಕಬಳಿಸುವ ನೂತನವಾದಿಗಳ ಸರ್ವ ವಾದಗಳಿಗೆ ಪುರಾವೆಗಳೊಂದಿಗೆ ವಿವರ ನೀಡಿದರು.

ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ನೂತನವಾದಿಗಳೊಂದಿಗೆ ಸೇರಿ ದೀನ್ ವಿಕೃತ ಗೊಳಿಸುವ ಅಪಾಯದ ಬಗ್ಗೆ ಪ್ರಭಾಷಣ ನಡೆಸಿದ ಬಳಿಕ ದುಆ ನೆರವೇರಿಸಿಕೊಟ್ಟರು. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಖತೀಬ್ ಹಸೈನಾರ್ ಸ‌ಅದಿ ಬದಿಯಡ್ಕ, ಸದರ್ ಮುಅಲ್ಲಿಂ ನಾಸಿರ್ ಸ‌ಅದಿ ನೇರಳಕಟ್ಟೆ, ಅಧ್ಯಾಪಕ ಹನೀಫ್ ಸ‌ಅದಿ ಸೆರ್ಕಳ, ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್, ಕೋಶಾಧಿಕಾರಿ ಯೂಸುಫ್ ಹಾಜಿ, ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್‌ ಹಮೀದ್, ಮುಹಮ್ಮದಾಲಿ ಮುಸ್ಲಿಯಾರ್, ಮುಸ್ತಫಾ ಸ‌ಅದಿ ಸೂರಿಕುಮೇರು ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಮದ್ರಸಾ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಿತು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page