August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಪೋಪ್ ಫ್ರಾನ್ಸಿಸ್ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಗೆ ಕರೆ 

ಕಿಸ್ತರ ಶಾಂತಿಯಲ್ಲಿ ವಿಶ್ರಾಂತಿ ಪಡೆದ ಕಥೊಲಿಕ ಕ್ರೈಸ್ತ ಸಮುದಾಯದ ಪರಮಪೂಜ್ಯ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥ ಏಪ್ರಿಲ್ 25ರಂದು ಶುಕ್ರವಾರ ಸಂಜೆ 5:00 ಘಂಟೆಗೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ಪೋಪ್ ಅವರಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಬಲಿಪೂಜೆಯನ್ನು ನಡೆಸಲಾಗುವುದು.

ಬಳಿಕ ಚರ್ಚ್ ಮೈದಾನದಲ್ಲಿ ಶೋಕ ಸಭೆಯು ನಡೆಯಲಿರುವುದು. ಮಂಗಳೂರು ಧರ್ಮಕ್ಷೇತ್ರ ಶೋಕ ವ್ಯಕ್ತಪಡಿಸುವ ಜೊತೆಗೆ ದೇವರ ಶಾಶ್ವತ ವಿಶ್ರಾಂತಿಗೆ ಕರೆಯಲ್ಪಟ್ಟ ಪೋಪ್ ಫ್ರಾನ್ಸಿಸ್ ರವರ ಜೀವನವನ್ನು ಪ್ರೇರಣೆಯಾಗಿ ಮುಂದುವರಿಸಲು ನಾವು ಒಟ್ಟಾಗೋಣ. ಸಮಸ್ತ ಜನರಿಗೆ ಭರವಸೆಯ ದಾರಿ ದೀಪವಾದ ಅವರು, ಅವರ ಸಂಪೂರ್ಣ ಬದ್ಧತೆಯ ಜೀವನಕ್ಕಾಗಿ ದೇವರು ಅವರಿಗೆ ಶಾಶ್ವತ ಪ್ರತಿಫಲವನ್ನು ನೀಡಲು, ಮಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಹಾಗೂ ಭಕ್ತಾದಿಗಳು ನಡೆಸುವ ಶ್ರದ್ಧಾಂಜಲಿ ಸಭೆಗೆ ಪೋಪರ ಸೇವೆ ಸ್ಮರಿಸಿ ಎಲ್ಲರೂ ಹಾಜರಿರಬೇಕೆಂದು ಮಂಗಳೂರು ಧರ್ಮಕ್ಷೇತ್ರದ ಪರವಾಗಿ ವಿನಂತಿಯನ್ನು ಮಾಡಲಾಗಿದೆ.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page