July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಡವರ ಏಳಿಗೆಗೆ ಸದಾ ಬದ್ಧ – ಸಿಎಂ ಸಿದ್ಧರಾಮಯ್ಯ

ಎಲ್ಲ ಜಾತಿ, ಧಮ೯ದವರ ಬಡವರನ್ನು ಸರಕಾರ ಮೇಲಕ್ಕೆತ್ತಲು ಸರಕಾರ ಹಲವಾರು ಕಾಯ೯ಕ್ರಮಗಳನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಏನೇ ಟೀಕೆಗಳು ಬಂದರೂ ಸರಕಾರ ಯೋಜನೆಗಳನ್ನು ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಅವರು ಮೇ 16ರಂದು ಶುಕ್ರವಾರ ಉಳ್ಳಾಲ ಸೈಯ್ಯದ್ ಮದನಿ ದಗಾ೯ ಉರೂಸ್ ಕಾಯ೯ಕ್ರಮದಲ್ಲಿ ಸಾಮಾಜಿಕ ಭಾವೈಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೇವರಾಜ ಅರಸು ನಂತರ ಕನಾ೯ಟಕದಲ್ಲಿ 5 ವಷ೯ ಪೂಣ೯ಗೊಳಿಸಿದ ಮುಖ್ಯಮಂತ್ರಿ ಎಂಬ ಕೀತಿ೯ ತನಗೆ ಹೆಮ್ಮೆ ಇದೆ. ಇದನ್ನು ಜನತೆಯ ಏಳಿಗೆಗೆ ಬಳಸುತ್ತಿದ್ದೇನೆ ಎಂದರು.

ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಸಮಾನ ಅವಕಾಶ ಒದಗಿಸಿ, ಎಲ್ಲರಿಗೂ ನ್ಯಾಯ ಒದಗಿಸಿದಾಗ ಸಂವಿಧಾನ ಯಶಸ್ಸು. ಇದೇ ಹಾದಿಯಲ್ಲಿ ಸರಕಾರ ನಡೆಯುತ್ತಿದೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು ಮುಖ್ಯಮಂತ್ರಿಗಳು ದಗಾ೯ ಭೇಟಿ ನೀಡಿದರು. ಸ್ಪೀಕರ್ ಯು.ಟಿ. ಖಾದರ್, ಉಳ್ಳಾಲ ಖಾಝಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮಾತನಾಡಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬಿ. ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ದಗಾ೯ ಅಧ್ಯಕ್ಷ ಹನೀಫ್ ಹಾಜಿ ಮತ್ತಿತರರು ಇದ್ದರು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page