July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ಪುನರ್ ರಚನೆ 

ಅಧ್ಯಕ್ಷರಾಗಿ ಜಿ.ಎಂ. ಉಸ್ತಾದ್, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಸಯೀದ್ ಪುತ್ತೂರು, ಕೋಶಾಧಿಕಾರಿಯಾಗಿ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿ ಆಯ್ಕೆ

ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಸಮಿತಿ ಪುನರ್ ರಚನಾ ಸಭೆಯು ಎಪ್ರಿಲ್ 22ರಂದು ಮಂಗಳವಾರ ದಾರುಲ್ ಹುದಾ ಎಜುಕೇಶನ್ ಸೆಂಟರ್ ತಂಬಿನಮಕ್ಕಿ ಬೆಳ್ಳಾರೆಯಲ್ಲಿ  ನಡೆದ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಈಸ್ಟ್ ಜಿಲ್ಲಾಧ್ಯಕ್ಷರಾದ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸದಸ್ಯರಾದ ಅಸಯ್ಯಿದ್ ಎಸ್.ಎಂ. ತಂಞಳ್ ರವರು ದುಆ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ.ಎಂ. ಕಾಮಿಲ್ ಸಖಾಫಿರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಸದ್ರಿ ಸಂಸ್ಥೆಯ ಮ್ಯಾನೇಜರ್ ಬಹು ಖಲೀಲ್ ಹಿಮಮಿಯವರು ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವುರವರು ವರದಿ ಹಾಗೂ ಕಾರ್ಯದರ್ಶಿ ಕರೀಂ ಹಾಜಿ ಚೆನ್ನಾರ್ ರವರು ಲೆಕ್ಕ ಪತ್ರವನ್ನು ಮಂಡಿಸಿ ಸಭೆಯ ಅಂಗೀಕಾರ ಪಡೆದರು.

ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿಯವರು ಸಭೆಯ ಹಾಜರಾತಿ ಪರಿಶೀಲನೆ ಮಾಡಿದರು. ಕಳೆದ ಅವಧಿಯ ಕಾರ್ಯಕ್ರಮಗಳ ಫೋಟೋ, ಪೋಸ್ಟರ್ ಗಳ PDF ಬಿಡುಗಡೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಎಂ. ಸಾದಿಕ್ ಮಾಸ್ಟರ್ ಮಲೆಬೆಟ್ಟುರವರು ನಿರ್ವಹಿಸಿದರು. 2025-27ನೇ ಸಾಲಿನ ಸದಸ್ಯತನ ಹಾಗೂ ಪುನರಚನೆ ಮತ್ತು ನೂತನ ಸದಸ್ಯರ ಡೇಟಾ ಮಾಹಿತಿಯನ್ನು ಮೀಡಿಯಾ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ನಿರ್ವಹಿಸಿದರು.  ಸದಸ್ಯತ್ವ ಸಡಗರದ ಸದಸ್ಯರ ಗುರುತು ಚೀಟಿಗಳನ್ನು ಜಿಲ್ಲಾ ವ್ಯಾಪ್ತಿಯ ಆರು ಝೋನ್‌ಗಳಿಗೆ ಜಿಲ್ಲಾ ಉಪಾಧ್ಯಕ್ಷರಾದ ಕೆ.ಬಿ. ಕಾಸಿಂ ಹಾಜಿ ಮಿತ್ತೂರುರವರು ವಿತರಿಸಿದರು. ನಿರ್ಗಮನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿಯವರು ಮಾತನಾಡಿದರು. ಬಳಿಕ ಸಮಿತಿಯನ್ನು ವಿಸರ್ಜಿಸಲಾಯಿತು. ಚುನಾವಣಾ ಅಧಿಕಾರಿಯಾಗಿ ರಾಜ್ಯದಿಂದ ಆಗಮಿಸಿದ ಮೌಲಾನ ಎಸ್.ಪಿ. ಹಂಝ ಸಖಾಫಿ ಉಸ್ತಾದರು ಸಭೆಯ ನೇತೃತ್ವದಲ್ಲಿ 2025-27ನೇ ಸಾಲಿಗೆ 33 ಮಂದಿ ಸದಸ್ಯರನ್ನೊಳಗೊಂಡ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ರಚಿಸಿದರು. ಅಧ್ಯಕ್ಷರಾಗಿ ಜಿ.ಎಂ.ಎಂ. ಕಾಮಿಲ್ ಸಖಾಫಿ ಉಸ್ತಾದ್, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಸಯೀದ್ ಪುತ್ತೂರು, ಕೋಶಾಧಿಕಾರಿಯಾಗಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿರವರು ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಹಾಗೂ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ದ‌ಅ್ವಾ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಸಖಾಫಿ ಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಮಾಧ್ಯಮ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಸುಣ್ಣಮೂಲೆ, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಕೆ.ಇ. ಅಬೂಬಕ್ಕರ್ ನೆಲ್ಯಾಡಿ, ಆಂತರಿಕ ವ್ಯವಹಾರ ಕಾರ್ಯದರ್ಶಿಯಾಗಿ ಮುಹಮ್ಮದ್ ರಫಿ ಬೆಳ್ತಂಗಡಿ (ಮಾಜಿ ಸೈನಿಕರು), ಇಸಾಬಾ ಕಾರ್ಯದರ್ಶಿಯಾಗಿ ಇಕ್ಬಾಲ್ ಬಪ್ಪಳಿಗೆ, ಚಾರಿಟಿ ಕಾರ್ಯದರ್ಶಿಯಾಗಿ ಇಬ್ರಾಹಿಂ ಮುಸ್ಲಿಯಾರ್ ಎಸ್‌ಎಂಎಸ್ ರವರು ಆಯ್ಕೆಗೊಂಡರು.

ಸದಸ್ಯರಾಗಿ ಕೆ.ಬಿ. ಕಾಸಿಂ ಹಾಜಿ ಮಿತ್ತೂರು, ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಹನೀಫ್ ಹಾಜಿ ಇಂದ್ರಾಜೆ, ವೈ.ಕೆ. ಸುಲೈಮಾನ್ ಹಾಜಿ ಇಂದ್ರಾಜೆ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಉಮರ್ ಮುಸ್ಲಿಯಾರ್ ಮರ್ಧಾಳ, ಅಶ್ರಫ್ ಸಖಾಫಿ ಸವಣೂರು, ಉಮರ್ ತಾಜ್ ನೆಲ್ಯಾಡಿ, ಸಯ್ಯಿದ್ ಎಸ್.ಎಂ. ಕೋಯ ತಂಙಳ್ ಉಜಿರೆ, ಪಿ.ಯು. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಇಬ್ರಾಹಿಂ ಯು.ಎಂ. ಕಕ್ಕಿಂಜೆ, ಇಸ್ಮಾಯಿಲ್ ಉಲ್ತೂರು, ಹಮೀದ್ ಮುಸ್ಲಿಯಾರ್ ಗುರುವಾಯನಕೆರೆ, ಅಬ್ಬಾಸ್ ಬಟ್ಲಡ್ಕ, ಕಾಸಿಂ ಪದ್ಮುಂಜ, ಅಬ್ಬಾಸ್ ಮದನಿ ಬಂಡಾಡ್, ಕೆ.ಎಸ್. ಮುಹಮ್ಮದ್ ಹಾಜಿ ಕೆಮ್ಮಾನ್, ಉಸ್ಮಾನ್ ಹಾಜಿ ಸೆರ್ಕಳ ಹಾಗೂ ಅಬ್ದುಲ್ ಖಾದಿರ್ ಸಖಾಫಿ ಕಡಂಬು ಆಯ್ಕೆಯಾದರು.

ರಾಜ್ಯ ಕೌನ್ಸಿಲರುಗಳಾಗಿ ಜಿ.ಎಂ.ಎಂ. ಕಾಮಿಲ್ ಉಸ್ತಾದ್, ಯೂಸುಫ್ ಸಯೀದ್ ಪುತ್ತೂರು, ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಕೆ.ಬಿ. ಕಾಸಿಂ ಹಾಜಿ, ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಯೂಸುಫ್ ಹಾಜಿ ಗೌಸಿಯಾ, ಅಬ್ದುಲ್ ಜಲೀಲ್ ಮುಸ್ಲಿಯಾರ್ ಇರ್ದೆ, ಅಬೂಬಕ್ಕರ್ ಸ‌ಅದಿ ಮಜೂರು, ಅಬ್ಬಾಸ್ ಬಟ್ಲಡ್ಕ, ಪಿ.ಕೆ. ಮುಹಮ್ಮದ್ ಮದನಿ, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಇಬ್ರಾಹಿಂ ಫುರ್ಖಾನಿ ವಿಟ್ಲ, ಅಬ್ದುಲ್ ಖಾದಿರ್ ಸಖಾಫಿ ಕಡಂಬು, ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ಪಿ.ಯು. ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಾವೂರು, ಉಮರ್ ಮಾಸ್ಟರ್, ಅಬ್ಬೋನು ಮದ್ದಡ್ಕ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಹನೀಫ್ ಹಾಜಿ ಇಂದ್ರಾಜೆ, ಅಬ್ದುಲ್ ಹಮೀದ್ ಸುಣ್ಣಮೂಲೆ, ಉಮರ್ ಮುಸ್ಲಿಯಾರ್ ಮರ್ಧಾಳ, ಕೆ.ಇ. ಅಬೂಬಕ್ಕರ್ ನೆಲ್ಯಾಡಿ ಹಾಗೂ ಸುಲೈಮಾನ್ ಹಾಜಿ ನೆಲ್ಯಾಡಿ ಆಯ್ಕೆಗೊಂಡರು. ನೂತನ ಸಮಿತಿಗೆ ಕಡತಗಳ ಹಸ್ತಾಂತರ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಆರು ಝೋನುಗಳಿಂದ ಜಿಲ್ಲಾ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಸಮಿತಿ ವತಿಯಿಂದ ಅತಿಥಿಗಳಿಗೆ ಸ್ಮರಣಿಕೆ ನೀಡಲಾಯಿತು.  ಜಿಲ್ಲಾ ನೂತನ ಮಾಧ್ಯಮ ಕಾರ್ಯದರ್ಶಿ ಕೆ.ಎಂ. ಅಬ್ದುಲ್ ಹಮೀದ್ ಸುಣ್ಣಮೂಲೆಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. ನೂತನ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರುರವರು ಧನ್ಯವಾದವಿತ್ತರು.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page