September 20, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಇಂದು ಸಹಜ ಸ್ಥಿತಿಗೆ

ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆ ಮೇ 2ರಂದು ಶುಕ್ರವಾರ ಮಂಗಳೂರು ಬಂದ್ ಆಗಿತ್ತು. ಇಂದು ಮೇ 3ರಂದು ಶನಿವಾರ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ತಲುಪಿದೆ. ನಿನ್ನೆ ಸಂಜೆಯಿಂದಲೇ ಮಂಗಳೂರಿನ ವಿವಿಧೆಡೆಗಳಲ್ಲಿ ಕೆಲವೊಂದು ಅಂಗಡಿಗಳು ತೆರೆದಿದ್ದವು. ಶುಕ್ರವಾರ ಬಂದ್ ನ ಸರಿಯಾದ ಮಾಹಿತಿ ಇಲ್ಲದ ಕಾರಣ ಸಾಕಷ್ಟು ಜನರು ತೊಂದರೆಗೀಡಾಗಿದ್ದರು. ಸಂಜೆ ವೇಳೆ ಅಲ್ಲಲ್ಲಿ ತೆರೆದಿರುವ ಅಂಗಡಿಗಳಿಗೆ ಜನರು ಅಗತ್ಯ ವಸ್ತುಗಳಿಗಾಗಿ ಮುಗಿಬಿದ್ದ ದೃಶ್ಯ ಕಂಡು ಬಂದಿತ್ತು.

ಇಂದು ಬೆಳಗ್ಗಿನಿಂದಲೇ ಸರ್ಕಾರಿ ಮತ್ತು ಖಾಸಗಿ ಬಸ್ ಗಳು ಸಂಚಾರ ಆರಂಭಿಸಿದೆ. ಆಟೋ, ಟೆಂಪೋ ಸೇರಿದಂತೆ ಎಲ್ಲ ವಾಹನಗಳು ರಸ್ತೆಗಿಳಿದಿವೆ. ಶುಕ್ರವಾರದ ಬಂದ್ ವೇಳೆ ವಾಹನ ಸಂಚಾರ ಹೆಚ್ಚಾಗಿ ಇರಲಿಲ್ಲ, ಅಂಗಡಿಗಳು ಕೂಡ ತೆರೆದಿರಲಿಲ್ಲ. ನಿನ್ನೆ ಬಂದ್ ನಿಂದಾಗಿ ಸಾಕಷ್ಟು ಜನರು ತೊಂದರೆಗೀಡಾಗಿದ್ದರು. ಏಕಾಏಕಿ ಮಂಗಳೂರಿನಲ್ಲಿ ಬಂದ್ ಆಚರಿಸಿರುವುದಕ್ಕೆ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಗಲಾಟೆಗಳು ನಡೆಯಬಹುದು ಎನ್ನುವ ಭೀತಿಯಿಂದ ಸಾಕಷ್ಟು ಅಂಗಡಿಗಳ ಮಾಲಿಕರು ಅಂಗಡಿ ಬಂದ್ ಮಾಡಿರುವುದು ಕಂಡು ಬಂತು.

 

You may also like

News

ಸಾಣೂರು ಜಂಕ್ಷನ್‌ನಲ್ಲಿ ಮಾಜಿ ಸಚಿವ ರಮಾನಾಥ ರೈ ಕಾರಿಗೆ ಬಸ್ ಡಿಕ್ಕಿ – ಹಲವರಿಗೆ ಗಾಯ

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಘಟನೆ ಇಂದು ಸೆಪ್ಟೆಂಬರ್ 20ರಂದು ಭಾನುವಾರ ಕಾರ್ಕಳ–ಮೂಡುಬಿದಿರೆ
News

ಬಂಟ್ವಾಳ ಲೋಕ ಅದಾಲತ್ – 12,400 ಪ್ರಕರಣ ಇತ್ಯರ್ಥ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಂಟ್ವಾಳದ ಬಿ.ಸಿ. ರೋಡ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 19ರಂದು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 13,223 ಪ್ರಕರಣಗಳನ್ನು ಪರಿಗಣಿಸಿ,

You cannot copy content of this page