August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾವೂರು ಉಳಿಯ ದ್ವೀಪಕ್ಕೆ ತೂಗು ಸೇತುವೆ ಮಂಜೂರು

ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಸ್ಪೀಕರ್ ಯು.ಟಿ. ಖಾದರ್ ರವರಿಗೆ ಕೃತಜ್ಞತೆ – ಸನ್ಮಾನ

ಪಾವೂರು ಉಳಿಯ ದ್ವೀಪದ ನಿವಾಸಿಗಳಿಗೆ ತೂಗು ಸೇತುವೆ ನಿರ್ಮಾಣ ಮಾಡುವಂತೆ ಕಳೆದ 18ವರ್ಷಗಳಿಂದ ನಿರಂತರವಾಗಿ ಸರಕಾರಕ್ಕೆ ಮನವಿಗಳನ್ನು ನೀಡಿ ಒತ್ತಾಯವನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮಾಡುತ್ತಾ ಬಂದಿತ್ತು. ಇದರ ಫಲವಾಗಿ ಹಲವಾರು ವರ್ಷಗಳ ತೂಗು ಸೇತುವೆಯ ಕನಸನ್ನು 12ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ಮೂಲಕ ನನಸು ಮಾಡಿದ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ರವರಿಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಮೇ 9ರಂದು ಶುಕ್ರವಾರ ಕೃತಜ್ಞತೆಯನ್ನು ಸಲ್ಲಿಸಿ ಸನ್ಮಾನವನ್ನು ಮಾಡಲಾಯಿತು.

ಪಾವೂರು ಉಳಿಯ ದ್ವೀಪದ ತೂಗು ಸೇತುವೆಗೆ 12ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ಮೂಲಕ ಸ್ಪೀಕರ್ ಯು.ಟಿ. ಖಾದರ್ ರವರು ನೀಡಿದ ಭರವಸೆ ಈಡೇರಿಸಿದಂತಾಗಿದೆ.

ಸನ್ಮಾನ ಮಾಡುವ ಸಂದರ್ಭದಲ್ಲಿ ವಂದನೀಯ ಫಾದರ್ ಜೆರಾಲ್ಡ್ ಲೋಬೊ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರೀಯ ಅಧ್ಯಕ್ಷ – ಆಲ್ವಿನ್ ಡಿಸೋಜ ಪಾನೀರ್, ನಿಕಟ ಪೂರ್ವ ಅಧ್ಯಕ್ಶ – ಸ್ಟ್ಯಾನಿ ಲೋಬೊ, ಕೇಂದ್ರೀಯ ಸಹ ಕಾರ್ಯದರ್ಶಿ – ಲವೀನ ಡಿಸೋಜ, ಮಾಜಿ ಅಧ್ಯಕ್ಷ – ಪಾವ್ಲ್ ರಾಲ್ಫಿ ಡಿಕೋಸ್ತ, ಕಾಸರಗೋಡು ವಲಯ ಅಧ್ಯಕ್ಷ – ಫ್ರಾನ್ಸಿಸ್ ಮೊಂತೇರೊ, ಸಿಟಿ ವಲಯ ಅಧ್ಯಕ್ಷ – ಅರುಣ್ ಡಿಸೋಜ, ಪೆಜಾರ್ ವಲಯ ಅಧ್ಯಕ್ಷ  – ಸಂತೋಷ್ ಡಿಸೋಜ ಬಜ್ಪೆ, ಬಂಟ್ವಾಳ ವಲಯ ಅಧ್ಯಕ್ಷ – ಜೋನ್ ಲಸ್ರಾದೊ, ಬೆಳ್ತಂಗಡಿ ವಲಯ ಅಧ್ಯಕ್ಶ – ಲಿಯೋ ರೊಡ್ರಿಗಸ್, ದಕ್ಷಿಣ ವಲಯ ಖಾಜಾಂಚಿ – ಫೆಲಿಕ್ಸ್ ಡಿಸೋಜ, ದೆರೆಬೈಲ್ ಘಟಕ ಅಧ್ಯಕ್ಷೆ – ವಿಲ್ಮಾ ಮೊಂತೇರೊ, ಮುಡಿಪು ಘಟಕ ಅಧ್ಯಕ್ಷ – ರಜತ್ ವೇಗಸ್ ಹಾಗೂ ನವೀನ್ ಡಿಸೋಜ ಉಪಸ್ಥಿತರಿದ್ದರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page