July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬೈ ಡ್ಯೂಟಿ ಫ್ರೀ ಮಿಲ್ಲೇನಿಯಂ ಮಿಲಿನಿಯರ್ ಲಾಟರಿಯಿಂದ ಕಾಸರಗೋಡು ನಿವಾಸಿಗೆ ಒಲಿಯಿತು 8.5 ಕೋಟಿ ರೂಪಾಯಿ

ದುಬೈ ಡ್ಯೂಟಿ ಫ್ರೀ ಮಿಲ್ಲೇನಿಯಂ ಮಿಲಿನಿಯರ್ ಲಾಟರಿ ಖರೀದಿಸಿರುವ ಕಾಸರಗೋಡು ನಿವಾಸಿಯೋರ್ವರಿಗೆ 8.5 ಕೋಟಿ ರೂಪಾಯಿ ಅದೃಷ್ಟ ಒಲಿದಿದೆ. ಸದ್ಯ ಯುಎಇ ಅಜ್ಮಾನ್‌ನಲ್ಲಿ ವಾಸವಾಗಿರುವ ವೇಣುಗೋಪಾಲ್ ಮುಲ್ಲಚ್ಚೇರಿ ಎಪ್ರಿಲ್ 23ರಂದು ದುಬೈ ವಿಮಾನ ನಿಲ್ದಾಣದ ಟರ್ಮಿನಲ್ -2ರ ಒಳಗಿರುವ ಡ್ಯೂಟಿ ಫ್ರೀ ಕೌಂಟರ್‌ನಲ್ಲಿ ಈ ಲಾಟರಿ ಟಿಕೇಟ್ ಖರೀದಿಸಿದ್ದರು. ನಿನ್ನೆ ಲಾಟರಿ ಡ್ರಾ ನಡೆದಿದ್ದು ವೇಣುಗೋಪಾಲ್ ಅವರಿಗೆ ದಾಖಲೆ ಮೊತ್ತದ ಅದೃಷ್ಟ ಒಲಿದಿದೆ.

ವೇಣುಗೋಪಾಲ್ ಅಜ್ಮಾನಿನ ವಾಣಿಜ್ಯ ಸಂಸ್ಥೆಯೊಂದರಲ್ಲಿ ಐಟಿ ಸಪೋರ್ಟ್ ಉದ್ಯೋಗಿ. ಇವರು ಕಳೆದ 15 ವರ್ಷಗಳಿಂದ ಡ್ಯೂಟಿ ಫ್ರೀ ಟಿಕೇಟುಗಳನ್ನು ಖರೀದಿಸಿ ಅದೃಷ್ಟ ಪರೀಕ್ಷಿಸುತ್ತಿದ್ದರು. “ಡ್ರಾ ದಿನದಂದು ದುಬೈ ಡ್ಯೂಟಿ ಫ್ರೀ ಫೇಸ್‌ಬುಕ್ ಫೇಜ್‌ನಲ್ಲಿ ವಿಜೇತರ ಆಯ್ಕೆಯನ್ನು ಲೈವ್ ನೋಡುತ್ತಿದ್ದರಂತೆ. ತನ್ನ ಟಿಕೇಟ್‌ನ ನಂಬರ್ ಅನೌನ್ಸ್ ಮಾಡಿದಾಗ ಏಕಾಏಕಿ ಭ್ರಮಾ ಲೋಕದಲ್ಲಿದ್ದೇನೆ ಎಂದು ಭಾವಿಸಿದ್ದರಂತೆ. ಡ್ಯೂಟಿ ಫ್ರೀ ಲಾಟರಿ ಸಂಸ್ಥೆಯಿಂದ ಅಧಿಕೃತ ಕರೆ ಬಂದಾಗ ವಿಶೇಷ ಸಂತೋಷವಾಯಿತು” ಎಂದು ವೇಣುಗೋಪಲ್ ಜಿಲ್ಲೆಯ ಮಾಧ್ಯಮಗಳಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

You may also like

News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ
News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು

You cannot copy content of this page