September 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ ಬರುವಷ್ಟರಲ್ಲಿ 7 ಲಕ್ಷದ ಚಿನ್ನ ನಾಪತ್ತೆ – ಪ್ರಕರಣ ದಾಖಲು

ಆಂಧ್ರಪ್ರದೇಶದ ನೆಲ್ಲೂರಿನ 47ವರ್ಷ ಪ್ರಾಯದ ಜೆ. ಲತಾ ಎಂಬವರು ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಲು ಬಾಡಿಗೆ ಇನ್ನೋವಾ ಕಾರಿನಲ್ಲಿ ಮೇ 2ರಂದು ನೆಲ್ಲೂರಿನಿಂದ ಹೊರಟು ಮೇ 3ರಂದು ಧರ್ಮಸ್ಥಳ ತಲುಪಿದ್ದರು. ದೇವರ ದರ್ಶನಕ್ಕೆ ಹೋಗುವ ಮೊದಲು ಜೆ. ಲತಾ ಅವರು ಕಾರ್ಯಕ್ರಮಕ್ಕೆ ಎಂದು ಜೊತೆಯಲ್ಲಿ ತಂದಿದ್ದ ಚಿನ್ನಭರಣಗಳಾದ ಬ್ರೇಸ್ ಲೆಟ್, ಚಿನ್ನದ ಚೈನ್, ನೆಕ್ಲೇಸ್ ಅನ್ನು ವ್ಯಾನಿಟಿಕ್ ಬ್ಯಾಗ್ ನ ಒಳಗಡೆ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು.

ದೇವರ ದರ್ಶನವನ್ನು ಮುಗಿಸಿ ಹೊರಡುವ ಸಮಯದಲ್ಲಿ ಬ್ಯಾಗನ್ನು ನೋಡಿದಾಗ ವ್ಯಾನಿಟಿಕ್ ಬ್ಯಾಗಿನ ಜಿಪ್ ತೆರೆದಿದ್ದು, ಆತಂಕದಿಂದ ಬ್ಯಾಗ್ ನ ಒಳಗಡೆ ನೋಡಿದಾಗ ಬ್ಯಾಗ್ ನ ಒಳಗಡೆ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಇಟ್ಟಿದ್ದ 97 ಗ್ರಾಮ್ ತೂಕದ ಚಿನ್ನಾಭರಣಗಳು ಕಳವಾಗಿದ್ದು ಗಮನಕ್ಕೆ ಬಂತು. ಕಳವಾದ ಚಿನ್ನದ ಒಟ್ಟು ಮೌಲ್ಯ ರೂಪಾಯಿ 6,79,000/- ಆಗಿರುತ್ತದೆ.

ಪಿರ್ಯಾಧಿದಾರರಾದ 47ವರ್ಷ ಪ್ರಾಯದ ಜೆ. ಲತಾ, ವಾಸ: ಶ್ರೀ ನಗರ ಕಾಲೋನಿ, ಸಾಯಿ ಹೃದಯ ಟೆಂಪಲ್ ಗೋಮತಿ ನಗರ ನೆಲ್ಲೂರು ಜಿಲ್ಲೆ ಆಂದ್ರಪ್ರದೇಶ ಎಂಬವರ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆ ಅ.ಕ್ರ.  17/2025 ಕಲಂ: 303(2) ಬಿಎನ್ ಎಸ್ 2023ಯಂತೆ ಪ್ರಕರಣ ದಾಖಲಾಗಿರುತ್ತದೆ.

You may also like

News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು
News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್

You cannot copy content of this page