July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆಂಜೆಲೋರ್‌ ಚರ್ಚ್ ಪಾಲನಾ ಸಮಿತಿಯಿಂದ ‘ಪ್ರಕೃತಿಯಲ್ಲಿ ಒಂದು ದಿನ’  ಕಾರ್ಯಕ್ರಮ

ಮಂಗಳೂರಿನ ನಾಗುರಿಯಲ್ಲಿರುವ ಗಾರ್ಡಿಯನ್‌ ಏಂಜಲ್ಸ್‌ ಚರ್ಚ್, ಆಂಜೆಲೋರ್‌, ಇದರ ಚರ್ಚ್ ಪಾಲನಾ ಸಮಿತಿಯ ಸದಸ್ಯರು ‘ಪ್ರಕೃತಿಯಲ್ಲಿ ಒಂದು ದಿನ’ವನ್ನು ಬ್ರಹ್ಮಾವರದ ರಮಣೀಯ ತಾಣದಲ್ಲಿ ಕಳೆದರು.

ಚರ್ಚ್ ಗಳಲ್ಲಿ ಪ್ರತೀ ಮೂರು ವರ್ಷಗಳಿಗೊಮ್ಮೆ ಚರ್ಚ್ ಪಾಲನಾ ಸಮಿತಿಗೆ ಚುನಾವಣೆ ನಡೆಯುತ್ತಿದ್ದು, ಈ ಸಮಿತಿಯ ಸೇವಾವಧಿ  2025 ಡಿಸೆಂಬರ್ 31ರ ವರೆಗೆ ಇರುತ್ತದೆ. ‘ಪ್ರಕೃತಿಯಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಫೆಡ್ರಿಕ್‌ ಮೊಂತೇರೊ, ವಾಸ್ತವ್ಯ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಫೆರ್ನಾಂಡಿಸ್‌, ಚರ್ಚ್ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್‌, ಕಾರ್ಯದರ್ಶಿ ಲೊಲಿನಾ ಡಿಸೋಜ, ಸರ್ವ ಆಯೋಗಗಳ ಸಂಚಾಲಕಿ ರೆನಿಟಾ ಮಿನೇಜಸ್‌, ಕಪಿತಾನಿಯೋ ಕಾನ್ವೆಂಟಿನ ಸುಪೀರಿಯರ್‌ ಭಗಿನಿ ಪ್ರೆಸಿಲ್ಲಾ ಮಿನೇಜಸ್‌, ಬೆಲ್ವದೆರೆ ಕಾನ್ವೆಂಟಿನ ಸುಪೀರಿಯರ್ ಭಗಿನಿ ಸ್ಟೆಫಾನಿಯೋ ಕುವೆಲ್ಲೊ, ಕಾಸಾಗಯಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಪ್ರಮಿಳಾ ಡಿಸೋಜ ಮುಂತಾದವರು ಭಾಗವಹಿಸಿದ್ದರು.

ಈ ಪ್ರಕೃತಿ ಪ್ರವಾಸದ ಸಂದರ್ಭದಲ್ಲಿ ಪ್ರಕೃತಿಯ ಸೌಂದಯರ್ವನ್ನು ಸವಿಯುವುದರ ಜತೆಗೆ ಚರ್ಚ್ ನ ಸಮಗ್ರ ಏಳಿಗೆಗಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಇದೇ ವೇಳೆ ವಿವಿಧ ಆಟೋಟಗಳನ್ನು ಕೂಡಾ ಆಯೋಜಿಸಲಾಗಿತ್ತು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page