August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ ಸಮೀಪದ ಹಳೀರ ನಿವಾಸಿ ಡ್ರೈವರ್ ಅಬುಬಕ್ಕರ್ ರವರು ನಿಧನ

ಮಾಣಿ ಇಲ್ಲಿನ ಸೂರಿಕುಮೇರು ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮಾಣಿ ಸಮೀಪದ ಹಳೀರ ನಿವಾಸಿಯಾಗಿರುವ ಕಬಡ್ಡಿ ಆಟಗಾರ ಮಜೀದ್, ಹಸೈನಾರ್ ಮತ್ತು ಹುಸೈನಾರ್, (ಅಚ್ಚೋನು – ಉಚ್ಚೋನು ) ಮಾಣಿ ಹೋಟೆಲ್ ಮಾಲಕ ಸಲೀಂ, ಮತ್ತು ಅಶ್ರಫ್ (ಈಚ) ಮತ್ತು ರಿಕ್ಷಾ ಚಾಲಕ ಹಮೀದ್ (ಅಮ್ಮಿ) ಹಾಗೂ ನೇರಳಕಟ್ಟೆ ನಿವಾಸಿ ಹನೀಫ್ ರವರ ತಂದೆ 85ವರ್ಷ ಪ್ರಾಯದ ಡ್ರೈವರ್ ಅಬುಬಕ್ಕರ್  ರವರು ಇಂದು ಜೂನ್ 10ರಂದು ಮಂಗಳವಾರ ಅವರ ಹಿರಿಯ ಮಗ ಹನೀಫ್ ರವರ ನೇರಳಕಟ್ಟೆಯ ಮನೆಯಲ್ಲಿ ನಿಧನರಾದರು. ಇವರು ಮಂಗಳೂರಿನ ವೈಎಂಕೆ ಪ್ರತಿಷ್ಠಿತ ಕಂಪೆನಿಯಲ್ಲಿ ಹಲವಾರು ವರ್ಷಗಳ ಕಾಲ ಲಾರಿ ಡ್ರೈವರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಮಾಣಿ ಸಮೀಪದ ನೇರಳಕಟ್ಟೆಯಲ್ಲಿರುವ ಅವರ ಹಿರಿಯ ಮಗ ಹನೀಫ್ ರವರ ಮನೆಯಲ್ಲಿ ಮಯ್ಯಿತ್ ಪರಿಪಾಲನಾ ಕಾರ್ಯಕ್ರಮ ನಡೆಯಲಿದೆ ಬಳಿಕ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಇಂದು ಸಂಜೆ ವೇಳೆಗೆ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page